You are currently viewing ನಿರುದ್ಯೋಗ ಯುವಕ ಯುವತಿಯರಿಗೆ ಇಲ್ಲಿದೆ ಸುವರ್ಣ ಅವಕಾಶ. ಮಾದ್ಯಮ ಕ್ಷೇತ್ರದಲ್ಲಿ ಆಗಲಿದೆ ಹೊಸ ಕ್ರಾಂತಿ.

ನಿರುದ್ಯೋಗ ಯುವಕ ಯುವತಿಯರಿಗೆ ಇಲ್ಲಿದೆ ಸುವರ್ಣ ಅವಕಾಶ. ಮಾದ್ಯಮ ಕ್ಷೇತ್ರದಲ್ಲಿ ಆಗಲಿದೆ ಹೊಸ ಕ್ರಾಂತಿ.

ಬೆಂಗಳೂರು: ದೇಶದಲ್ಲಿಯೇ ಅತಿದೊಡ್ಡ ‘ನ್ಯೂಸ್ನೆಟ್ವರ್ಕ್’ ಕಟ್ಟಲು ವೃತ್ತಿಪರರ ತಂಡವೊಂದು ಸಿದ್ದಗೊಂಡಿದೆ, ನೀವು ಕೂಡ ಆ ತಂಡದ ಸದಸ್ಯರಾಗುವ ಸುವರ್ಣ ಅವಕಾಶ ಇದೀಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ದೃಶ್ಯ ಮಾಧ್ಯಮದ ದಿಗ್ಗಜ ಎಂದೇ ಕರೆಸಿಕೊಂಡಿರುವ ಕೃಷ್ಣರಾಜ ಎಂ ಮಂಜುನಾಥ್ ಅವರು ಇಂತದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ನುರಿತ ವೃತ್ತಿಪರರ ತಂಡ ಮಂಜುನಾಥ್ ಅವರ ಬೆನ್ನಿಗೆ ನಿಂತಿದ್ದು ಎಲ್ಲಾ ಅಂದುಕೊಂಡಂತೆ ನಡೆದರೆ, ಒಂದೆರಡು ವಾರಗಳಲ್ಲಿ ರಾಜ್ಯ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಲ್ಲಿನ ಸುದ್ದಿಗಳ ಮೇಲೆ ಈ ಮಾದ್ಯಮ ಸಂಸ್ಥೆ ಬೆಳಕು ಚಲ್ಲಲಿದೆ. ಹೌದು ಹಲವು ಮಾಧ್ಯಮ ಸಂಸ್ಥೆಗಳನ್ನ ಕಟ್ಟಿ ಬೆಳಸಿದ ಕೃಷ್ಣರಾಜ  ಎಂ ಮಂಜುನಾಥ್​ ಅವರು ಇದೀಗ “ಮಿಡಿಯಾ ಯಾನ” ಎಂಬ ಹೊಸ ಮಾದ್ಯಮ ಸಂಸ್ಥೆಯೊಂದನ್ನ ಹುಟ್ಟುಹಾಕಿದ್ದಾರೆ. ಈಗಾಗಲೆ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಜಿಲ್ಲಾ ಪ್ರತಿನಿಧಿಗಳ ಆಯ್ಕೆ ಪ್ರಕೃಯೆ ಮುಗಿದಿದ್ದು. ಹೊಸತನ ಎಂಬಂತೆ, ಮಾದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವ ನಿರುದ್ಯೋಗ ಯುವಕ ಯುವತಿಯರ ಹುಡುಕಾಟವನ್ನ ಸಹ ನಡೆಸಿದ್ದಾರೆ.

ಹೌದು ಪ್ರತಿಯೊಂದು ಜಿಲ್ಲೆಗಳಲ್ಲಿ ಒಂದೊಂದು ಯೂನಿಟ್ ಕಟ್ಟುವ ಕನಸನ್ನ ಹೊಂದಿರುವ ಕೃಷ್ಣರಾಜ್ ಎಂ. ಮಂಜುನಾಥ ಅವರು, ಆಯಾ ಜಿಲ್ಲೆಗಳಲ್ಲೇ 30 ಜನ ಆಸಕ್ತರಿಗೆ, ತರಬೇತಿ ನೀಡುವ ಮೂಲಕ ಗಗನ ಕುಸುವಮಾಗಿರುವ ಮಾದ್ಯಮ ಕ್ಷೇತ್ರವನ್ನ ಆಸಕ್ತರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನ ಮಾಡಲು ಮುಂದಾಗಿದ್ದು ಈ ಮೂಲಕ ಮೀಡಿಯ ಯಾನವನ್ನ ಭಾರತದ ನಂ.1 ನ್ಯೂಸ್‌ ನೆಟ್‌ವರ್ಕ್‌ ಮಾಡುವ ಧ್ಯೇಯವನ್ನ ಹೊಂದಿದ್ದಾರೆ. 

ಸುಪ್ರೀಮ್‌ ಇಂಡಿಯ ಹ್ಯಾಪಿ ಇಂಡಿಯನ್ಸ್‌” ಅಂದರೆ “ಸರ್ವೋಚ್ಛ ಭಾರತ, ಸಂತುಷ್ಟ ಭಾರತೀಯ.” ಎಂಬ ಧ್ಯೇಯ ವಾಕ್ಯದೊಂದಿಗೆ ಮೀಡಿಯ ಯಾನ ಪ್ರಾರಂಬಿಸಿದ್ದು

ವಿಧ್ಯಾರ್ಹತೆಗೆ ಹೆಚ್ಚು ಆಧ್ಯತೆ ಕೊಡದೆ, ಜ್ಞಾನ, ಕೌಶಲ್ಯ, ಸಾಮರ್ಥ್ಯ ಹೊಂದಿರುವ ಗ್ರಾಮೀಣ ಪ್ರತಿಭೆಗಳ ಹುಡುಕಾಟ ನಡೆಸಿದ್ದು, ಈ ಕಾರಣಕ್ಕಾಗಿ ಮೀಡಿಯ ಯಾನ ಅಕಾಡೆಮಿಯನ್ನ ಕೂಡ ಪ್ರಾರಂಬಿಸಿದ್ದಾರೆ. ಆಸಕ್ತರಿಗೆ ತವರಲ್ಲೇ ತರಬೇತಿ ನೀಡಿ ಉದ್ಯೋಗ ಕೊಡುವ ಮೂಲಕ ಯುವ ಜನತೆಯ ಉದ್ಯೋಗಗಳ ಕೊರತೆ ನೀಗಿಸುವ ಪ್ರಯತ್ನಮಾಡುತಿದ್ದಾರೆ.

12-ತಿಂಗಳ “ಕರಿಯರ್‌ ಸರ್ಟಿಫಿಕೇಟ್‌ ಕೋರ್ಸ್‌ ಇನ್‌ ಇಂಟೆಗ್ರೇಟೆಡ್‌ ಮೀಡಿಯಾ & ಮಾರ್ಕೇಟಿಂಗ್”‌ (C3 M3) ಆರಂಭಿಸಿದ್ದು ಈ ಸಿ3ಎಂ3 (C3M3) ಕೋರ್ಸ್‌ನ ವೈಶಿಷ್ಟ್ಯಗಳು ಕೆಳಕಂಡಂತಿವೆ.

C3 M3 ಕೋರ್ಸ್‌ನ ಇಂಟೆಗ್ರೇಟೆಡ್‌ ಮೀಡಿಯ ಸೆಂಟರ್‌ (IMC)ಗಳು ಕರ್ನಾಟಕದಲ್ಲಿ 60 ಕಡೆ ಇರುತ್ತವೆ. ಹಲವು ಜಿಲ್ಲೆಗಳಲ್ಲಿ ಒಂದು ಸೆಂಟರ್‌ ಮತ್ತು ಕೆಲವು ಜಿಲ್ಲೆಗಳಲ್ಲಿ 2 ಸೆಂಟರ್‌ ಇರುತ್ತವೆ. ಬೆಂಗಳೂರು ನಗರದಲ್ಲಿ 15 ಕಡೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 8 ಕಡೆ ಇರುತ್ತವೆ.

ಇದರಿಂದಾಗಿ ಆಯಾಯ ಸ್ಥಳಗಳಲ್ಲೇ C3M3 ಕೋರ್ಸ್‌ ಅಧ್ಯಯನ ಮಾಡಲು ಅವಕಾಶ ಸಿಗಲಿದೆ.ಇದು “ಫೀಲ್ಡ್‌ ಟ್ರೈನಿಂಗ್‌” & “ಕರಿಯರ್-ಡ್ರಿವನ್”‌ ಆಧಾರಿತ ಕೋರ್ಸ್‌.ಪ್ರತಿ ಸೆಂಟರ್‌ನಲ್ಲಿ 30 ಅಭ್ಯರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

12 ತಿಂಗಳ ಈ C3M3 ಕೋರ್ಸ್‌ ಯಶಸ್ವಿಯಾಗಿ ಪೂರ್ಣಗೊಳಿಸಿದ ಮೇಲೆ, ಮೀಡಿಯ ಯಾನ ಸಂಸ್ಥೆಯಲ್ಲೇ ಪೂರ್ಣಾವಧಿ ಉದ್ಯೋಗ ಒದಗಿಸಲಾಗುತ್ತದೆ.

(A High-End, White-Collar Job Guaranteed). ಅಂತವರ ಆರಂಭಿಕ ವೇತನ ಅವರವರ ಕಲಿಕೆ, ಸಾಮರ್ಥ್ಯಾನುಸಾರ ರೂ.15 ಸಾವಿರದಿಂದ 21 ಸಾವಿರದವರೆಗೆ ಇರಲಿದೆ. ಒಂದೊಮ್ಮೆ ಅವರು ಈ 12 ತಿಂಗಳ C3M3 ಕೋರ್ಸ್‌ನಲ್ಲಿ ಸರಿಯಾಗಿ ಉತ್ತೀರ್ಣರಾಗದಿದ್ದಲ್ಲಿ ಮತ್ತೊಂದು ಬಾರಿ ಕೋರ್ಸ್‌ ಮಾಡಲು ಅವಕಾಶ ಇರುತ್ತದೆ. ಜೊತೆಗೆ C3M3 ಕೋರ್ಸ್‌ನಲ್ಲಿ ತೇರ್ಗಡೆ  ಹೊಂದಿದವರು, ಇನ್ನೂ ಹೆಚ್ಚಿನ ತರಬೇತಿ ಹೊಂದಬೇಕೆಂದರೆ, ಅವರಿಗೆ ಅಡ್ವಾನ್ಸ್‌ಡ್‌ C3M3 ಕೋರ್ಸ್‌ ಕೂಡ ಇರುತ್ತದೆ. ಇಲ್ಲಿ ವಿದ್ಯಾರ್ಹತೆಗಿಂತ ಪ್ರತಿಭೆ, ಹುಮ್ಮಸ್ಸು ಮುಖ್ಯ. ಅಭ್ಯರ್ಥಿಗಳು ಆಯ್ಕೆ ಆಗಲು ಇರುವ ಮಾನದಂಡ ಮೂರು – (ಅ) ಕನ್ನಡ ಬರವಣಿಗೆ ಹಾಗೂ ಮಾತು ಅದ್ಭುತವಾಗಿರಬೇಕು, ಕನ್ನಡ ಉಚ್ಚಾರವೂ ಸರಿ ಇರಬೇಕು. (ಬ) ಇಂಗ್ಲಿಷ್‌ ಅರ್ಥ ಮಾಡಿಕೊಂಡು, ಹೇಳುವಷ್ಟು ಇದ್ದರೆ ಸಾಕು. (ಕ) ಕಂಪ್ಯೂಟರ್‌ ಬಳಕೆ ಗೊತ್ತಿರಬೇಕು.

ಇಂತಹ ಅತಿ ಶ್ರೇಷ್ಠ ಮಟ್ಟದ ಕೋರ್ಸ್‌ ಮಾಡಲು ತಗಲುವ ಶುಲ್ಕ ಕೇವಲ ₹1 ಲಕ್ಷ + ₹18,000 (18% ಜಿಎಸ್‌ಟಿ) = ₹1,18,000/. ಈ ಮೊತ್ತವನ್ನು ಎರಡು ಕಂತುಗಳಲ್ಲಿಯೂ ಸಹ ಪಾವತಿಸಬಹುದಾಗಿದೆ. 

ಇದೇ ಕೋರ್ಸ್ ಇನ್ನಿತರ ಸಂಸ್ಥೆ ಗಳಲ್ಲಿ ಪೂರ್ಣಗೊಳಿಸಬೇಕಾದರೆ 20 ಲಕ್ಷ ರೂಪಾಯಿ ವರೆಗೆ ಕರ್ಚುಮಾಡಬೇಕಾಗುತ್ತದೆ, 3 ತಿಂಗಳ ಸೋಷಿಯಲ್‌ ಮೀಡಿಯ ಮಾರ್ಕೆಟಿಂಗ್‌ ಆನ್‌ಲೈನ್‌ ಕೋರ್ಸ್‌ಗೆ 5 ಲಕ್ಷ ರೂಪಾಯಿವರೆಗೂ ಶುಲ್ಕ ಇರುತ್ತದೆ. ಅದರ ಜೊತೆ ಬೆಂಗಳೂರಿಗೆ ಬಂದು ಅಧ್ಯಯನ ಮಾಡಬೇಕೆಂದರೆ ವೆಚ್ಚವೂ ಹೆಚ್ಚಿರುತ್ತದೆ. ಆದರೆ ಮೀಡಿಯ ಯಾನ ಅಕಾಡೆಮಿಯ ಸಾಮಾಜಿಕ ಕಳಕಳಿಯಿಂದ, ಬಡ ವಿಧ್ಯಾರ್ಥಿಗಳಿಗೆ ಬೀಳುವ ಆರ್ಥಿಕ ಹೊರೆಗೆ ಕತ್ತರಿ ಹಾಕಿದೆ. ಅದರಲ್ಲೂ ಆರ್ಥಿಕವಾಗಿ  ಕೆಳಸ್ಥರದಲ್ಲಿರುವ ಪ್ರತಿಭಾವಂತರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ, C3M3 ಕೋರ್ಸ್‌ ಪ್ರಾರಂಭಿಸಲಾಗಿದೆ ಎನ್ನುತ್ತಾರೆ ಕೆ.ಎಂ.ಮಂಜುನಾಥ ಅವರು.ಈಗ ಆಯ್ಕೆಯಾದ ಸಂದರ್ಭದಲ್ಲಿ ರೂ.50 ಸಾವಿರ ಮತ್ತು ನವೆಂಬರ್‌ 15, 2022 ರ ಒಳಗೆ ಎರಡನೆಯ ಕಂತು ರೂ.50 ಸಾವಿರ ಪಾವತಿಸಬೇಕಾಗುತ್ತದೆ.

ಪ್ರಕ್ರಿಯೆ :

ಮೊದಲು ನೀವು www.mediayaana.in ವೆಬ್‌ಸೈಟ್‌ನಲ್ಲಿ ಅಕಾಡೆಮಿ ಪೇಜ್‌ನಲ್ಲಿರುವ ಅರ್ಜಿ ತುಂಬಿ ಕಳಿಸಬೇಕು. ನಿಮ್ಮ ಸೆಂಟರ್‌ನ ಸರಿಯಾಗಿ ಆಯ್ಕೆ ಮಾಡಿ. ಅರ್ಜಿ ಹಾಕಿದೊಡನೆ ನಿಮ್ಮ ಇಮೇಲ್‌ಗೆ ಮೀಡಿಯ ಯಾನ ಕಡೆಯಿಂದ ಅಕ್ನಾಲೆಡ್ಜಮೆಂಟ್‌ ಬರಲಿದೆ. ಪ್ರತಿ ಸೆಂಟರ್‌ಗೆ ನೂರಾರು ಅರ್ಜಿಗಳು ಬರುತ್ತವೆ.

ಅದರಲ್ಲಿ ಸೂಕ್ತ ವ್ಯಕ್ತಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್‌ನಲ್ಲಿರುವ ಪ್ರತಿ ಅಭ್ಯರ್ಥಿಗೆ ವಿಡಿಯೋ ಕರೆ ಮಾಡಿ ಸಂದರ್ಶನ ಮಾಡಲಾಗುತ್ತದೆ. ಪ್ರತಿ ಸೆಂಟರ್‌ನಲ್ಲಿ, ಅತ್ಯಂತ ಸೂಕ್ತ 60 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಮಾಡಲಾಗುತ್ತದೆ. ಮತ್ತು ಪ್ರತಿಯೊಬ್ಬರಿಗೂ ಇಮೇಲ್‌ ಮೂಲಕ ತಿಳಿಸಲಾಗುತ್ತದೆ.

ಅಂತಿಮ ಪಟ್ಟಿಯ ಸೆಲೆಕ್ಟೆಡ್‌ ಲಿಸ್ಟ್‌ನಲ್ಲಿಯ 60 ಅಭ್ಯರ್ಥಿಗಳ ಪೈಕಿ ಮೊದಲ 30 ಮಂದಿ ಯಾರು ಶುಲ್ಕ ಪಾವತಿಸುತ್ತಾರೋ ಅಂತವರನ್ನ ಕಂಪ್ಯೂಟರ್‌ ಆಟೋಮ್ಯಾಟಿಕ್‌ ಆಗಿ ಪರಿಗಣಿಸುತ್ತದೆ ಮತ್ತು ಆ ಸೆಂಟರ್‌ ಲಾಕ್‌ ಮಾಡಿಬಿಡುತ್ತದೆ.

C3M3 ಕೋರ್ಸ್‌ ಭಾರತದಾದ್ಯಂತ ನವಂಬರ್‌ 21, 2022 ರಂದು ಆರಂಭವಾಗಲಿದೆ. ನಿಮ್ಮ ಜೀವನಕ್ಕೆ ಹೊಸ ದಿಶೆಯಾಗುವ, ನಿಮ್ಮನ್ನ ಸಮಗ್ರ ಮೀಡಿಯ ಪ್ರೊಫೆಷನಲ್‌ ಮಾಡುವ ಹಾಗೂ ನಿಮ್ಮ ಸ್ಥಳದಲ್ಲೇ ಶ್ರೇಷ್ಠ ಉದ್ಯೋಗ ಖಾತರಿ ಮಾಡುವ C3M3 ಕೋರ್ಸ್‌ಗೆ www.mediayaana.in ನಲ್ಲಿ ಅರ್ಜಿ ಹಾಕಿ. 30 ಜನರಲ್ಲಿ ಆಯ್ಕೆ ಆಗುವಂತಾಗಿ, ಜೀವನದಲ್ಲಿ ಸೆಟ್ಲ್‌ ಆಗಿ! 

ಕೃಷ್ಣರಾಜ ಎಂ. ಮಂಜುನಾಥರವರು ಮೀಡಿಯ ಯಾನ ಸ್ಥಾಪಕರು, ಮುಖ್ಯಸ್ಥರಾಗಿದ್ದಾರೆ. ಇವರು ಬಡತನವನ್ನ ಚೆನ್ನಾಗಿಯೇ ಬಲ್ಲಂತವರು. 29ನೇ ವಯಸ್ಸಿನಲ್ಲಿಯೇ ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದವರು. ಅಸಿಸ್ಟಂಟ್‌ ಕಮಿಷನರ್‌ ಹುದ್ದೆಯಲ್ಲಿ ಇದ್ದವರು. ಅದೇ ಹುದ್ದೆಯಲ್ಲೇ ಮುಂದುವರಿದಿದ್ದರೆ ಪ್ರಸ್ತುತ ಜಂಟಿ ಕಮಿಷನರ್‌ ಹುದ್ದೆಗೆ ಭಡ್ತಿಯಾಗಿರುತಿದ್ದರು. 

“ಸರ್ವೋಚ್ಛ ಭಾರತ ಸಂತುಷ್ಟ ಭಾರತೀಯ” ಧ್ಯೇಯ ಹೊಂದಿರುವ ಮೀಡಿಯ ಯಾನ ನಿರ್ಮಾಣಕ್ಕಾಗಿ ಅಂತಹ ಬಹು ಬೇಡಿಕೆಯ ಹುದ್ದೆಗೆ  ರಾಜೀನಾಮೆ ನೀಡಿ ಹೊರ ಬಂದು, ಬಡ ಉದ್ಯೋಗ ಆಕಾಂಕ್ಷಿಗಳ ಆಶಾ ಕಿರಣ ಆಗಿದ್ದಾರೆ.