You are currently viewing ಗಂಡನ ಮನೆಯಿಂದ ತವರು ಮನೆಗೆ ಬಂದಷ್ಟೇ ಖುಷಿ ಆಯ್ತು, ಶಶಿಕಲಾ ಜೊಲ್ಲೆ.

ಗಂಡನ ಮನೆಯಿಂದ ತವರು ಮನೆಗೆ ಬಂದಷ್ಟೇ ಖುಷಿ ಆಯ್ತು, ಶಶಿಕಲಾ ಜೊಲ್ಲೆ.

ವಿಜಯನಗರ..ಹಂಪಿಯಲ್ಲಿಂದು ನಡೆದ  ಶ್ರೀ ಪುರಂದರದಾಸರ ಆರಾಧನೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ‌ ಬಾಗವಹಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲೆ ಜೊಲ್ಲೆ ಹೇಳಿದ ಮಾತಿದು.

ಹೌದು ಹಂಪಿಯಲ್ಲಿಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಒಂದು ರೀತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಕಲಾ ಶ್ರೀಮಂತಿಕೆ ಅನಾವರಣಗೊಂಡಂತಿತ್ತು. ಮುಜರಾಯಿ,ಹಜ್ ಮತ್ತು ವಕ್ಪ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಆಗಮಿಸುತ್ತಲೇ ನಂದಿಧ್ವಜ, ನಾದಸ್ವರ, ಕಹಳೆವಾದನ ಹಾಗೂ ಡೊಳ್ಳು ಕುಣಿತ ತಂಡಗಳ ಮೂಲಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ದೇವಸ್ಥಾನದ ಲಕ್ಷ್ಮೀ ಆನೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೂಮಾಲೆ ಹಾಕಿ ಸ್ವಾಗತಿಸಿತು.
ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮ ವೈವಿಧ್ಯಮಯ ಪೂರ್ಣವಾಗಿತ್ತು.ಮಂಜಪ್ಪ ಮತ್ತು ಅವರ ತಂಡದ ನಂದಿಧ್ವಜ, ಎಂ.ವೀರೇಶ ಮತ್ತು ತಂಡದ ನಾದಸ್ವರ, ಕೆ.ಶರಣಪ್ಪ‌ ಮತ್ತು ತಂಡದ ಕಹಳೆವಾದನ, ನಗರದ ಬಸಪ್ಪ ಮತ್ತು ತಂಡದ ಡೊಳ್ಳುಕುಣಿತ ಗಮನಸೆಳೆಯಿತು.
ಸ್ಥಳೀಯ ಕಲಾವಿದರಾದ ಕೆ.ಶಿರೀಷಾ, ವಸಂತಕುಮಾರ ಜೋಗಿ, ಅಮಾತಿ‌ ಬಸವರಾಜ, ಕೆ.ಕಲ್ಯಾಣಿ, ಶ್ವೇತಾಲಕ್ಷ್ಮೀ, ಜಿ.ಎಂ.ಭಾಗ್ಯ, ಜಯತೀರ್ಥ ಜಹಗೀರದಾರ, ಎಂ.ಎಂ.ಸೋಮಶೇಖರಯ್ಯ, ಪಾಲಾಕ್ಷ,ಮಾರುತಿರಾವ್, ಸಂಗೀತ,ಜೆ.ಚಿನ್ಮಯ, ಸಾಯಿ ಶೃತಿ.ಎ.ಡಿ.ವಿ.ರಾವ್ ಅವರು ಪುರಂದರದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

ನಂತರ ಸುಜಯ್ ಮತ್ತು ಅವರ ತಂಡ,ಇಮ್ತಿಯಾಜ್ ಅಲಿ ಮತ್ತು ಸಂಗಡಿಗರು, ರಾಘವೇಂದ್ರ ಸಂಗೀತ ಸೇವಾ ಟ್ರಸ್ಟ್, ಕೆ.ಸಿ.ಸುಂಕಣ್ಣ ಮತ್ತು ತಂಡದಿಂದ ನಡೆದ ಸಮೂಹ ನೃತ್ಯ ಗಮನ ಸೆಳೆಯಿತು.
ಆದಿತಿ ಪ್ರಹ್ಲಾದ ಮತ್ತು ತಂಡ, ರೇಖಾ‌ ಮತ್ತು ತಂಡ, ಸಮರ್ಥ ಅಂಗಡಿ ಅವರು ದಾಸರ‌ ಪದಗಳನ್ನು ಪ್ರಸ್ತುತಪಡಿಸಿದರು.
ಸುಗಮ ಸಂಗೀತ,ಶಿಲ್ಪಾ ಮತ್ತು ತಂಡದ ಜಾನಪದ ನೃತ್ಯ, ಸುಗುಣ ಮತ್ತು ತಂಡದ ಶಾಸ್ತ್ರೀಯ ನೃತ್ಯ,ಕೊಳಲುವಾದನ, ಭರತ ನಾಟ್ಯ, ಏಕತಾರಿ ಪದಗಳ ಪ್ರದರ್ಶನ ಗಮನ ಸೆಳೆಯಿತು.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

https://youtu.be/hyF5aXMUTuM