ತೆಪ್ಪದಲ್ಲಿ ತೇಲಿದ ಗಣಿ ಗೆಳೆಯರು.

ವಿಜಯನಗರ… ಕಳೆದವಾರ ಸಚಿವ ಶ್ರೀರಾಮುಲು ಮತ್ತು ಆನಂದ್ ಸಿಂಗ್ ಹಂಪಿಯ ತುಂಗಭದ್ರ ನದಿಯ ತೆಪ್ಪದಲ್ಲಿ ತೇಲುವ ಮೂಲಕ ವೀಕೆಂಡ್ ಮೂಡಲ್ಲಿ ತೇಲಿ ದೊಡ್ಡ ಸುದ್ದಿಯಾಗಿದ್ರು.
ಇದೀಗ ಅದೇ ಹಾದಿಯಲ್ಲಿ ತನ್ನ ಕುಚುಕು ಗೆಳೆಯ ಜನಾರ್ಧನ ರೆಡ್ಡಿಯವರನ್ನ ಕರೆದುಕೊಂಡು ಸಂಚರಿಸಿದ್ದಾರೆ, ಕಳೆದ ಎರಡು ದಿನಗಳ ಹಿಂದೆ ಹಂಪಿಯಲ್ಲಿ ಪೂಜಾ ಕಾರ್ಯ ನೆರವೇರಿಸಿದ ಶ್ರೀರಾಮುಲು ಜನಾರ್ಧನ ರೆಡ್ಡಿ, ನಂತರ ತಮ್ಮ ಸಂಗಡಿಗರೊಂದಿಗೆ ತೆಪ್ಪದಲ್ಲಿ ಸಂಚರಿಸಿದ್ದಾರೆ.

ಹಂಪಿಯ ಕೋದಂಡರಾಮಸ್ವಾಮಿ ದೇವಸ್ಥಾನದ ಮುಂಬಾಗದ ನದಿಯಲ್ಲಿ ಸಂಚರಿಸಿರುವ ಜನಾರ್ಧನ ರೆಡ್ಡಿ ರಾಮುಲು, ಹಾಗೂ ಮಾಜಿ ಸಂಸದ ಜೆ ಶಾಂತ ಮತ್ತು ಬೆಂಬಲಿಗರು ಕೆಲವೊತ್ತು ವಾಯು ವಿಹಾರ ನಡೆಸಿದ್ದಾರೆ. ನಂತರ ತುಂಗಭದ್ರ ನದಿ ದಾಟಿ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಆಂಜನೇಯಸ್ವಾಮಿ ದರ್ಶನ ಪಡೆದಿದ್ದಾರೆ. ಕಳೆದ 10 ದಿನಗಳ ಹಿಂದ ಸಚಿವ ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಜಾಲಿರೈಡ್ ಮಾಡಿದ್ದು ಕೂಡ ಇದೇ ಸ್ಥಳದಲ್ಲಿ.
ಹಂಪಿಯಲ್ಲಿರುವ ಈ ಅಪರೂಪದ ಬಿದಿರಿನ ತೆಪ್ಪಗಳತ್ತ ಇದೀಗ ಎಲ್ಲರ ಚಿತ್ತ ಹರಿದಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.