You are currently viewing ಸ್ವ ಪಕ್ಷದ ಸಚಿವರ ವಿರುದ್ದ ಸಿಡಿದೆದ್ದ ಬಳ್ಳಾರಿ ರೆಡ್ಡಿಗಾರು.

ಸ್ವ ಪಕ್ಷದ ಸಚಿವರ ವಿರುದ್ದ ಸಿಡಿದೆದ್ದ ಬಳ್ಳಾರಿ ರೆಡ್ಡಿಗಾರು.

ಬಳ್ಳಾರಿ..ತಮ್ಮ ಪೊನ್ ಕಾಲ್ ರೀಸಿವ್ ಮಾಡದ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಬಳ್ಳಾರಿ ಶಾಸಕ ಸೋಮಶೇಕರ ರೆಡ್ಡಿ ಕೆಂಡಮಂಡಲವಾಗಿದ್ದಾರೆ, ಬಳ್ಳಾರಿ ನಗರಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸೋಮಶೇಕರ ರೆಡ್ಡಿಯವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ, ಕೆಲ ಸಚಿವರು ಆಕಾಶದಿಂದ ಬಿದ್ದವರಂತೆ ವರ್ತನೆ ಮಾಡ್ತಾರೆ, ಸುಧಾಕರ್ ಗೆ ಐದು ಸಲ ಫೋನ್ ಮಾಡಿದ್ರು ರೀಸಿವ್ ಮಾಡಿಲ್ಲ. ಮೆಸೆಜ್ ಮಾಡಿದ್ರೂ ರಿಫ್ಲೈ ಮಾಡಿಲ್ಲ.ಕೆಲ ಮಿನಿಸ್ಟರ್ ಕುತ್ತಿಗೆ ವರೆಗೂ ಅಹಂಕಾರ ಬಂದು ಬಿಟ್ಟಿದೆ,ಅವರಿಗೆ ಮುಖ್ಯಮಂತ್ರಿಗಳು ಬುದ್ದಿ ಹೇಳ ಬೇಕು ಎಂದು ಆಕ್ರೋಶದ ಮಾತುಗಳನ್ನ ಆಡಿದ್ದಾರೆ.

ಅದಲ್ಲದೆ ಇನ್ನೂ ಕೆಲ ಸಚಿವರು,ಅಧಿಕಾರಿಗಳು‌ ನಮ್ಮ ಫೋನ್ ಎತ್ತುತ್ತಿಲ್ಲ. ಎಂ.ಬಿ.ಬಿ.ಎಸ್. ಸೀಟ್ ವಿಚಾರದಲ್ಲಿ 88 ವಿದ್ಯಾರ್ಥಿಗಳಿಗೆ ತೊಂದರೆ ಆಗಿತ್ತು.ಅದರ ಬಗ್ಗೆ ಕಾಲ್ ಮಾಡಿದ್ರೆ ಸುಧಾಕರ್ ಕಾಲ್ ರೀಸಿವ್ ಮಾಡಲ್ಲ.ಕಾಂಗ್ರೆಸ್ ನಿಂದ ಬಂದ ಎಲ್ಲಾ ಸಚಿವರು ನಮ್ಮ‌ ಕಾಲ್ ರೀಸಿವ್ ಮಾಡ್ತಾರೆ. ಆದ್ರೆ ಸುಧಾಕರ್ ನಮ್ಮ ಕಾಲ್ ರೀಸಿವ್ ಮಾಡಲ್ಲ.ಅವರು ಮೇಲಿಂದ ಡೈರೆಕ್ಟ್ ಮಿನಿಸ್ಟರ್ ಆದವರ ತರಹ ಮಾತಾಡ್ತಾರೆ ಎಂದ ಸೋಮಶೇಖರ್ ರೆಡ್ಡಿ ಸುಧಾಕರ ವಿರುದ್ದ ಹರಿಹಾಯ್ದಿದ್ದಾರೆ.

ಕಲ್ಯಾಣ ಕರ್ಣಾಟಕದ ವಿಧ್ಯಾರ್ಥಿಗಳಿಗೆ ಎಮ್ ಬಿ ಬಿ ಎಸ್ ಹಾಗು ಎಂ ಡಿ ಸೀಟ್  ಕಡಿತ ಮಾಡಲಾಗಿತ್ತು.ಈ ವಿಚಾರವಾಗಿ ನಿನ್ನೆ ಸಿಎಂ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಿದ್ದೆವು. ಸಿಎಂ ಅವರೇ 30 ಸೆಕೆಂಡ್ ನಲ್ಲಿ ಕೆಲಸ ಮಾಡಿಕೊಟ್ಟರು.ಆದ್ರೇ ಸಚಿವ ಸುಧಾಕರ್ ಮಾತ್ರ ನಮ್ಮ ಪೊನ್ ಕರೆ ಸಹ ಸ್ವೀಕಾರ ಮಾಡಲಿಲ್ಲ.ಸಚಿವ ಸುಧಾಕರ್ ಸಿ. ಎಂ ಅವರಿಗಿಂತ ದೊಡ್ಡವರಾ ಎಂದು ರೆಡ್ಡಿಗಾರು ಪ್ರಶ್ನಿಸಿದ್ದಾರೆ.ಅದಲ್ಲದೆ ಇವರ ವರ್ತನೆಯ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಈ ಮೂಲಕ ನಾ ಮನವಿ ಮಾಡುವೆ ಎಂದಿದ್ದಾರೆ ಸೋಮಶೇಖರ ರೆಡ್ಡಿಯವರು.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ

https://youtu.be/vGyoSHeMcUA