You are currently viewing ಬೈಕ್ ಮಾಲೀಕನಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ. ಎ.ಸಿ.ಬಿ.ಬಲೆಗೆ.

ಬೈಕ್ ಮಾಲೀಕನಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ. ಎ.ಸಿ.ಬಿ.ಬಲೆಗೆ.

ಬಳ್ಳಾರಿ… ಬೈಕ್ ಚಾಲಕನಿಂದ ಹತ್ತು ಸಾವಿರ ಲಂಚ ಪಡೆಯುತಿದ್ದ ಕಂಪ್ಲಿಯ ಕ್ರೈಂ ಪಿ.ಎಸ್.ಐ ಬಸ್ಸಪ್ಪ ಲಮಾಣಿ ರೆಡ್ ಹ್ಯಾಂಡಾಗಿ ಬಳ್ಳಾರಿಯ ಎ.ಸಿ.ಬಿ.ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎ.ಸಿ.ಬಿ.ಎಸ್.ಪಿ. ಶ್ರೀಹರಿಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಬಳ್ಳಾರಿಯ ಎ.ಸಿ.ಬಿ.ಡಿ.ಎಸ್ಪಿ.ಹಾಗೂ ಸಿ.ಪಿ.ಮತ್ತು ಪಿ.ಎಸ್.ಐ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು.

1) CR NO : 02/2022 U/s 7 (a) PC Act 1988 (ತಿದ್ದುಪಡಿ ಕಾಯಿದೆ- 2018) ಕಾಯ್ದೆ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡು ಪಿ.ಎಸ್.ಐ.ಬಸ್ಸಪ್ಪ ಅವರನ್ನ ಬಂದಿಸಲಾಗಿದೆ.

ಕಂಪ್ಲಿಯ ನಾರಾಯಣ ಸ್ವಾಮಿ s/o M. ಬುಗ್ಗಯ್ಯ, ಎಂಬುವವರು ದೂರುದಾರರಾಗಿದ್ದು ತಮ್ಮ ಬೈಕನ ಎಲ್ಲಾ ದಾಖಲೆಗಳು ಸರಿ ಇದ್ದರು ಹತ್ತು ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಲಂಚಬಾಕ ಪಿ.ಎಸ್.ಐ.ಬಸ್ಸಪ್ಪ, ಈ ಸಂಭಂದ ಎ.ಸಿ.ಬಿ.ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ದೂರುದಾರರು.

ಹಾಗಾಗಿ ಸರಿಯಾದ ಜಾಲ ಬೀಸಿ ಮಿಕವನ್ನ ಬಲೆಗೆ ಕೆಡವಿಕೊಳ್ಳುವಲ್ಲಿ ಇಂದು ಎ.ಸಿ.ಬಿ.ಅಧಿಕಾರಿಗಳು ಯಶ್ವಿಯಾಗಿದ್ದಾರೆ.ಹತ್ತು ಸಾವಿರ ಹಣವನ್ನ ಒಂದೇ ಕಂತಿನಲ್ಲಿ ಕೊಡುವುದು ಕಷ್ಟವಾಗುತ್ತೆ, ಎರಡು ಕಂತುಗಳಲ್ಲಿ ಹಣವನ್ನ ಕೊಡುವುದಾಗಿ ಒಪ್ಪಿದ್ದ ದೂರುದಾರ ಮೊದಲ ಕಂತಿನಲ್ಲಿ ಐದು ಸಾವಿರ ಹಣದೊಂದಿಗೆ ಎ.ಸಿ.ಬಿ.ಅಧಿಕಾರಿಗಳನ್ನ ಕರೆದೊಯ್ದು ಹಳ್ಳಕ್ಕೆ ಬೀಳಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ.ಹಂಪಿ ಮಿರರ್ ವಿಜಯನಗರ.