You are currently viewing ಶಾಲಾ ಆವರಣದಲ್ಲಿದ್ದ ಶ್ರೀಗಂದಕ್ಕೆ ಖನ್ನಾ ಹಾಕಿದ ಖದೀಮರು.

ಶಾಲಾ ಆವರಣದಲ್ಲಿದ್ದ ಶ್ರೀಗಂದಕ್ಕೆ ಖನ್ನಾ ಹಾಕಿದ ಖದೀಮರು.

ಧಾರವಾಡ್…ನಿನ್ನೆ ತಡರಾತ್ರಿ ಶಾಲಾ ಆವರಣದಲ್ಲಿರುವ ಶ್ರೀಗಂಧದ ಮರವನ್ನ ಕಡಿದಿರುವ ಪ್ರಕರಣ ಬೆಳಕಿಗೆ‌ ಬಂದಿದೆ.ಮರದ ಕೆಳಬಾಗದ ಬೆಲೆಬಾಳುವ ಕಾಂಡವನ್ಮ ಹೊತ್ತೊಯ್ದಿರುವ ಖದೀಮರು ರೆಂಬೆ ಕೊಂಬೆಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಶಾಲೆಯ ಆವರಣದಲ್ಲಿ ವಾಯು ವಿಹಾರಕ್ಕೆ ಬಂದ ಸ್ಥಳೀಯರು ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ, ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಶಿಕ್ಷಕರು ಗಾಬರಿಗೊಂಡು ಶ್ರೀಗಂಧ ಮರ ಕಳ್ಳತನವಾಗಿರುವ ವಿಷಯವನ್ನ.

ವಿದ್ಯಾಗಿರಿ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ‌ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಶಾಲೆಯ ಶಿಕ್ಷಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದ್ದಾರೆ, ದಾರವಾಡ ನಗರದ ಹೃದಯ ಬಾಗದಲ್ಲಿರುವ ಶಾಲೆಯ ಆವರಣದಲ್ಲಿದ್ದ ಶ್ರೀಗಂಧದ ಮರವನ್ನ ಯಾವ ಭಯ ಇಲ್ಲದೆ ಕಡಿದು ಸಾಗಿಸಿರುವುದು ನಗರದ ಜನತೆಯನ್ನ ಬೆಚ್ಚಿ ಬೀಳುವಂತೆಮಾಡಿದೆ.

ವರದಿ..ಸುಬಾನಿ ಪಿಂಜಾರ. ವಿಜಯನಗರ.