You are currently viewing ನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ವಿಜಯನಗರ… ನಿನ್ನೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಮತ್ತು ಕೆ.ಎಸ್.ಪಿ.ಎಲ್ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ಗಲಾಟೆ ಇಂದು ಮತ್ತೆ ಮೂರು ಕಾಲೇಜಿಗೆ ಹಬ್ಬಿಕೊಂಡಿದೆ. ನಗರದ ಕೆ.ಎಸ್.ಪಿ.ಎಲ್ ಕಾಲೇಜು ಹಾಗೂ ವಿ.ಎನ್.ಸಿ.ಮತ್ತು ಟಿ.ಎಂ.ಇ. ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರಾರಂಭವಾಗಿದೆ. ಇಂದು ಬೆಳಗ್ಗೆ ವಿಧ್ಯಾರ್ಥಿನೀಯರು ಶಾಲೆ ಕಾಲೇಜಿಗೆ ಹಾಜರಾಗುತಿದ್ದಂತೆ ಕಾಲೇಜಿನ ಪ್ರಿನ್ಸಿಪಲ್ ಹಿಜಾಬ್ ತೆರವುಗೊಳಿಸಿ ತರಗತಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಆದರೆ ವಿಧ್ಯಾರ್ಥಿನೀಯರು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಿನ್ಸಿಪಲ್ ತರಗತಿಯಿಂದ ವಿಧ್ಯಾರ್ಥಿನೀಯರನ್ನ ಹೊರ ಉಳಿಸಿದ್ದಾರೆ. ಈ ವಿಷಯ ವಿಧ್ಯಾರ್ಥಿನೀಯರ ಪೊಷಕರಿಗೆ ತಿಳಿದು ಕಾಲೇಜಿಗೆ ಬೇಟಿ ನೀಡಿ ಕಾಲೇಜಿನ ಪ್ರಿನ್ಸಿಪಲ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.ಇನ್ನು ಯತಾ ಪದ್ದತಿಯಂತೆ ಪೊಲೀಸರು ಕೂಡ ಸ್ಥಳಕ್ಕೆ ಬೇಟಿ ನೀಡಿ ವಿವಾದಿತರ ಮದ್ಯ ಪ್ರವೇಶಿಸಿ ಶಾಂತಿ ಕಾಪಾಡಲು ಮುಂದಾಗಿದ್ದಾರೆ.

ಇನ್ನು ಹಿಜಾಬ್ ತೆಗೆದು ತರಗತಿಗೆ ಬರುವುದಾದರೆ ತರಗತಿಯೊಳಗೆ ಸೇರಿಸಿಕೊಳ್ಳುವುದಾಗಿ ನಗರದ ಕೆ.ಎಸ್.ಪಿ.ಎಲ್. ಕಾಲೇಜಿನ ಆಡಳಿತ ಮಂಡಳಿ ಹೇಳುತ್ತಿದೆ, ಕಾಲೇಜಿನ ಪ್ರನ್ಸಿಪಲ್ ಮಾತಿಗೆ ಒಪ್ಪಿದ ಕೆಲವು ವಿಧ್ಯಾರ್ಥಿನೀಯರು ಹಿಜಾಬ್ ತೆಗೆದು ತರಗತಿ ಪ್ರವೇಶ ಮಾಡಿದ್ದರೆ, ಇನ್ನೂ ಕೆಲವು ವಿಧ್ಯಾರ್ಥಿನೀಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ ಎಂದು ಹಠ ಹಿಡಿದು ಕಾಲೇಜಿನ ಹೊರಗಡೆಯೇ ನಿಂತಿದ್ದಾರೆ. ಈ ಹಿಂದಿನಿಂದಲೂ ನಾವು ಹಿಜಾಬ್ ಧರಿಸಿ ಕಾಲೇಜಿಗೆ ಬರುತಿದ್ದೆವು, ಆಗ‌ ಇಲ್ಲದ ಇವರ ನಿಯಮಗಳು ಈಗ ಯಾಕೆ ಬಂದಿವೆ ಎಂದು ವಿಧ್ಯಾರ್ಥಿನೀಯರು ಪ್ರಶ್ನಿಸುತಿದ್ದಾರೆ.

ಇನ್ನು ಹೊಸಪೇಟೆ ನಗರದಲ್ಲಿ ಈ ಹಿಂದೆ ಇರದ ಈ ಹಿಜಾಬ್ ವಿವಾದ ಈಗ ಯಾಕೆ ದುತ್ತೆಂದು ತಲೆ ಎತ್ತಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.ಈ ವಿವಾದ ಈಗ ಹುಟ್ಟಿಕೊಳ್ಳಲು ಇಲ್ಲಿನ ವಿಧ್ಯಾರ್ಥಿನೀಯರು ಕಾರಣನಾ ಅಥವಾ ಕಾಲೇಜಿನ ಪ್ರಿನ್ಸಿಪಲ್ ಗಳು ಕಾರಣ ಎನ್ನುವ ಪ್ರಶ್ನೆ ಕೂಡ ಎಲ್ಲರನ್ನ ಕಾಡುತ್ತಿದೆ. ಒಂದು ವೇಳೆ ಈ ಹಿಜಾಬ್ ವಿವಾದ ಪ್ರಾರಂಭವಾದ ಮೇಲೆ ಈ ಹಿಂದೆ ಹಿಜಾಬ್ ದರಿಸದ ವಿಧ್ಯಾರ್ಥಿನೀಯರು ಇದೀಗ ಉದ್ದೇಶ ಪೂರ್ವಕವಾಗಿ ಹಿಜಾಬ್ ಧರಿಸಿ ತರಗತಿಗೆ ಹಾಜರಾದರೆ ಅದ್ದು ತಪ್ಪಾಗುತ್ತೆ ಎಂದು ಬಳ್ಳಾರಿಯ ಡಿ.ಡಿ. ಪಿ.ಯು ಅವರು ಮಾತನಾಡಿದ ಆಡಿಯೊ ನಿನ್ನೆ ಎಲ್ಲರಿಗೂ ಗೊತ್ತಿದೆ. ಇನ್ನು ಈ ಮೊದಲು, ಅಂದರೆ ಹಿಜಾಬ್ ವಿವಾದ ಹುಟ್ಟಿಕೊಳ್ಳುವ ಮೊದಲು ಹಿಜಾಬ್ ಧರಿಸಿ ಯಾವ ವಿಧ್ಯಾರ್ಥಿನೀಯರು ಪ್ರತಿದಿನ ತರಗತಿಗೆ ಹಾಜರಾಗುತ್ತಿದ್ದರು ಅಂತವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಥಿಯೊಸಾಫಿಕಲ್ ಕಾಲೇಜಿನ ಪ್ರಿನ್ಸಿಪಲ್ ಅವರಿಗೆ ನಿನ್ನೆ ಬಳ್ಳಾರಿ ಡಿಡಿಪಿಯು ಸೂಚನೆ ನೀಡಿದ್ದರು.

ಆದರೆ ಧಕ್ಷಿಣ ಕನ್ನಡದಲ್ಲಿ ಕೆಲವು ಶಾಲೆಗಳಿಗೆ ನೀಡಿದ ನ್ಯಾಯಾಲಯದ ಆದೇಶವನ್ನ ತಾವೂ ಕೂಡ ಪಾಲನೆ ಮಾಡುತ್ತೇವೆ ಎಂದಿರುವ ಥಿಯೊಸಾಫಿಕಲ್ ಕಾಲೇಜಿನ ಪ್ರಿನ್ಸಿಪಲ್ ಜಗದೀಶ್ ಅವರು ಹಿಜಾಬ್ ಧರಿಸಿದ ವಿಧ್ಯಾರ್ಥಿನೀಯರಿಗೆ ತರಗತಿಗೆ ಅವಕಾಶ ನೀಡಲಿಲ್ಲ. ಹೀಗಿರುವಾಗ ಈ ವಿವಾದವನ್ನ ತಣ್ಣಗೆ ಮಾಡಲು ಇಲ್ಲಿನ ಪೊಲೀಸ್ ಇಲಾಖೆ ವಿಧ್ಯಾರ್ಥಿನೀಯರು ಮತ್ತು ಅವರ ಪೊಷಕರನ್ನ ಮನವಲಿಸುವ ಹಲವು ಪ್ರಯತ್ನಗಳನ್ನ ಮಾಡುತ್ತಿದೆ ಎನ್ನುವುದನ್ನ ಕೂಡ ಹಲ್ಲಗಳೆಯುವ ಹಾಗಿಲ್ಲ. ಹೀಗಿದ್ದರೂ ಇಲ್ಲಿನ ಕಾಲೇಜಿನ ಪ್ರನ್ಸಿಪಲ್ ಗಳು ಈ ಹಿಂದೆ ವಿಧಿಸದ ಕಟ್ಟಳೆಗಳನ್ನ ಈಗ ಯಾಕೆ ವಿಧಿಸುತಿದ್ದಾರೆ ಎನ್ನುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಒಂದು, ಇಂದು ನಾಲ್ಕು, ನಾಳೆ ಇನ್ನೂ ಎಷ್ಟು ಕಾಲೇಜುಗಳಲ್ಲಿ ಈ ವಿವಾದ ಹುಟ್ಟಿಕೊಳ್ಳುತ್ತೊ ಗೊತ್ತಿಲ್ಲ, ಶಿಕ್ಷಣ ಸಂಸ್ಥೆಗಳು ಮನಸ್ಸು ಮಾಡಿದರೆ, ಈ ವಿವಾದ ತಮ್ಮ ಶಿಕ್ಷಣ ಸಂಸ್ಥೆಯ ಗೇಟಿನ ಆಚೆ ಬರದೆ ನೋಡಿಕೊಳ್ಳುವ ಬುದ್ದಿ ಶಕ್ತಿ ಅವರಿಗೆ ಇದೆ. ಹೀಗಿದ್ದರು ಈ ವಿವಾದ ಬುಗಿಲೇಳುತ್ತಿದೆ. ಹಾಗಾಗಿ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜಂಟಿ ತನಿಖೆ ನಡೆಸುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯ ಬೇಕಿದೆ.ಪ್ರತಿಯೊಂದು ಖಾಸಗಿ ಶಾಲೆಗಳಲ್ಲಿ ಸಿ.ಸಿ.ಟಿ.ವಿ.ಕ್ಯಾಮರಗಳಿವೆ, ಅವುಗಳನ್ನ ಪರಿಸೀಲನೆ ನಡೆಸಿದ್ದೇ ಆದರೆ ಸತ್ಯಾಂಶ ಏನೆಂದು ಬಯಲಿಗೆ ಬೀಳುತ್ತದೆ. ಈ ಹಿಜಾಬ್ ವಿವಾದ ಹುಟ್ಟಿಕೊಳ್ಳುವ ಮುಂಚೆ ತಮ್ಮ ಧರ್ಮ ಪಾಲನೆ ಪದ್ದತಿಯಂತೆ ಹಿಜಾಬ್ ಧರಿಸಿ ಪ್ರತಿದಿನ ತರಗತಿಗೆ ಹಾಜರಾಗುತಿದ್ದ ವಿಧ್ಯಾರ್ಥಿನೀಯರು ಯಾರು.

ಇನ್ನು ಈ ಹಿಜಾಬ್ ವಿವಾದ ಹುಟ್ಟಿದ ಮೇಲೆ ಉದ್ದೇಶ ಪೂರ್ವಕವಾಗಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವವರು ಯಾರು. ಮತ್ತು ಇದೇ ವಿವಾದವನ್ನ ಮುಂದೆ ಇಟ್ಟುಕೊಂಡ ಕಾಲೇಜಿನ ಪ್ರನ್ಸಿಪಲ್ ಗಳು ಈ ಹಿಜಾಬ್ ವಿವಾದ ಹುಟ್ಟಿಕೊಳ್ಳುವ ಮುಂಚೆಯೂ ಹಿಜಾಬ್ ಧರಿಸಿ ಕಾಲೇಜಿಗೆ ಬರುತಿದ್ದ ವಿಧ್ಯಾರ್ಥಿನೀಯರ ಹಿಜಾಬನ್ನ ಈಗ ಯಾಕೆ ತೆಗೆಸಬೇಕೆಂದು ಉದ್ದೇಶ ಪೂರ್ವಕವಾಗಿ ನಿಂತಿದ್ದಾರೆ ಎಂದು ತಿಳಿಯುತ್ತದೆ.ಈ ರೀತಿಯ ತಪಾಸಣೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕಿದೆ.

ವರದಿ.. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.