You are currently viewing ಇಸ್ಪಿಟ್ ಅಡ್ಡಾಗಳ ಮೇಲೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿಗಳು ಜೈಲಿಗೆ.

ಇಸ್ಪಿಟ್ ಅಡ್ಡಾಗಳ ಮೇಲೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿಗಳು ಜೈಲಿಗೆ.

ವಿಜಯನಗರ.. (ಹೊಸಪೇಟೆ) ದಕ್ಷ ಪೊಲೀಸ್ ಅಧಿಕಾರಿಯೊಬ್ಬ ತಮ್ಮ ಇಲಾಖೆಯ ಬ್ರಷ್ಟ ಸಿಬ್ಬಂದಿಗಳಿಗೆ ಬಿಸಿಮುಟ್ಟಿಸಿದ ಸುದ್ದಿ ಇದು.

ಹೌದು ಹೊಸ ವಿಜಯನಗರ ಜಿಲ್ಲೆ ಉದಯ ಆದ ಮೇಲೆ ಏನೆಲ್ಲ ಬದಲಾವಣೆ ಆಗಿದೆಯೊ ಇಲ್ಲ ಗೊತ್ತಿಲ್ಲ, ಆದ್ರೆ ಹೊಸ ಜಿಲ್ಲೆಯ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಂತೂ ಬದಲಾವಣೆ ಗಾಳಿ ಬೀಸುತ್ತಿದೆ. ಇದಕ್ಕೆ ಕಾರಣ ಹೊಸ ಜಿಲ್ಲೆಗೆ ಪೊಲೀಸ್ ವರಿಷ್ಠಾದಿಕಾರಿಯಾಗಿ ನೇಮಕ ಗೊಂಡಿರುವ ಡಾಕ್ಟರ್ ಅರುಣ್ ಕುಮಾರ್ ಕೆ.

ಹೌದು  ಅರುಣ್ ಕುಮಾರ್ ಹೆಸರು ಕೇಳುತಿದ್ದಂತೆ ಪೊಲೀಸ್ ಇಲಾಖೆಯ ಕೆಲ ಬ್ರಷ್ಟ ಸಿಬ್ಬಂದಿಗಳಿಗೆ ತನ್ನಿಂತಾನೆ ಬೆವರು ಕಿತ್ತು ಬರೋದಕ್ಕೆ ಸುರು ಆಗಿದೆ.

ಇದಕ್ಕೆ ಕಾರಣ, ಅವರ ಜನ ಪರ ಕಾಳಜಿ, ಹೌದು ಕಳೆದ ಎರಡು ದಿನಗಳಿಂದ ದೀಪಾವಳಿ ಹಬ್ಬವನ್ನ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಕೆಲ ಜೂಜು ಕೋರರು ಈ ಶುಭ ದಿನದಂದೇ ತಮ್ಮ ಜೂಜಾಟದ ಚಟವನ್ನ ರಸ್ತೆಗೆ ಇಳಿಸಿದ್ದಾರೆ.

 ನಗರದ ಕೆಲವು ಪ್ರದೇಶಗಳ ನಡು ರಸ್ತೆಯಲ್ಲೇ ಚಾಪೆ ಹಾಸಿಕೊಂಡು ರಾಜಾ ರೋಷವಾಗಿ ಇಸ್ಪಿ ಆಟ ಜೋರಾಗಿ ಆಡುವುದಕ್ಕೆ ಪ್ರಾರಂಬಿಸಿದ್ದಾರೆ. 

ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಬ್ರಷ್ಟ ಪೊಲೀಸ್ ಸಿಬ್ಬಂದಿಗಳು, ಒಂದೊಂದು ಇಸ್ಪಿಟ್ ಅಡ್ಡದಿಂದ ಸಾವಿರ ಎರಡು ಸಾವಿರ ಲಂಚದ ಹಣ ವಸೂಲಿಮಾಡುವ ಮೂಲಕ ತಮ್ಮ ಬ್ರಷ್ಟತೆ ಮೆರೆದಿದ್ದಾರೆ. ಲಂಚ ಕೊಡದ ಕೆಲವು ಕಡೆಗಳಲ್ಲಿ ದಾಳಿ ನಡೆಸುವ ಪೊಲೀಸ್ ಸಿಬ್ಬಂದಿಗಳು, ದಾಳಿಯಲ್ಲಿ ಸಿಕ್ಕ ಹಣವನ್ನ ಪೊಲೀಸ್ ಇಲಾಖೆಯ ಗಮನಕ್ಕೆ ತಾರದೆ ತಮ್ಮ ಜೇಬಿಗೆ ಇಳಿಸಿಕೊಳ್ಳುವ ಪ್ರಕರಣ ಕೂಡ ಬೆಳಕಿಗೆ ಬರುತ್ತಿವೆ.

 ಅಂತದ್ದೇ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಅಮಾನತ್ತು ಆಗುವುದಲ್ಲದೆ, ತಾವು ಕೆಲಸಮಾಡುವ ಪೊಲೀಸ್ ಠಾಣೆಯಲ್ಲೇ ಅಪರಾದದ ಆರೋಪಿಯಾಗಿ ಜೈಲಿಗೆ ತಳ್ಳಲ್ಪಟ್ಟಿದ್ದಾರೆ. ಹೌದು ಹೊಸಪೇಟೆ ನಗರದ ಛಲವಾದಿ ಕೇರಿಯಲ್ಲಿ ಇದೇ ತಿಂಗಳು 23/10/2022ರ ಮದ್ಯರಾತ್ರಿ ಇಸ್ಪಿಟ್ ಆಟ ಆಡುವ ಮಾಹಿತಿ ತಿಳಿದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳು,ಇಸ್ಪಿಟ್ ಅಡ್ಡಾದ ಮೇಲೆ ದಾಳಿ ನಡೆಸಿದ್ದಾರೆ, ದಾಳಿಯ ವೇಳೆ 20ಸಾವಿರ ನಗದು ಸೇರಿದಂತೆ ಒಂದು ಮೊಬೈಲ್ ಕೂಡ ವಶಕ್ಕೆ ಪಡೆದಿದ್ದಾರೆ. ಆದರೆ ಕಾರ್ಯಾಚರಣೆಯ ವರದಿಯನ್ನ ಪೊಲೀಸ್ ಠಾಣೆಯಲ್ಲಿ ದಾಖಲುಮಾಡಿಲ್ಲ. ಅದರ ಪರಿಣಾಮ ತೊಟ್ಟ ಖಾಕಿ ಬಟ್ಟೆಯನ್ನ ಬಿಚ್ಚಿ ಜೈಲಿಗೆ ಹೋಗಿದ್ದಾರೆ.

ಹೌದು ಹೊಸಪೇಟೆಯ ಬಾಣದಕೇರಿಯಲ್ಲಿ ವಾಸವಾಗಿರುವ ವೆಂಕಟೇಶ್ ಎಂಬ ವ್ಯಕ್ತಿ ಮಾರನೆ ದಿನ ಬೆಳಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ಬಂದು ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ವಶಕ್ಕೆ ಪಡೆದಿರುವ ಮೊಬೈಲ್ ಹಿಂಪಡೆಯಲು ಮುಂದಾಗಿದ್ದಾರೆ, ಆದರೆ ಮೊಬೈಲೂ ಇಲ್ಲ, ಇತ್ತ ದಾಳಿಯ ದಾಖಲೆಯೂ ಠಾಣೆಯಲ್ಲಿ ಇಲ್ಲ, ಹೀಗಿರುವಾಗ ನಿನ್ನೆ ಇಸ್ಪಿಟ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದು ಪೊಲೀಸರೊ ಅಥವಾ ವಂಚಕರೋ ಎಂದು ಪತ್ತೆ ಹಚ್ಚುವಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ, ದೂರ ಆಧರಿಸಿದ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡು ವಿಚಾರಣೆ ಮುಂದುವರೆಸಿದಾಗ ತಮ್ಮ ಠಾಣೆಯ ನಾಲ್ಕು ಜನ ಸಿಬ್ಬಂದಿಗಳಾದ

ಮಹೇಶ್, ಅಭಿಶೇಕ್,ಮಂಜುನಾಥ, ಶ್ರೀಕಾಂತ್.ಎಂದು ತಿಳಿದು ಬಂದಿದೆ,

ವರದಿಯ ಅನುಸಾರ ದಿಟ್ಟ ನಿರ್ಧಾರ ತೆಗೆದುಕೊಂಡ ವಿಜಯನಗರ ಎಸ್ಪಿ ಅರುಣ್ ಕುಮಾರ್ ಕೆ. ಈ ನಾಲ್ವರು ಸಿಬ್ಬಂದಿಗಳ ವಿರುದ್ದ ವಂಚನೆ ಪ್ರಕರಣ ದಾಖಲಿಸಲು ಆದೇಶಮಾಡುವುದರ ಜೊತೆಗೆ ಕೂಡಲೆ ಈ ನಾಲ್ವರನ್ನ ಅಮಾನತ್ತುಮಾಡಿ ಆದೇಶ ಹೊರಡಿಸಿದ್ದಾರೆ. ಸದ್ಯಕ್ಕೆ ಈ ನಾಲ್ವರು ಪೊಲೀಸ್ ಸಿಬ್ಬಂದಿಗಳು ನ್ಯಾಯಾಂಗ ಬಂದನದಲ್ಲಿ ಇದ್ದು, ಇನ್ನೂ ಕೆಲ ಬ್ರಷ್ಟ ಪೊಲೀಸ್ ಸಿಬ್ಬಂದಿಗಳು ಬಲಿಯಾಗುವ ಮುನ್ಸೂಚನೆ ವಿಜಯನಗರ ಜಿಲ್ಲೆಯಲ್ಲಿದೆ.ಸದ್ಯಕ್ಕೆ ವಿಜಯನಗರ ಎಸ್ಪಿ ಅರುಣ್ ಕುಮಾರ್ ಕೆ. ಅವರ ಕಾರ್ಯ ವೈಖರಿ ಜಿಲ್ಲೆಯ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದ್ದರೆ ಇಂತಾ ಅಧಿಕಾರಿ ಇರಬೇಕು ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.