You are currently viewing ಅಲ್ಪಸಂಖ್ಯಾತ ಸಮುದಾಯದ ನನ್ನನ್ನ ತುಳಿಯುವ ಹುನ್ನಾರ ನಡೆಯುತ್ತಿದೆ. ಆನಂದ್ ಸಿಂಗ್.

ಅಲ್ಪಸಂಖ್ಯಾತ ಸಮುದಾಯದ ನನ್ನನ್ನ ತುಳಿಯುವ ಹುನ್ನಾರ ನಡೆಯುತ್ತಿದೆ. ಆನಂದ್ ಸಿಂಗ್.

ವಿಜಯನಗರ..(ಹೊಸಪೇಟೆ) ನಮ್ಮ ರಜಪೂತ್ ಸಮಾಜ ಸಣ್ಣ ಸಮಾಜ, ಅಲ್ಪಸಂಖ್ಯಾತ ಸಮಾಜದ ನನ್ನನ್ನ ಹತ್ತಿಡುವ ಹುನ್ನಾರ ನಡೆಯುತ್ತಿದೆ ಎನಿಸುತ್ತಿದೆ ನನಗೆ ಎಂದು ಸಚಿವ ಆನಂದ್ ಸಿಂಗ್ ಇಂದು ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಹೊಸಪೇಟೆ ನಗರದ ಖಾಸಗಿ ಹೊಟೆಲ್ ನಲ್ಲಿ ಆಯೋಜಿಸಿದ್ದ ಆಭರಣ ಮೇಳ ಉದ್ಘಾಟಿಸಿದ ಸಚಿವ ಆನಂದ್ ಸಿಂಗ್  ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತ ಈ ಮಾತನ್ನ ಹೇಳಿದರು. 

ಡಿ.ಪೋಲಪ್ಪ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಭಂದಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಆನಂದ್ ಸಿಂಗ್, ಮಡಿವಾಳ ಸಮಾಜಕ್ಕೆ ಸೇರಿದ ಜಾಗವನ್ನ ಉಳಿಸುವ ಸಂಭಂದ ನಡೆದ ಚರ್ಚೆಯನ್ನ ಈರೀತಿಯ ಪ್ರಕರಣವನ್ನಾಗಿ ತಿರುಚಲಾಗಿದೆ. ಯಾರಿಗೂ ಜೀವ ಬೆದರಿಕೆ ಹಾಕಿಲ್ಲ, ಒಂದು ವೇಳೆ ಜೀವ ಬೆದರಿಕೆ ಹಾಕಿದ್ದರೆ ಕಾನೂನು ನನ್ನ ಮೇಲೆ ಕ್ರಮ ಜರುಗಿಸಲಿ, ಪ್ರಕರಣಕ್ಕೆ ಸಂಭಂದಿಸಿದಂತೆ ಯಾರಿಗೂ ಒತ್ತಡ ತಂದಿಲ್ಲ, ಕಾಲುವೆ ಒತ್ತುವರಿಮಾಡಿ ನನ್ನ ಮನೆ ಕಟ್ಟಿದ್ದರೆ ಕಾನೂನಿನ ಪ್ರಕಾರ ಸಂಭಂದ ಪಟ್ಟ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಲಿ, ಅವರು ಮಾರ್ಕ್ ಮಾಡಿದ ಜಾಗದಿಂದ ನಾನೆ ನನ್ನ ಮನೆಯನ್ನ ಹೊಡೆದು ಹಾಕಿಕೊಳ್ಳುತ್ತೇನೆ. 

ಮಾಜಿ ಸಂಸದ ಉಗ್ರಪ್ಪ ಕೇವಲ ಮಾದ್ಯಮದಲ್ಲಿ ಬಂದ ಸುದ್ದಿಯನ್ನ ಆಧಾರವಾಗಿ ಇಟ್ಟುಕೊಂಡು ನನ್ನ ಮೇಲೆ ಒತ್ತೂವರಿ ಆರೋಪ ಮಾಡುತಿದ್ದಾರೆ, ಇದರಲ್ಲಿ ಯಾವುದೇ ಉರುಳಿಲ್ಲ. ಬೇರೆಯವರು ಹಚ್ಚಿದ ಬೆಂಕಿಯಲ್ಲಿ ಉಗ್ರಪ್ಪ ರೊಟ್ಟಿ ಬೇಹಿಸಿಕೊಳ್ಳುತಿದ್ದಾರೆ, ಈ ಹಿಂದೆ ಇದೇ ಉಗ್ರಪ್ಪ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾಗಿದ್ದ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳಿಗೆ ಅವರೇ ಸಿಪಾರಸ್ಸು ಮಾಡಿ ಪಾರ್ಕ್ ಒತ್ತುವರಿಮಾಡಿ ಮನೆ ಕಟ್ಟಿರುವ ಅವರ ಬೆಂಬಲಿಗರ ಮನೆಗಳ ತೆರವು ಮಾಡಂತೆ ತಡೆ ಹಿಡಿದಿದ್ದರು. ಈಗ ನಾನು ಒತ್ತುವರಿ ಮಾಡಿ ಮನೆ ಕಟ್ಟಿರುವ ಆರೋಪಮಾಡಯತಿದ್ದಾರೆ, ಇನ್ನು ಉಗ್ರಪ್ಪ ನಾನು ರಾಜಿನಾಮೆ ಕೊಡುವಂತೆ ಒತ್ತಾಯ ಮಾಡಿದ್ದಾರೆ, ರಾಜಿನಾಮೆ ಕೊಡಲು ನಾನು ಏನು ಅಪರಾಧ ಮಾಡಿದ್ದೇನೆ, ನಾನು ತಪ್ಪುಮಾಡಿರುವ ದಾಖಲೆ ಸಮೇತ ತೋರಿಸಲಿ, ವೃತ್ತಿಯಲ್ಲಿ ವಕೀಲರಾಗಿರುವ ಉಗ್ರಪ್ಪನವರ ಅನುಭವದಷ್ಟು ನನ್ನ ವಯಸ್ಸಾಗಿಲ್ಲ, ಹೀಗಿದ್ದರು ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ.

ಅದರಲ್ಲೂ ನನ್ನ ವಿರುದ್ದ ನಡೆಯುತ್ತಿರುವುದು ರಾಜಕೀಯ ಪಿತೂರಿ ಅಲ್ಲ, ಇದು ಭೂಗಳ್ಳರ ತಂತ್ರ, ಭೂಗಳ್ಳರಿಗೆ ಕಡಿವಾಣ ಹಾಕುಲು ನಾನು ಮುಂದಾದ್ರೆ, ನನ್ನ ವಿರುದ್ದ ಜಾತಿ ನಿಂದನೆ ಮತ್ತು ಜೀವ ಬೆದರಿಕೆಯಂತ ಆರೋಪಗಳು ಬರುತ್ತಿವೆ, ಇವುಗಳಲ್ಲೆ ಸುಳ್ಳು ಆರೋಪಗಳೆಂದು ಹೇಳಿದರು. ಇನ್ನು ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆರೋಪಕ್ಕೆ ಸಂಭಂದಿಸಿದಂತೆ ನಮ್ಮ ಮುಖ್ಯಮಂತ್ರಿಗಳು ಸ್ಪಷ್ಟನೆ ಕೇಳಿದರು ಅದಕ್ಕೆ ಸಂಭಂದಿಸಿದಂತೆ ಉತ್ತರಿಸಿದ್ದೇನೆ, ಅದರಲ್ಲೂ ನಾನು ಏನೆಂಬುದು ಮುಖ್ಯಮಂತ್ರಿಯವರಿಗೆ ಮತ್ತು ನಮ್ಮ ಪಕ್ಷಕ್ಕೆ ಗೊತ್ತಿದೆ ಎಂದರು.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ತೆರೆಯಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.