ವಿಜಯನಗರ(ಹೊಸಪೇಟೆ)..ನಿನ್ನೆ ತಡರಾತ್ರಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ, ಹಂಪಿಯ ವಿರೂಪಾಕ್ಷೇಶ್ಚರ ದೇವಾಲಯದ ಮುಂಬಾಗದಲ್ಲಿರುವ ಮ್ಯಾಂಗೊ ಟ್ರಿ ಹೊಟೆಲ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ, ಪಕ್ಕದ ಮೊಹನ್ ಚಿಕ್ಬಟ್ ಜೋಶಿಯವರ ಊಟದ ಹಾಲ್ ಗೆ ತಾಗಿದ ಬೆಂಕಿ ಪಕ್ಕದ ಬಟ್ಟೆ ಅಂಗಡಿ ಮತ್ತು ಸೈಕಲ್ ಶಾಪ್ ಎಲ್ಲವನ್ನೂ ಭಸ್ಮಮಾಡಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ, ಮ್ಯಾಂಗೊ ಟ್ರೀ ಹೊಟೆಲ್ ನಲ್ಲಿ ಬೆಂಕಿ ಹೊತ್ತಿಕೊಳ್ಳುತಿದ್ದಂತೆ ಹೊಟೆಲ್ ನಲ್ಲಿ ಇದ್ದ ಸಿಲಿಂಡರ್ ಸ್ಪೋಟಗೊಂಡು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿತ್ತು, ನಂತರ ಹೊಸಪೇಟೆ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ಆರಿಸುವುದರ ಜೊತೆಗೆ ಹೊಟೆಲ್ ಒಳಗಡೆ ಇದ್ದ ಇನ್ನೂ ನಾಲ್ಕಾರು ಸಿಲಿಂಡರ್ ಹೊರ ತೆಗೆದು ಸ್ಪೋಟದಿಂದ ಸಂಭವಿಸಬಹುದಾಗಿದ್ದ ಬಾರಿ ಅನಾಹುತವನ್ನ ತಡೆದಿದ್ದಾರೆ. ಸದ್ಯಕ್ಕೆ ಈ ಅಗ್ನಿ ಅವಘಡ ಹಂಪಿಯ ಜನತಾ ಪ್ಲಾಟ್ ನಿವಾಸಿಗಳಿಗೆ ಒಂದು ರೀತಿಯ ಸಂಕಷ್ಟ ತಂದೊಡ್ಡಿದೆ ಎನ್ನಬಹುದು.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.