You are currently viewing ಹಸಿವು ತಾಳಲಾರದೆ ದಾಳಿಂಬೆ ಕುಡಿ ತಿಂದ ಕುರಿಗಳ ಮಾರಣ ಹೋಮ, ನೂರಾರು ಕುರಿಗಳ ಕಳೆದು ಕೊಂಡ ಕುರಿಗಾಯಿಗಳು ಕಂಗಾಲು.

ಹಸಿವು ತಾಳಲಾರದೆ ದಾಳಿಂಬೆ ಕುಡಿ ತಿಂದ ಕುರಿಗಳ ಮಾರಣ ಹೋಮ, ನೂರಾರು ಕುರಿಗಳ ಕಳೆದು ಕೊಂಡ ಕುರಿಗಾಯಿಗಳು ಕಂಗಾಲು.

ವಿಜಯನಗರ…ದಾಳಿಂಬೆ ಗಿಡದ ಕುಡಿತಿಂದ ನೂರಾರು ಕುರಿಗಳು ಸಾವನ್ನಪ್ಪಿದ ದಾರುಣ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ, ಬನ್ನಿಕಲ್ಲು ಗ್ರಾಮದ ಕರಬಸ್ಸಪ್ಪನಿಗೆ ಸೇರಿದ 48ಕುರಿ,ಮಂಜಪ್ಪನಿಗೆ ಸೇರಿದ 10ಕುರಿ, ವೀರೇಶನಿಗೆ ಸೇರಿದ 8ಕುರಿ, ಸಜ್ಜಿ ಕರಿಬಸ್ಸಪ್ಪನಿಗೆ ಸೇರಿದ 12ಕುರಿ,ದೇವರ ಮನಿ ಕೊಟ್ರಪ್ಪ ನಿಗೆ ಸೇರಿದ12 ಕುರಿಗಳು ಸಾವನ್ನಪ್ಪಿದ್ದು ಇನ್ನೂ 30ಕ್ಕೂ ಹೆಚ್ಚು ಕುರಿಗಳ ಪರಿಸ್ಥಿತಿ ಚಿಂತಾ ಜನಕವಾಗಿದೆ ಇನ್ನು 100ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.

ಕಳೆದ ಹತ್ತಾರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಕುರಿಗಳು ಮೇಯಿಯುವುದಕ್ಕೂ ಅವಕಾಶ ಆಗುತ್ತಿಲ್ಲ, ಹಾಗಾಗಿ ಮೇಯಲು ಹುಲ್ಲ ಸಿಗದ ಕುರಿಗಳು ರೈತರ ಜಮೀನೊಂದರಲ್ಲಿ ಬೆಳೆದಿದ್ದ ದಾಳಿಂಬಿ ಗಿಡದ ಕುಡಿಯನ್ನ ತಿಂದ ಪರಿಣಾಮ ಕುರಿಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ತಹಸಿಲ್ದಾರ್ ಮತ್ತು ಪಶು ವೈಧ್ಯಾದಿಕಾರಿಗಳು ಬೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.

ಅದರಲ್ಲೂ ಬದುಕುಳಿದ ಕುರಿಗಳಿಗೆ ಚಿಕಿತ್ಸೆ ಮುಂದುವರೆಸಿರುವ ಪಶು ವೈಧ್ಯಾದಿಕಾರಿಗಳು ಸಾವಿನ ಸಂಖೆ ಕಡಿಮೆ ಮಾಡಲು ಪ್ರಯತ್ನಿಸುತಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಭಂದಿಸಿದಂತೆ  ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಸಹಜವಾಗಿ ಹಂಪಸಾಗರ ಮತ್ತು ಬನ್ನಿಕಲ್ಲು ಗ್ರಾಮದ ಸುತ್ತ ಮುತ್ತ ಇತ್ತೀಚೆಗೆ ದಾಳಿಂಬಿ ಬೆಳೆಗಾರರು ಹೆಚ್ಚಾಗಿದ್ದಾರೆ, ರೈತರ ಜಮೀನಿನಲ್ಲಿ ಬೆಳೆಯುವ ದಾಳಿಂಬೆ ಹಣ್ಣುಗಳು ಮನುಷ್ಯರು ತಿನ್ನುವುದಕ್ಕೆ ಯೋಗ್ಯ ಮಾತ್ರ ಅದರ ಗಿಡಿ ಸೊಪ್ಪು,ಕುಡಿಗಳು ದನ ಕರು ಕುರಿಗಳಿಗೆ ಮಾರಕ ಎನ್ನಲಾಗಿದೆ, ಹಾಗಾಗಿ ಇಂದು ಈ ದುರ್ಘಟನೆ ನಡೆದಿದೆ.ಇನ್ನು ಕುರಿಗಳನ್ನ ಕಳೆದುಕೊಂಡಿರುವ ಗುರಿಗಾಯಿಗಳು ಆದಷ್ಟು ಬೇಗ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಮನವಿಮಾಡಿಕೊಂಡಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.