You are currently viewing ಮೀಸೆ ಚಿಗುರುವ ಮುನ್ನ ಮನೆಗಳ್ಳತನಕ್ಕೆ ಇಳಿದ, ಕದ್ದ ಮಾಲು ಸಮೇತ ಪೊಲೀಸರ ಅತಿಥಿ ಆದ.

ಮೀಸೆ ಚಿಗುರುವ ಮುನ್ನ ಮನೆಗಳ್ಳತನಕ್ಕೆ ಇಳಿದ, ಕದ್ದ ಮಾಲು ಸಮೇತ ಪೊಲೀಸರ ಅತಿಥಿ ಆದ.

ವಿಜಯನಗರ.(ಹೊಸಪೇಟೆ) ಮನೆಗಳ್ಳನನ್ನ ಬಂದಿಸುವಲ್ಲಿ ಕಮಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಕುಮಾರ್ (21)ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 47ಸಾವಿರ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ವಶಕ್ಕೆ ಪಡೆದು ಇನ್ನೂ ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ..

ದಿನಾಂಕ 02-10-2022 ರಂದು ಕಮಲಾಪುರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 11ವಾರ್ಡಿನ ಮನೆಯೊಂದರಲ್ಲಿ ಕಳ್ಳತನವಾಗಿರುವ ಕುರಿತು, ಡಿ.ರೂಪ ಎಂಬ ಮಹಿಳೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿತರ ಪತ್ತೆಗೆ  ಡಿ.ಎಸ್.ಪಿ ಹೊಸಪೇಟೆ ರವರ ಮಾಗ೯ದಶ೯ನದಲ್ಲಿ, ಸಿ.ಪಿ.ಐ  ಹಂಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗದ್ದು, ದಿನಾಂಕ 24-10-2022  ರಂದು  ಪಿ.ಎಸ್.ಐ ಕಮಲಾಪುರ ಮತ್ತು  ಸಿಬ್ಬಂದಿ ಗಸ್ತು ಮಾಡುತ್ತಿರುವಾಗ, ಅನುಮಾನಾಸ್ಪದ ವ್ಯಕ್ತಿಯನ್ನು ವಿಚಾರಿಸಲಾಗಿ ಕಳ್ಳತನ ಬೆಳಕಿಗೆ ಬಂದಿದೆ.

 ದಿನಾಂಕ   01-10-2022 ರಂದು ಕಮಲಾಪುರ ಪಟ್ಟಣದಲ್ಲಿ  ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿ ಆರೋಪಿತನಿಂದ ಚಿನ್ನದ  ಮತ್ತು ಬೆಳ್ಳಿಯ ವಸ್ತುಗಳು ಅಂದಾಜು ಬೆಲೆ 47,600 ರೂಪಾಯಿ  ಜಪ್ತಿ ಮಾಡಿ ತನಿಖೆ ಮುಂದುವರೆದಿರುತ್ತದೆ. ಸದರಿ ತಂಡದ ಕಾಯ೯ಚರಣೆಯನ್ನು  ವಿಜಯನಗರ ಎಸ್ಪಿ ಅರುಣ್ ಕುಮಾರ್ ಕೆ ಪ್ರಶಂಸಿಸಿದ್ದಾರೆ.

ಕಮಲಾಪುರ ಪಿ.ಎಸ್.ಐ. ಜಯಲಕ್ಷ್ಮಿ ನೇತೃತ್ವದ ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ಗಫೂರ್ ಸಾಬ್,ಹರೀಶ್, ಮಹಾಂತೇಶ್,ಬಸವರಾಜ್ ಮೇಟಿ ಬಾಗಿಯಾಗಿದ್ದರು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.