You are currently viewing ಕೋತಿ ತಂದ ಪಜೀತಿ..ಪ್ರಾನ್ಸ್ ಮಹಿಳೆಗೆ  ನೆರವಾದ ಹಂಪಿ ಪ್ರವಾಸಿ ಮಿತ್ರರು

ಕೋತಿ ತಂದ ಪಜೀತಿ..ಪ್ರಾನ್ಸ್ ಮಹಿಳೆಗೆ  ನೆರವಾದ ಹಂಪಿ ಪ್ರವಾಸಿ ಮಿತ್ರರು

.

ವಿಜಯನಗರ… ಹಂಪಿ ಎಂದ ಕೂಡಲೆ ಸಹಜವಾಗಿ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ಘತವೈಭವದ ನೆನಪುಗಳು ಮತ್ತು ಅಲ್ಲಿನ ಸ್ಮಾರಕಗಳ ಅದ್ಬುತ ಕಲಾಕೃತಿಗಳು, ಇದರ ಜೊತೆಗೆ ಮರೆಯಲಾಗದ ಅಲ್ಲಿನ ಅನುಭವ ಎಂದರೆ ಕೋತಿಗಳ ಕುಚೇಷ್ಟೆಯ ಆಟ. ಹೌದು ಹಂಪಿಗೆ ಬೇಟಿ ನೀಡುವ ಪ್ರವಾಸಿಗರ ದಣಿವನ್ನ ಮರೆಸುವ ಟಾಣಿಕ್ ಎಂದರೆ ಅದು ಇಲ್ಲಿನ ವಾನರ ಸೈನ್ಯದ ಆಟ ತುಂಟಾಟ, ಹೌದು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರು ಕೋತಿಗಳೊಂದಿಗೆ ಕ್ಷಣ ಕಾಲ ತಮಾಷೆಯ ಆಟ ಆಡಿ ಮರಳದೆ ಇರುವುದಿಲ್ಲ.

ಹೀಗೆ ತಮಾಷೆಯ ಆಟ ಆಡಲು ಹೋಗಿ ಪಜೀತಿಗೆ ಸಿಲಿಕಿಹಾಕಿಕೊಂಡವರು ಅದೆಷ್ಟೊ. ನಿನ್ನೆ ಕೂಡ ಅಂತದ್ದೇ ಪಜೀತಿಗೆ ಪ್ರಾನ್ಸ್ ದೇಶದ ಮಹಿಳೆ ಸಿಲುಕಿ ಹಾಕಿಕೊಂಡು ಪರಿತಪಿಸಿದ್ದಾಳೆ. ಈ ಸಂದರ್ಭದಲ್ಲಿ ನೆರವಿಗೆ ಬಂದ ಇಲ್ಲಿನ ಪ್ರವಾಸಿ ಮಿತ್ರ ಹೋಂ ಗಾರ್ಡಗಳು ಮಹಿಳೆಗೆ ಎದುರಾಗಿದ್ದ ತೊಂದರೆಯನ್ನ ದೂರಮಾಡಿ ನೆಮ್ಮದಿಯಿಂದ ಹಿಂದಿರುಗುವಂತೆ ಮಾಡಿದ್ದಾರೆ. ಹೌದು ಪ್ರಾನ್ಸ್ ದೇಶದ ಮೇರಿ ಕ್ಯಮೇಲಿ ಎನ್ನುವ ಮಹಿಳೆಯ ಬ್ಯಾಗನ್ನ ಕದ್ದೊಯ್ದ ಕೋತಿಗಳು ವೀರೂಪಾಕ್ಷೇಶ್ವರ ದೇವಸ್ಥನಾದ ನದಿ ದ್ವಾರದ ಗೋಪುರದ ಮೇಲೆ ಬಿಟ್ಟು ಪರಾರಿಯಾಗಿದ್ದವು. ಗೋಪುರದಿಂದ ಬ್ಯಾಗೇನು ಕೆಳಗೆ ಬಿದ್ದಿತ್ತು, ಆದರೆ ಅದರಲ್ಲಿದ್ದ ವೀಸಾ ಪಾಸ್ಪೊರ್ಟ್ ಅಲ್ಲೇ ಸಿಕ್ಕಿ ಹಾಕಿಕೊಂಡು ಈ ವಿದೇಶಿ ಮಹಿಳೆ ತೊಂದರೆ ಎದುರಿಸಬೇಕಾಗಿ ಬಂತು, ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದವರೆ ಹಂಪಿಯ ಈ ಮೂರು ಜನ ಪ್ರವಾಸಿ ಮಿತ್ರ ಹೋಂಗಾರ್ಡ್ ಗಳು.

ರಾಮಾನಾಯ್ಕ್,ವಿಶ್ವನಾಥ, ಭಾಷ, ಎನ್ನುವ ಈ ಮೂರು ಜನ ಹೋಂಗಾರ್ಡ್ ಗಳು ಗೋಪುರದ ಮೇಲೇರಿ ಕಳೆದು ಹೋಗಿದ್ದ ವೀಸಾ ಪಾಸ್ಪೊರ್ಟ್ ಹುಡುಕಿ ಕೊಟ್ಟು ವಿದೇಶಿ ಮಹಿಳೆಗೆ ನೆರವಾಗಿದ್ದಾರೆ. ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ವಿದೇಶಿ ಮಹಿಳೆ, ಪ್ರವಾಸಿ ಮಿತ್ರ ಹೋಂಗಾರ್ಡ್ ಗಳಿಗೆ ಧನ್ಯವಾದಗಳನ್ನ ಹೇಳಿ ತಾನು ಉಳಿದಿದ್ದ ಹೊಟೆಲ್ ಗೆ ಮರಳಿದ್ದಾರೆ. ಕೋತಿಗಳೊಂದಿಗೆ ನೀವು ಎಷ್ಟೇ ಆಟ ಆಡಿದರೂ ಎಚ್ಚರಿಕೆ ವಹಿಸುವುದನ್ನ ಮಾತ್ರ ಮರೆಯುವ ಹಾಗಿಲ್ಲ ಎನ್ನುವ ಸಂದೇಶವನ್ನ ವಾನರ ಸೈನ್ಯ ಈ ಮೂಲಕ ತಿಳಿಸಿಕೊಟ್ಟಿದೆ.

ವರದಿ.ಸುಬಾನಿ ಪಿಂಜಾರ ವಿಜಯನಗರ.