ಬಳ್ಳಾರಿ…ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 25 ಜನ ವಿಧ್ಯಾರ್ಥಿಗಳಲ್ಲಿ ಕೊರೊನ ಸೋಂಕು ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.
ಹಿನ್ನೆಲೆಯಲ್ಲಿ ಇಡೀ ಕಾಲೇಜ್ ಕ್ಯಾಂಪಸನ್ನ ಸಂಪೂರ್ಣ ಸೀಲ್ಡೌನ್ ಮಾಡಿ ಅಲ್ಲಿಂದ ವಿಧ್ಯಾರ್ಥಿಗಳು ಹೊರ ಬರದಂತೆ ಕಾಲೇಜು ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು, ಜಿಲ್ಲಾಡಳಿತದ ಆದೇಶದಂತೆ ಕಾಲೇಜ್ ಕ್ಯಾಂಪಸನ್ನ ಸೀಲ್ಡೌನ್ ಮಾಡುತಿದ್ದಂತೆ ಬೆಚ್ಚಿದ ವಿಧ್ಯಾರ್ಥಿಗಳು, ಅಲ್ಲಿಂದ ಹೇಗಾದರುಮಾಡಿ ಹೊರಗೆ ಹೋಗಬೇಕೆಂದು ಹರ ಸಾಹಸಪಟ್ಟಿದ್ದಾರೆ. ವಿಧ್ಯಾರ್ಥಿಗಳು ಯಾವೆಲ್ಲ ಪ್ರಯತ್ನಮಾಡಿದ್ದಾರೆ ಆ ದೃಷ್ಯಗಳು ವೈರಲ್ ಆಗಿವೆ.
ಕಾಲೇಜಿನ ಹಿಂಬಾಗದ ಕಾಂಪೌಂಡ್ ದಾಟಿ ಬ್ಯಾಗ್ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾರೆ.ಇನ್ನು ಪೊನ್ ಮೂಲಕ ವಿಧ್ಯಾರ್ಥಿಗಳನ್ನ ಸಂಪರ್ಕಿಸಿರುವ ಪೊಷಕರು ಹಿಂಬಾಗಕ್ಕೆ ಬಂದು ತಮ್ಮ ಮಕ್ಕಳನ್ನ ಕರೆದುಕೊಂಡು ಅವಸರ ಅವಸರವಾಗಿ ಬೈಕ್ ಮೂಲಕ ಅಲ್ಲಿಂದ ಹೊರಟು ಹೋಗಿದ್ದಾರೆ. ಇದೀಗ ಕಾಲೇಜಿನ ಹಾಸ್ಟೆಲ್ ನಲ್ಲಿದ್ದ ಎಲ್ಲಾ ವಿಧ್ಯಾರ್ಥಿಗಳು ಮನೆ ಸೇರಿಕೊಂಡಿದ್ದು ಕೊರೊನ ಹಾವಳಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ.
ವರದಿ.
ಸುಬಾನಿ ಪಿಂಜಾರ. ವಿಜಯನಗರ.