You are currently viewing ರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ವಿಜಯನಗರ ( ಹೊಸಪೇಟೆ )ಸಚಿವ ಆನಂದ್ ಸಿಂಗ್ ಅವರ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಮಧ್ಯಪ್ರದೇಶ್ ಮೂಲದ ಉದ್ಯಮಿ ಯುವರಾಜ್ ಸಿಂಗ್ ಜಾದೂನ್ ಅವರ ವಿವಾಹ ಸಮಾರಂಭ ನಿನ್ನೆ ರಾಜಸ್ಥಾನದ ರಾಮ್ ಬಾಗ್ ಪ್ಯಾಲೇಸ್ ನಲ್ಲಿ ನಡೆಯಿತು.

ಸಿಎಂ ಬಸವರಾಜ್ ಬೊಮ್ಮಾಯಿ, ಶ್ರೀರಾಮುಲು, ಆರ್ ಅಶೋಕ್, ಸೇರಿದಂತೆ ರಾಜ್ಯದ ಹಲವು ಗಣ್ಯ ಮಾನ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ವಧುವರರಿಗೆ ಆಶೀರ್ವದಿಸಿದರು.

ಇದೇ ತಿಂಗಳು 9 ನೇ ತಾರೀಖಿನಂದು ಹೊಸಪೇಟೆಯಲ್ಲಿ  ಅರತಕ್ಷತೆ ಕಾರ್ಯಕ್ರಮ ನಡೆಯಲಿದ್ದು  ಆನಂದ್ ಸಿಂಗ್ ಅವರ ಹೊಸಪೇಟೆ ನಗರದ ಹೊಸ ಮನೆ ಬಳಿಯಲ್ಲಿ ಸಮಾರಂಭಕ್ಕೆ ಅದ್ದೂರಿ ಸಿದ್ದತೆ ನಡೆದಿದೆ.

ರಾಜಸ್ಥಾನದ ಪಿಂಕ್ ಪ್ಯಾಲೇಸ್ ನಲ್ಲಿ ನಿನ್ನೆ ನಡೆದ ಮದುವೆ ಸಮಾರಂಭದಲ್ಲಿ ಆನಂದ್ ಸಿಂಗ್ ಕುಟುಂಬದ ಸದಸ್ಯರು ಮತ್ತು ಕೆಲವು ಗಣ್ಯಮಾನ್ಯರು ಮಾತ್ರ ಭಾಗಿಯಾಗಿದ್ದರು.

ಹಾಗಾಗಿ  9ನೇ ತಾರೀಕಿನಂದು ಹೊಸಪೇಟೆ ನಗರದಲ್ಲಿ ನಡೆಯುವ ಅದ್ದೂರಿ ಆರತಕ್ಷತೆ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಪಕ್ಷದ ಗಣ್ಯಮಾನ್ಯರು ಸೇರಿದಂತೆ, ಹೊಸಪೇಟೆ ಹಾಗೂ ವಿಜಯನಗರ ಕ್ಷೇತ್ರದ ಜನಸಾಮಾನ್ಯರು ಕೂಡ ಈ ಅರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿ ನವ ವಧುವರರಿಗೆ ಆಶೀರ್ವದಿಸಲಿದ್ದಾರೆ.

ವರದಿ.. ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.