You are currently viewing ಕೊಟ್ಟೂರಿನ ಚೀಟಿ ಸಂಸ್ಥೆ ರದ್ದತಿಗೆ ಶಿಫಾರಸ್ಸು;ಸಂಬಂಧಪಟ್ಟವರಿದ್ದಲ್ಲಿ ಸಂಪರ್ಕಿಸಿ

ಕೊಟ್ಟೂರಿನ ಚೀಟಿ ಸಂಸ್ಥೆ ರದ್ದತಿಗೆ ಶಿಫಾರಸ್ಸು;ಸಂಬಂಧಪಟ್ಟವರಿದ್ದಲ್ಲಿ ಸಂಪರ್ಕಿಸಿ


ಬಳ್ಳಾರಿ.ಫೆ.05: ವಿಜಯನಗರ ಜಿಲ್ಲೆಯ ಹರಪನಳ್ಳಿ ಉಪವಿಭಾಗದ ಕೊಟ್ಟೂರಿನ ರೇಣುಕಾರಸ್ತೆಯಲ್ಲಿರುವ ವಿಠಲ್ ಸರ್ಕಲ್ ಹತ್ತಿರದ ಮೊದಲ ಮಹಡಿಯಲ್ಲಿರುವ ಶ್ರೀ ಗುರುಕೊಟ್ಟೋರೇಶ್ವರ ಚಿಟ್ಸ್ ಫಂಡ್ ಅನ್ನು ಚೀಟಿ ಅಧಿನಿಯಮ 1982 ರನ್ವಯ ಈ ಚೀಟಿ ಸಂಸ್ಥೆಯನ್ನು ರದ್ದುಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಚೀಟಿ ಸಂಸ್ಥೆಗಳಿಗೆ ಸಂಬಂಧಪಟ್ಟವರು ಯಾರೇ ಇದ್ದಲ್ಲಿ 10 ದಿನಗಳೊಳಗಾಗಿ ಹರಪನಹಳ್ಳಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಭೇಟಿ ಮಾಡಲು ತಿಳಿಸಿದೆ.


ಇಲ್ಲವಾದಲ್ಲಿ ನೇರವಾಗಿ ಈ ಚೀಟಿ ಸಂಸ್ಥೆಯನ್ನು ರದ್ದತಿ ಮಾಡಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಹಾಗೂ ಮುಂದೆ ಬರುವ ಯಾವುದೇ ಹೊಣೆಗಾರಿಕೆಗೆ ಹರಪನಹಳ್ಳಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಜವಾಬ್ದಾರರಾಗಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಹರಪನಹಳ್ಳಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ದೂ:08398-281250 ಸಂಪರ್ಕಿಸಬಹುದು.
-*-