ವಿಜಯನಗರ.. SC ST ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ವಾಲ್ಮೀಕಿ ಶ್ರೀಗಳು ಪ್ರೀಡಂ ಪಾರ್ಕಲ್ಲಿ ಧರಣಿ ಕುಳಿತು 152 ದಿನಗಳು ದಿನಗಳು ಕಳೆದಿವೆ. ಹೀಗಿದ್ದರು ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿಂದು ಜಿಲ್ಲಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಪ್ರತಿಭಟನೆಮಾಡಲು SC ST ಸಮುದಾಯಗಳು ಮುಂದಾಗಿದ್ದವು, ರಾಜ್ಯದ ಪ್ರತಿಯೊಂದು ಜಿಲ್ಲಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಪ್ರತಿಭಟನೆಮಾಡುವ ಉದ್ದೇಶದ ಹಮ್ಮಿಕೊಂಡಿದ್ದ ಹೋರಾಟ ವಿಜಯನಗರ ಜಿಲ್ಲಾ ಕೇಂದ್ರದಲ್ಲೂ ಜೋರಾಗಿಯೇ ನಡೆಯಿತು. ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮುದಾಯದ ಹೋರಾಟಗಾರರು ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಸೇರಿ ಪುತ್ತಳಿಗೆ ಮಾಲಾರ್ಪಣೆಮಾಡಿ ಕೆಲವೊತ್ತು ರಸ್ತೆ ತಡೆ ನಡೆಸಿದರು.
ನಂತರ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಕಛೇರಿಯ ಮುಂದೆ ಪ್ರತಿಭಟನೆಗೆ ಮುಂದಾಯಿತು, ಇನ್ನು ಪ್ರತಿಭಟನೆಗೆ ಬೆಂಬಲಿಸಿ, ಸ್ಥಳಕ್ಕೆ ಆಗಮಿಸಿದ ಹಗರಿಬೊಮ್ಮನಹಳ್ಳಿ ಕೈ ಶಾಸಕ ಭೀಮಾನಾಯ್ಕ್ ಡಿಸಿ ಕಚೇರಿಗೆ ನುಗ್ಗಲು ಯತ್ನಸಿದರು,
ಈ ಸಂದರ್ಭದಲ್ಲಿ ಡಿಸಿ ಕಚೇರಿಯ ಗೇಟಲ್ಲಿ ಪೊಲೀಸರು ಪತ್ರಿಭಟನಾಕಾರರನ್ನ ತಡೆದು ನಿಲ್ಲಿಸಿದ ಕಾರಣಕ್ಕೆ ಡಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲು ಮುಂದಾದರು.
ಪ್ರತಿಭಟನಾ ವೇಳೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಬಿಜೆಪಿ ಸರ್ಕಾರ ಅಧಿಕಾರಿಕ್ಕೆ ಬಂದ್ರೆ, 24 ತಾಸಿನೊಳಗೆ ಮೀಸಲಾತಿ ಘೋಷಣೆ ಮಾಡ್ತಿವಿ ಅಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನವರು ಹೇಳಿದ್ರು,ಸಚಿವ ಶ್ರೀ ರಾಮುಲು, ರಕ್ತದಲ್ಲಿ ಬರೆದುಕೊಡ್ತಿನಿ ಅಂತ ಹೇಳಿದ್ರು
ಆದ್ರೆ ಈ ಸರ್ಕಾರ ಮಾತು ತಪ್ಪಿವೆ,ವಾಲ್ಮೀಕಿ ಶ್ರೀಗಳು 152 ದಿನ ಆಯ್ತು ಹೋರಾಟಕ್ಕೆ ಕುಳಿತು,ರಾಜ್ಯ ಸರ್ಕಾರಕ್ಕೆ ಬದ್ಧತೆ ಇಲ್ವಾ-? ಬಿಜೆಪಿಗೆ ಬದ್ಧತೆ ಇಲ್ಲಾ ,ಮಳೆ, ಗಾಳಿ, ಚಳಿ , ಬಿಸಿಲು ಲೆಕ್ಕಿಸದೇ, ಶ್ರೀಗಳು ಹೋರಾಟಕ್ಕೆ ಕುಳಿತಿದ್ದಾರೆ,ವಾಲ್ಮೀಕಿ ಶ್ರೀಗಳನ್ನು ಅಲ್ಲಿ ಕೂಡಿಸಿರೋದು ಎಷ್ಟು ಸರಿ-? ನಿಮಗೆ ಬದ್ಧತೆ ಇದ್ರೆ ಮೊದಲು ಮೀಸಲಾತಿ ಜಾರಿ ಮಾಡಿ, ಘೋಷಣೆ ಮಾಡಿ ಎಂದು ರಾಜ್ಯ ಸರ್ಕಾರ ಮತ್ತು ಸಚಿವ ಶ್ರೀರಾಮುಲು ವಿರುದ್ದ ಭೀಮಾನಾಯ್ಕ್ ವಾಗ್ದಾಳಿಮಾಡಿದರು. ನಂತರ ಪ್ರತಿಭಟನೆ ನಿಯಂತ್ರಣದ ದೃಷ್ಠಿಯಿಂದ ಸೇರಿದ್ದ ಎಲ್ಲಾ ಪ್ರತಿಭಟನಾಕಾರರನ್ನ ಬಂದಿಸಿ ಬಿಡುಗಡೆಗೊಳಿಸಿದರು.
ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ತೆರೆಯಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.