You are currently viewing ಮಳೆ ಗಾಳಿಗೆ ಬಿಜೆಪಿ ಕಾರ್ಯಕಾರಿಣಿ ಸಭೆಯ ಮಹಾದ್ವಾರ ಪ್ಲಕ್ಸ್ ಬ್ಯಾನರ್ ಗಳು ಧರೆಗೆ.

ಮಳೆ ಗಾಳಿಗೆ ಬಿಜೆಪಿ ಕಾರ್ಯಕಾರಿಣಿ ಸಭೆಯ ಮಹಾದ್ವಾರ ಪ್ಲಕ್ಸ್ ಬ್ಯಾನರ್ ಗಳು ಧರೆಗೆ.

ವಿಜಯನಗರ… ನಿನ್ನೆ ಸಂಜೆ ಹೊಸಪೇಟೆ ನಗರದಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ ಹೆಚ್ಚಾದ ಪರಿಣಾಮ ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸಭೆಯ ಮುಂಬಾಗದಲ್ಲಿ ಹಾಕಲಾಗಿದ್ದ ನಾಯಕರ ಬಾವಚಿತ್ರದ ಕಟೌಟ್ ಬ್ಯಾನರ್ ಗಳು ನೆಲಕ್ಕುರುಳಿವೆ. ಕಾರ್ಯಕಾರಣಿ ಸಭೆ ಇನ್ನೇನು ಮುಗಿತು ಎಲ್ಲಾ ಕಾರ್ಯಕರ್ತರು ಅಲ್ಲಿಂದ ಹೊಟೆಲ್ ಗೆ ತೆರಳಬೇಕೆನ್ನುವಷ್ಟರಲ್ಲಿ ಮಳೆ ಗಾಳಿ ಪ್ರಾರಂಭವಾಯಿತು.

ಎರಡು ದಿನಗಳ ಸಭೆ ಸಂಭಂದ ತತ್ಕಾಲಿಕವಾಗಿ ಅಳವಡಿಸಿದ್ದ ಪ್ಲಕ್ಸ್ ಬ್ಯಾನರ್ ಗಳು ಗಾಳಿಯ ರಭಸಕ್ಕೆ ಒಂದೊಂದಾಗಿ ಹಾರಿ ಹೋಗ ತೊಡಗಿದವು,

ಇನ್ನು ಮಹಾದ್ವರಕ್ಕೆ ಹಾಕಲಾಗಿದ್ದ ಕಟೌಟ್ ಸಹಿತ ಬ್ಯಾನರ್ ಗಳು ರಸ್ತೆಗೆ ಅಡ್ಡಲಾಗಿ ಬಿದ್ದು ರಸ್ತೆ ಮಚಾರಕ್ಕೆ ಅಡ್ಡಿ ಆಯಿತು.

ಸ್ಥಳದಲ್ಲೇ ಇದ್ದ ಟೆಂಟ್ ಕಾರ್ಮಿಕರು ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆಗೆ ಬಿದ್ದಿದ್ದ ಎಲ್ಲಾ ಕಟೌಟ್ ಗಳನ್ನ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಂತರ ಮಳೆ ನಿಂತ ಮೇಲೆ ಹಾಳಾಗಿರುವ ಎಲ್ಲಾ ಕಟೌಟ್ ತೆರವುಗೊಳಿಸಿದ ಕಾರ್ಮಿಕರು ಹೊಸ ಕಟೌಟ್ ಹಾಕುವ ಮೂಲಕ ನಾಳಿನ ಕಾರ್ಯಕಾರಣಿ ಸಭೆಗೆ ಅನುವುಮಾಡಿದರು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.