You are currently viewing ಹಂಪಿ ಮಿರರ್ ವರದಿಯ ಫಲಶೃತಿ. ಶ್ರಮಜೀವಿಗಳಿಗೆ ಸಿಕ್ತು ನೀರು ನೆರಳು..

ಹಂಪಿ ಮಿರರ್ ವರದಿಯ ಫಲಶೃತಿ. ಶ್ರಮಜೀವಿಗಳಿಗೆ ಸಿಕ್ತು ನೀರು ನೆರಳು..

ವಿಜಯನಗರ… ನರೇಗ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಉದ್ಯೂಗ ಖಾತ್ರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಬೇಟಿ ನೀಡುವ ಮೂಲಕ ರಿಯಾಲಿಟಿ ಚಕ್ ಮಾಡುವ ಕೆಲಸಕ್ಕೆ ನಮ್ಮ ಹಂಪಿ ಮಿರರ್ ಮುಂದಾಗಿತ್ತು, ಉದ್ಯೋಗ ಖಾತ್ರಿ ಕೆಲಸಮಾಡುವ ಕೂಲಿ ಕಾರ್ಮಿಕರಿಗೆ ಸಂಭಂದ ಪಟ್ಟ ಗ್ರಾ.ಪಂ ಅಧಿಕಾರಿಗಳು ಏನೆಲ್ಲ ಸವಲತ್ತುಗಳನ್ನ ಕೂಲಿ ಕಾರ್ಮಿಕರಿಗೆ ನೀಡುತಿದ್ದಾರೆ ಎಂದು ನೋಡುತ್ತ ಹೋದಂತೆ ಸಮಸ್ಯೆಗಳ ಆಗರವೇ ವಾಸ್ತವದಲ್ಲಿ ಕಂಡುಬಂತು.

ಕುಡಿಯುವ ನೀರು, ಕೂಲಿ ಕಾರ್ಮಿಕರ ಮಕ್ಕಳು ಮತ್ತು ವಯೋವೃದ್ದರು ಕುಳಿತುಕೊಳ್ಳಲು ನೆರಳಿಲ್ಲದೆ ಇರುವುದು ಕಂಡುಬಂದಿತ್ತು, ಅದರ ಜೊತೆ ಪ್ರಥಮ ಚಿಕಿತ್ಸೆಗೆ ಬೇಕಾಗುವ ಔಷದಿ ಕಿಟ್ಟ್ ಇಲ್ಲದೆ ಇರುವುದನ್ನ ಅಲ್ಲಿನ ಕೂಲಿ ಕಾರ್ಮಿಕರು ನಮ್ಮ ಗಮನಕ್ಕೆ ತಂದರು. ಅದಲ್ಲದೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಿರುವ ಕಾರಣಕ್ಕೆ ಕೂಲಿ ಕಾರ್ಮಿಕರು ಮಾಡುವ ಕೆಲಸದ ಪ್ರಮಾಣದಲ್ಲಿ ಶೇಖಡಾ 30% ಕಡಿಮೆ ಮಾಡಿದ್ದರೂ ಅಲ್ಲಿನ ಗ್ರಾ.ಪಂ. ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಅದು ತಲುಪಿಸುವ ಪ್ರಯತ್ನಮಾಡಿರಲಿಲ್ಲ, ಈ ಎಲ್ಲಾ ಸಮಸ್ಯೆಗಳು ನಮ್ಮ ಹಂಪಿ ಮಿರರ್ ಗಮನಕ್ಕೆ ಬರುತಿದ್ದಂತೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಗರನೂರು ಗ್ರಾ.ಪಂ. ವ್ಯಾಪ್ತಿಯ ಹಿರೇಕೊಳಚಿ ಗ್ರಾಮದಲ್ಲಿ ನಡೆಯುತಿದ್ದ ನರೇಗ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಸೀಲನೆ ನಡೆಸಲಾಯಿತು.

ಬಿರು ಬಿಸಿಲಿನಲ್ಲಿ ಕೆಲಸಮಾಡುವ ಕಾರ್ಮಿಕರ ಮಕ್ಕಳು ನೀರು ನೆರಳಿಲ್ಲದೆ ಗೋಳಾಡುವುದು ನಮ್ಮ ಕ್ಯಾಮರ ಕಣ್ಣಿಗೆ ಸೆರೆ ಸಿಕ್ಕಿತ್ತು, ಇನ್ನು ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಸರ್ಕಾರ ಬಿಸಿಲನ ತಾಪ ಕಂಡು ಕೂಲಿ ಕಾರ್ಮಿಕರಿಗೆ 30 ಪರ್ಶೆಂಟ್ ಕೆಲಸದ ಹೊರ ಕಡಿಮೆಮಾಡಿದ್ದರೂ ಆ ಯೋಜನೆ ಇಲ್ಲಿನ ಕೂಲಿ ಕಾರ್ಮಿಕರಿಗೆ ತಲುಪಿದ್ದಿಲ್ಲ. ಈ ಎಲ್ಲಾ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಮೂಲಕ ಸಂಭಂದ ಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ನಮ್ಮ ಹಂಪಿ ಮಿರರ್ ಯಶಸ್ವಿ ಆಯಿತು.

ನಮ್ಮ ಹಂಪಿ ಮಿರರ್ ವರದಿಗೆ ಎಚ್ಚೆತ್ತ ಹೂವಿನ ಹಡಗಲಿ ತಾಲೂಕು ಪಂಚಾಯ್ತಿ ಅಧಿಕಾರಿಗಳು ಸಮಸ್ಯೆಗಳನ್ನ ಆದಷ್ಟು ಬೇಗ ಬಗೆಹರಿಸುವ ಭರವಸೆ ನೀಡಿದ್ದರು, ಅದರ ಬೆನ್ನಲ್ಲೇ ಹಗರನೂರು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಪ್ರತಿಯೊಂದು ಕೂಲಿ ಕಾರ್ಮಿಕರ ತಂಡಗಳಿಗೆ ಕುಡಿಯುವ ನೀರಿನ ಕ್ಯಾನ್ ಕೊಡುವ ಮೂಲಕ ಮೊದಲಿಗೆ ನೀರಿನ ದಾಹ ಹಿಂಗಿಸುವ ಪ್ರಯತ್ನಮಾಡಿದರು, ಅದಾದ ಬಳಿಕ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನ ಇಂದು ಕಾರ್ಮಿಕರು ಕೆಲಸಮಾಡುವ ಸ್ಥಳಕ್ಕೆ ಬೇಟಿ ನೀಡಿ ಕೊಡುವ ಮೂಲಕ ಅದರ ಬಳಕೆಯ ಅರಿವು ಮೂಡಿಸಿದರು, ಅದಲ್ಲದೆ ಕೆಲಸಕ್ಕೆ ಬರುವ ಕಾರ್ಮಿಕರ ಮಕ್ಕಳಿಗೆ ನೆರಳಿನ ವ್ಯವಸ್ಥೆಯನ್ನ ಸಹ ಮಾಡಿದ್ದಾರೆ.

ಇನ್ನು ಬೇಸಿಗೆ ಬಿಸಿಲಿನ ಕಾರಣಕ್ಕೆ ಸರ್ಕಾರ ಕಡಿತಗೊಳಿಸಿದ್ದ ಶೇಕಡಾ 30% ರಷ್ಟು ಕೆಲಸವನ್ನ ಕೂಡ ಇಲ್ಲಿನ ಕಾರ್ಮಿಕರಿಗೆ ತಲುಪಿಸುವ ಮೂಲಕ ನಮ್ಮ ವರದಿಗೆ ಸ್ಪಂದಿಸಿದ್ದಾರೆ. ನಮ್ಮ ವರದಿಗೆ ಸ್ಪಂದಿಸಿ ಕೂಲಿ ಕಾರ್ಮಿಕರ ಕಷ್ಟಗಳನ್ನ ದೂರ ಮಾಡಿದ ಹೂವಿನ ಹಡಗಲಿ ತಾಲೂಕು ಪಂಚಾಯ್ತಿ ಮತ್ತು ಹಗರನೂರು ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನ ಅರ್ಪಿಸುತ್ತದೆ ಹಂಪಿ ಮಿರರ್, ಒಂದು ವೇಳೆ ಈ ಹಿಂದಿನ ನಿರ್ಲಕ್ಷ ಮತ್ತೆ ಮುಂದುವರೆದರೆ ನಮ್ಮ ಸುದ್ದಿಯ ಸ್ವರೂಪ ಬದಲಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತೆ.

ಇನ್ನು ಕಳೆದ ವರ್ಷ ಇದೇ ನರೇಗ ಯೋಜನೆಯ ಅನುಷ್ಟಾನಕ್ಕೆ ಹೂವಿನಹಡಗಲಿ ತಾಲೂಕು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿತ್ತು ಎನ್ನುವುದನ್ನ ಇಲ್ಲಿ ನೆನಪಿಸಿಕೊಳ್ಳಲೇಬೇಕು. ಅದರ ಜೊತೆ ನರೇಗ ಯೋಜನೆ ಅಡಿಯಲ್ಲಿ ಪ್ರಾರಂಭಮಾಡಿರುವ ಉದ್ಯೋಗ ಖಾತ್ರಿ ಕಾಮಗಾರಿಯ ಫಲ ಇದೀಗ ತಾಲೂಕಿನೆಲ್ಲೆಡೆ ಲಭಿಸುತ್ತಿದೆ. ಬಿದ್ದ ಮಳೆ ನೀರು ಅದೇ ಭೂಮಿಯಲ್ಲಿ ಹಿಂಗುವುದರಿಂದ ಮಳೆ ನೀರು ನದಿ ಮೂಲಕ ಸಮುದ್ರ ಸೇರುವುದು ತಪ್ಪಿ ಇದೀಗ ಈ ಬಾಗದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗಿರುವುದು ಕೂಡ ಕಂಡು ಬರುತ್ತಿದೆ. ಹತ್ತು ವರ್ಷಗಳ ಹಿಂದೆ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಇದೀಗ ಜೀವ ಜಲ ಜಿನುಗುತಿದ್ದು ಇದೇ ರೀತಿಯ ಕಾಮಗಾರಿ ಮುಂದುವರೆಯಬೇಕೆನ್ನುವುದು ನಮ್ಮ ಒತ್ತಾಯವಾಗಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.