You are currently viewing ಭೀಕರ್ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ದುರ್ಮರಣ. ಸಾವನ್ನಪ್ಪಿದವರಿಗೆ ಪರಿಹಾರ ಸಿಗುವುದು ಕೂಡ ಕಷ್ಟಸಾಧ್ಯ.

ಭೀಕರ್ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ದುರ್ಮರಣ. ಸಾವನ್ನಪ್ಪಿದವರಿಗೆ ಪರಿಹಾರ ಸಿಗುವುದು ಕೂಡ ಕಷ್ಟಸಾಧ್ಯ.

ವಿಜಯನಗರ…ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದೆ‌. ಟ್ರ್ಯಾಕ್ಸನ ಆಕ್ಸಲ್ ಕಟ್ ಆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಚಾಲಕ ಸಿದ್ದಯ್ಯ ಕಾಳಗಿ 48ವರ್ಷ, ಕಲ್ಲವ್ವ 60ವರ್ಷ, ಕುಂತವ್ವ 50ವರ್ಷ, ನೀಲಮ್ಮ 54ವರ್ಷ, ಮತ್ತು ಲಕ್ಷ್ಮೀಬಾಯಿ 60ವರ್ಷ, ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ವಿಜಯಪುರ ಜಿಲ್ಲೆಯ ನಿಡಗುಂಡಿ ಗ್ರಾಮದವರಾಗಿದ್ದು,ನಿಡಗುಂದಿ ಗ್ರಾಮದಿಂದ  ರಾಮೇಶ್ವರಕ್ಕೆ ಪ್ರಯಾಣಿಸುತ್ತಿದ್ದರು.ಬಣವಿಕಲ್ಲು ಗ್ರಾಮದ ಬಳಿ ಬರುತಿದ್ದಂತೆ ಟ್ರಾಕ್ಸ್ನ ಆಕ್ಸಲ್ ತುಂಡಾಗಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದರೆ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಸ್ಥಳಕ್ಕೆ ಕಾನಾಹೊಸಳ್ಳಿ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದುರಂತ ಎಂದರೆ ಈ ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕರಿಗೆ ಪರಿಹಾರ ಸಿಗುವುದು ಕೂಡ ಕಷ್ಟ ಸಾಧ್ಯ ಎನ್ನಲಾಗಿದೆ. ಕಾರಣ ಈ ಪ್ರಯಾಣಿಕರು ಪ್ರಯಾಣಿಸುತಿದ್ದ ಟ್ರ್ಯಾಕ್ಸ್ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿದ್ದು, ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿದ ವಾಹನವನ್ನ ಖಾಸಗಿಯಾಗಿ ಬಳಕೆ ಮಾಡುವ ಹಾಗಿಲ್ಲ. ಒಂದು ವೇಳೆ ಈ ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲರೂ ಈ ವಾಹನದ ಮಾಲೀಕನ ರಕ್ತ ಸಂಭಂದಿಗಳಾಗಿದ್ದರೆ ಮಾತ್ರ ಮೃತರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ.

ಹೌದು ಏನಿದು ಬಿಳಿ ಮತ್ತು ಹಳದಿ ಬಣ್ಣದ ನಂಬರ್ ಪ್ಲೇಟಿನ ಹಿನ್ನೆಲೆ.

ನಾವು ಸ್ವಂತ ಬಳಕೆಗೆ ವಾಹನ ಖರೀದಿಸಿದರೆ ಅದು ಬಿಳಿ ಬಣ್ಣದ ನಂಬರ್ ಪ್ಲೇಟನ್ನ ಹೊಂದಿರುತ್ತದೆ. ಈ ವಾಹನವನ್ನ ಸ್ವಂತಕ್ಕೆ ಬಳಕೆ ಮಾಡಲು ಮಾತ್ರ ಸಾಧ್ಯ. ಒಂದು ವೇಳೆ ಹಣ ಗಳಿಕೆಗೆ ಈ ವಾಹನವನ್ನ ಬಳಸುವ ಹಾಗಿಲ್ಲ, ಕಾರಣ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನಕ್ಕೆ ಲೈಪ್ ಟೈಂ ರೋಡ್ ಟ್ಯಾಕ್ಸನ್ನ ಮೊದಲಿಗೆ ಕಟ್ಟುವ ಮೂಲಕ ವಾಹನವನ್ನ ರಿಜಿಷ್ಟ್ರೇಷನ್ ಮಾಡಲಾಗಿರುತ್ತೆ. ಅದೇರೀತಿ ಈ ವಾಹನಕ್ಕೆ ಮಾಡಲಾಗಿರುವ ಇನ್ಸುರೆನ್ಸನಲ್ಲಿ ಕೂಡ ಬದಲಾವಣೆ ಇರುತ್ತೆ.

ಈ ವಾಹನದಲ್ಲಿ ಪ್ರಯಾಣಿಸುವ ಮಾಲೀಕ ಮತ್ತು ಆತನ ರಕ್ತ ಸಂಭಂದಿಗಳಿಗೆ ಮತ್ತು ವಾಹನಕ್ಕೆ ಹಾಗೂ ರಸ್ತೆಯಲ್ಲಿ ಸಂಚರಿಸುವ ಯಾವುದೇ ಜೀವ ನಿರ್ಜೀವ ವಸ್ತುಗಳಿಗೆ ಹಾನಿ ಉಂಟಾದರೆ ಮಾತ್ರ ಅದರ ನಷ್ಟವನ್ನ ಭರಿಸಿಕೊಡುತ್ತದೆ ವಿಮಾ ಕಂಪನಿ. ಅದನ್ನ ಹೊರತುಪಡಿಸಿ ಬೇರೆ ಪ್ರಯಾಣಿಕರು ಈ ವಾಹನದಲ್ಲಿ ಸಾವನ್ನಪ್ಪಿದರೆ ಪರಿಹಾರವನ್ನ ವಿಮಾ ಕಂಪನಿ ನೀಡಲು ಒಪ್ಪುವುದಿಲ್ಲ.

ಹೌದು ಪ್ರಯಾಣಿಕರ ಸುರಕ್ಷತೆಗಾಗಿಯೇ ಪ್ರತ್ತ್ಯೇಕ ವಿಮೆ ಬರಿಸಿಕೊಳ್ಳುತ್ತದೆ ಸಂಭಂದಪಟ್ಟ ವಿಮಾ ಕಂಪನಿಗಳು, ಹೀಗೆ ಪ್ರತ್ಯೇಕ ವಿಮೆ ಕಟ್ಟಿಸಿಕೊಳ್ಳುವ ವಾಹನಗಳು ಖಡ್ಡಾಯವಾಗಿ ಹಳದಿ ಬಣ್ಣದ ನಂಬರ್ ಪ್ಲೇಟನ್ನ ಹೊಂದಿರುತ್ತವೆ. ಸಹಜವಾಗಿ ನಾವು ಪ್ರಯಾಣಿಸುವ ಕೆ.ಎಸ್.ಆರ್.ಟಿ.ಸಿ.ಅಥವಾ ಖಾಸಗಿ ವಾಹನದ ನಂಬರ್ ಪ್ಲೇಟನ್ನ ಒಂದು ಸಾರಿ ಪರೀಕ್ಷಿಸಿ, ಅದು ಖಡ್ಡಾಯವಾಗಿ ಹಳದಿ ಬಣ್ಣದ ನಂಬರ್ ಪ್ಲೇಟಾಗಿರುತ್ತೆ, ಅಂದರೆ ಪ್ರಯಾಣಿಕರು ಈ ಹಳದಿ ಬಣ್ಣದ ನಂಬರ್ ಪ್ಲೇಟಿನಲ್ಲಿ ಸಂಚರಿಸುವುದು ಸುರಕ್ಷಿತ.

ಎಂದರೆ ಯಾವುದೇ ಅಪಘಾತದಲ್ಲಿ ಪ್ರಯಾಣಿಕರು ಸಾವನ್ನಪ್ಪಿದರೆ ಅವರ ಕುಟುಂಭಕ್ಕೆ ಇಂತಿಷ್ಟು ಪರಿಹಾರ ಎಂದು ವಿಮಾ ಕಂಪನಿಗಳು ಕೊಡುತ್ತವೆ. ಒಂದು ವೇಳೆ ವಿಮಾ ಕಂಪನಿ ಕೊಡದೆ ಇದ್ದರೆ ನ್ಯಾಯಾಲಯದ ಮೂಲಕ ವ್ಯಕ್ತಿಯ ಸಂಪಾದನೆ ಅರ್ಹತೆ ಅನುಸಾರವಾಗಿ ಪರಿಹಾರವನ್ನ ಪಡೆಯಲು ಮೃತರ ಸಂಭಂದಿಗಳಿಗೆ ಅವಕಾಶ ಇರುತ್ತೆ.

ಹೌದು ಕಾರ್, ಟ್ರ್ಯಾಕ್ಸ್, ಮಿನಿ ಬಸ್, ಬಸ್, ಸೇರಿದಂತೆ ಇನ್ನಿತರ ವಾಹಗಳಲ್ಲಿ ಸಂಚರಿಸುವ ಪ್ರತಿಯೊಬ್ಬ ಪ್ರಯಾಣಿಕರು ಗಮನಿಸಬೇಕಾದದ್ದು ಆ ವಾಹನದ ನಂಬರ್ ಪ್ಲೇಟನ್ನ, ಅದು ಒಂದು ವೇಳೆ ಬಿಳಿ ಬಣ್ಣದ ನಂಬರ್ ಪ್ಲೇಟನ್ನ ಹೊಂದಿದ್ದರೆ ಯಾವುದೇ ಕಾರಣಕ್ಕೂ ಅಂತಾ ವಾಹನದಲ್ಲಿ ಪ್ರಯಾಣಿಸಲು ಮುಂದಾಗಬೇಡಿ, ಯಾಕೆಂದ್ರೆ ಅದು ಪ್ರಯಾಣಿಕರು ಪ್ರಯಾಣಿಸಲು ಯೋಗ್ಯವಲ್ಲದ ವಾಹನ, ಅಂದರೆ ಆ ವಾಹನದ ಮಾಲೀಕ ಮತ್ತು ಆತನ ರಕ್ತ ಸಂಭಂದಿಗಳು ಸಂಚರಿಸುವುದಕ್ಕೆ ಮಾತ್ರ ಆ ವಾಹನ ಸೀಮಿತವಾಗಿರುತ್ತೆ.

ಒಂದು ವೇಳೆ ಅದು ಹಳದಿ ಬಣ್ಣದ ನಂಬರ್ ಪ್ಲೇಟನ್ನ ಹೊಂದಿದ್ದರೆ ನಿಶ್ಚಿಂತೆಯಿಂದ ಅಂತಾ ವಾಹನದಲ್ಲಿ ಪ್ರಯಾಣಿಸಿ, ಯಾಕೆಂದರೆ ತನ್ನ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಪ್ರತಿವರ್ಷ ದುಪ್ಪಟ್ಟು ಇನ್ಸುರೆನ್ಸ್ ಹಣ ಭರಿಸುತ್ತಾನೆ ಆ ವಾಹನದ ಮಾಲೀಕ. ಅದರ ಜೊತೆಗೆ ಟೂರಿಸ್ಟ್ ವಾಹನದ ಪರವಾನಿಗೆ, ಮತ್ತು ಆಲ್ ಇಂಡಿಯಾ ಪರ್ಮೀಟ್ ಮತ್ತು ಸ್ಟೇಟ್ ಪರ್ಮೀಟನ್ನ ಪಡೆದು ಈ ಹಳದಿ ಬಣ್ಣದ ವಾಹನ ನಡೆಸುತ್ತಾನೆ ಈ ವಾಹನದ ಮಾಲೀಕ, ಹಾಗಾಗಿ ಇಂತಾ ಹಳದಿ ಬಣ್ಣದ ನಂಬರ್ ಪ್ಲೇಟ್ ವಾಹನದಲ್ಲಿ ಪ್ರಯಾಣಿಕರು ಸಂಚರಿಸುವುದು ಸುರಕ್ಷಿತವಾಗಿರುತ್ತೆ.

ಇನ್ನು ಅದೇ ರೀತಿಯಾಗಿ ಸರಕು ಸಾಗಾಣಿಕೆಯ ವಾಹನಗಳಲ್ಲಿ ಕೂಡ ಇದೇ ನಿಯಮ ಇರುತ್ತೆ. ಬಿಳಿ ಬಣ್ಣದ ಸರಕು ಸಾಗಾಣಿಕೆಯ ವಾಹನದಲ್ಲಿ ನಿಮ್ಮ ಸರಕನ್ನ ಸಾಗಾಟಮಾಡಿ ಏನಾದರು ಹಾನಿ ಸಂಭವಿಸಿದರೆ, ಅದರ ನಷ್ಟವನ್ನ ಸಂಭಂದಪಟ್ಟ ಇನ್ಸುರೆನ್ಸ್ ಕಂಪನಿ ಭರಿಸಿಕೊಡುವುದಿಲ್ಲ. ಅದೇ ರೀತಿಯ ಹಳದಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಸರಕು ಸಾಗಾಣಿಕೆಯ ವಾಹನದಲ್ಲಿ ನಿಮ್ಮ ಸರಕನ್ನ ಸಾಗಾಟಮಾಡಿ ಏನಾದರು ಹಾನಿ ಸಂಭವಿಸಿದರೆ ಅದರ ಹಾನಿಯನ್ನ ಭರಿಸಿಕೊಡುತ್ತೆ ವಿಮಾ ಕಂಪನಿ.

ಇನ್ನು ಬಿಳಿ ಬಣ್ಣದ ವಾಹನದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿರುವುದು ಗೊತ್ತಿದ್ದರೂ ಪೊಲೀಸ್ ಇಲಾಖೆ ಕಣ್ಣಿದ್ದು ಕುರುಡರಂತೆ ಸುಮ್ಮನಿರುತ್ತದೆ, ಒಂದು ವೇಳೆ ಬಿಳಿ ಬಣ್ಣದ ವಾಹನ ಪ್ರಯಾಣಿಕರನ್ನ ತುಂಬಿಕೊಂಡು  ಪೊಲೀಸರ ಮುಂದೆ ಬಂದರೆ ಐದು ನೂರು ಸಾವಿರ ರೂಪಾಯಿ ಲಂಚ ಪಡೆದು ಸುಮ್ಮನೆ ಬಿಡುವುದು ಇದುವರೆಗೆ ನಡೆದುಕೊಂಡು ಬಂದಿರುವ ವಾಡಿಕೆಯಾಗಿದೆ. ಆ ಕ್ಷಣಕ್ಕೆ ಪೊಲೀಸ್ ಇಲಾಖೆ ಎಚ್ಷೆತ್ತು ಆ ವಾಹನವನ್ನ ತಡೆದು ಜಪ್ತುಮಾಡುವ ಅವಕಾಶ ಇರುತ್ತೆ.

ಅದರ ಜೊತೆ ಆ ವಾಹನದ ಮಾಲೀಕನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವ ಅವಕಾಶ ಕೂಡ ಇರುತ್ತೆ. ಆದರೆ ಇದನ್ನ ಯಾವ ಅಧಿಕಾರಿಗಳು ಮಾಡದೆ ಸುಮ್ಮನಿರುವುದು ದುರಂತದ ವಿಚಾರ. ಹಾಗಾಗಿ ಬಹುತೇಕ ಕಡೆಗಳಲ್ಲಿ ಬಿಳಿ ಬಣ್ಣದ ವಾಹನಗಳಲ್ಲಿ ಈಗಲೂ ಪ್ರಯಾಣಿಕರ ಸಾಗಾಟ ನಡೆದೇ ಇದೆ.

ಸಾಮಾಜಿಕ ಕಳಕಳಿಯಿಂದ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಂಭಂದ ಮಾಡಿದ ವರದಿ ಇದು. ಈಗಲಾದ್ರು ಎಚ್ಚೆತ್ತು ಹಳದಿ ಬಣ್ಣದ ವಾಹನದಲ್ಲಿ ಪ್ರಯಾಣಿಸುವ ಮೂಲಕ ನಿಮ್ಮನ್ನ ಮತ್ತು ನಿಮ್ಮ ಕುಟುಂಭವನ್ನ ರಕ್ಷಿಸಿಕೊಳ್ಳಿ.

ವರದಿ..ಸುವಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.