You are currently viewing ಮಲೆನಾಡಿನಲ್ಲಿ ಮಳೆ ಅಬ್ಬರ, ಬಿಸಿಲ ನಾಡಿನ ನದಿ ಪಾತ್ರದ ಜನಗಳಿಗೆ ಹೆಚ್ಚಿದ ಡವ ಢವ.

ಮಲೆನಾಡಿನಲ್ಲಿ ಮಳೆ ಅಬ್ಬರ, ಬಿಸಿಲ ನಾಡಿನ ನದಿ ಪಾತ್ರದ ಜನಗಳಿಗೆ ಹೆಚ್ಚಿದ ಡವ ಢವ.

ವಿಜಯನಗರ… ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾದ ಕಾರಣ ತುಂಗ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ, ಈ ಕಾರಣದಿಂದ ವಿಜಯನಗರ ಜಿಲ್ಲೆಯ ಮತ್ತು ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕು ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರ ನದಿ ಪಾತ್ರದ ಗ್ರಾಮಗಳಲ್ಲಿ ಜನರು ನದಿಗೆ ಇಳಿಯದಂತಡ ಜಾಗೃತಿ ಮೂಡಿಸುವ ಕೆಲಸವನ್ನ ವಿಜಯನಗರ ಜಿಲ್ಲಾಡಳಿತ ಮಾಡುತ್ತಿದೆ.

ಹೂವಿನಹಡಗಲಿ ತಹಸೀಲ್ದಾರ್ ಪ್ರತಿಭಾ ಅವರು ಕುರವತ್ತಿ,ಬನ್ನಿಹಟ್ಟಿ,ಬ್ಯಾಲಹುಣಸಿ,ಅಂಗೂರು, ಮದಲಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಇಂದು ಭೇಟಿ ನೀಡಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಅದೇರೀತಿ ತಾಲೂಕು ಪಂಚಾಯ್ತಿ ಇಒ, ಕಂದಾಯ ನಿರೀಕ್ಷಕರು, ಪಿಡಿಒಗಳು ಮತ್ತು ಗ್ರಾಮಲೆಕ್ಕಿಗರು ತಮ್ಮ ತಮ್ಮ ವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಮೂಲಕ ಸಂಭವಿಸಬಹುದಾದ ಅವಘಡ ತಪ್ಪಿಸಲು ಮುಂದಾಗಿದ್ದಾರೆ. ಅದೇರೀತಿ ಹಗರಿಬೊಮ್ಮನಹಳ್ಳಿ ತಾಲೂಕು ಮರಬ್ಬಿಹಾಳು ಗ್ರಾಮಪಂಚಾಯ್ತಿ ಅಧಿಕಾರಿಗಳು ಕೂಡ  ಈ ದಿನ ತುಂಗಭದ್ರ ನದಿ ಪಾತ್ರದ ಗ್ರಾಮಗಳಾದ ನಕ್ರಾಳ್ ತಾಂಡ, ಮರಬ್ಬಿಹಾಳು ನಾರಾಯಣದೇವರಕೆರೆ, ಲೋಕಪ್ಪನ ಹೊಲ ಗ್ರಾಮಗಳಲ್ಲಿ ನದಿ ದಂಡೆಗೆ ಹೋಗದಂತೆ ಡಂಗೂರ ಹಾಕಿಸಿ ಜಾಗೃತಿ ಮೂಡಿಸಲಾಗಿದೆ, ಅದರ ಜೊತೆ ಹರಪನಹಳ್ಳಿ ತಾಲೂಕಿನ ತುಂಗಭದ್ರ ನದಿ ದಡದ ಹಲವಾಗಿಲು ಗ್ರಾಮದಲ್ಲಿ ಕೂಡ ಡಂಗೂರ ಸಾರಿ ನದಿಗೆ ಜನ ಜಾನುವಾರುಗಳು ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಮಾಡಿದ್ದಾರೆ. 

ಕಳೆದ ವರ್ಷ ಇದೇ  ಸಂದರ್ಭದಲ್ಲಿ ಈ ಬಾಗದ ರೈತರು ಒಕ್ಕಣಿಮಾಡಿದ ಸಾವಿರಾರು ಚೀಲ ಬತ್ತವನ್ನ ನದಿ ಪಾತ್ರದಲ್ಲಿ ರಾಶಿಮಾಡಿದ್ದರು, ಈ ಸಂದರ್ಭದಲ್ಲಿ ಏಕಾ ಏಕಿ ನದಿ ತುಂಬಿ ಹರಿದು ಸಂಪೂರ್ಣ ಬತ್ತದ ರಾಶಿಗಳು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದವು, ಈ ಕುರಿತು ನಮ್ಮ ಹಂಪಿ‌ ಮಿರರ್ ಸುದ್ದಿ ಪ್ರಸಾರಮಾಡಿ ಸಂಭಂದ ಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹಾಗಾಗಿ ಈ ವರ್ಷ ಮುಂಚಿತ ಒಂದು ದಿನ ನದಿ ಪಾತ್ರದ ಜನ ಸಾಮನ್ಯರಿಗೆ ಎಚ್ಚರಿಸುವ ಕೆಲಸವನ್ನ ವಿಜಯನಗರ ಜಿಲ್ಲಾಡಳಿತ ಮಾಡುತ್ತಿದೆ.  ಇನ್ನು ಇಂದು ಬೆಳಗ್ಗೆಯಿಂದ ಸುಮಾರು 60 ಸಾವಿರ ಕ್ಯೂಸೆಕ್ಸ್  ನಷ್ಟು ನೀರು ತುಂಗಭದ್ರ ನದಿಗೆ ಹರಿದುಬರುತ್ತಿದೆ. ಇದೇ ಒಳ ಹರಿವು ನಾಳೆ ಬೆಳಗ್ಗೆಯಷ್ಟೊತ್ತಿಗೆ ಎರಡು ಪಟ್ಟಾದರೂ ಆಶ್ಚರ್ಯಪಡಬೇಕಿಲ್ಲ, ಅಷ್ಟೊಂದು ಬಾರಿ ಪ್ರಮಾಣದ ಮಳೆ ಮಲೆನಾಡಿನಾಧ್ಯಂತ ಸುರಿಯುತ್ತಿದೆ, ಈ ಕಾರಣದಿಂದ ತುಂಗ ಭದ್ರ ನದಿಗಳು ಅಪಾದ ಮಟ್ಟ ಮೀರಿ ಹರಿಯುವುದಕ್ಕೆ  ಪ್ರಾರಂಬಿಸಿವೆ. ಇನ್ನು ತುಂಗಭದ್ರ  ಜಲಾಶಯದ ಸದ್ಯದ ನೀರಿನ ಮಟ್ಟ ಇಂತಿದೆ.

Date: 07-07-2022
Tungabhadra Dam
Dam F.R.L: 1633.00ft
Present Storage Level: 1618.87 ft
Total Storage Capacity: 105.788 TMC
Present Storage Capacity: 58.212 TMC
Average Inflows (last 24 hours): 60941 c/s
Instant (Live) Inflow: 59757 c/s
Average Outflows (last 24 hours): 248 c/s
TB Bard Limit
HLC AP Border @Km 105.000: 0 c/s
LLC KAR-AP Border @Km 133.700: 0 c/s
LLC TBB Border @Km 250.580: 0 c/s
Tunga Outflow: 49603 c/s
Bhadra Outflow: NA c/s
Last Year:
Level: 1609.85 ft
Cap:34.960 TMC
Inflow: 8144 c/s
Outflow: 257 c/s
Last 10 Yrs AVG
Cap: 26.810 TMC
Inflow: 23328 c/s
Section Officer TB Board.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.