You are currently viewing ಅಂಜನಾದ್ರಿ ಪರ್ವತದಲ್ಲಿ ಹೃದಯಾಘಾತದಿಂದ ಪ್ರವಾಸಿಗ ಸಾವು. ಅವ್ಯವಸ್ಥೆಯ ವಿರುದ್ದ ಸಂಭಂದಿಗಳ ಆಕ್ರೋಶ.

ಅಂಜನಾದ್ರಿ ಪರ್ವತದಲ್ಲಿ ಹೃದಯಾಘಾತದಿಂದ ಪ್ರವಾಸಿಗ ಸಾವು. ಅವ್ಯವಸ್ಥೆಯ ವಿರುದ್ದ ಸಂಭಂದಿಗಳ ಆಕ್ರೋಶ.

ಕೊಪ್ಪಳ…ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾಗಿರುವ ಅಂಜನಾದ್ರಿ ಪರ್ವತದಲ್ಲಿ ಪ್ರವಾಸಿಗನೊಬ್ಬ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಇಂದು ಮದ್ಯಾಹ್ನ ನಡೆದಿದೆ. ಹಿಮಾನ್ಸು ಭಾಟಿಯಾ 32 ವರ್ಷ ಸಾವನ್ನಪ್ಪಿದ ಪ್ರವಾಸಿಗನಾಗಿದ್ದಾನೆ. ಮುಂಬೈ ಮೂಲದ ಆರು ಜನ ಪ್ರವಾಸಿಗರು ಕಳೆದ ಎರಡು ದಿನಗಳಿಂದ ಹಂಪಿಯ ಪ್ರವಾಸ ಕೈಗೊಂಡಿದ್ದು ನಿನ್ನೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ಸ್ಮಾರಕ ವೀಕ್ಷಣೆಮಾಡಿ ಇಂದು ಮದ್ಯಾಹ್ನ ಹನ್ನೆರಡು ಗಂಟೆಯ ಸುಮಾರಿಗೆ ಅಂಜನಾದ್ರಿ ಬೆಟ್ಟ ಹತ್ತಲು ಮುಂದಾಗಿದ್ದಾರೆ.

ಅಂಜನಾದ್ರಿ ಬೆಟ್ಟದ ನೂರಕ್ಕು ಹೆಚ್ವು ಮೆಟ್ಟಿಲು ಹತ್ತುತಿದ್ದಂತೆ ಹಿಮಾನ್ಸು ಭಾಟಿಯ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ನೆಲಕ್ಕೆ ಕುಸಿದ ಹಿಮಾನ್ಸು ಅವರನ್ನ ಜೊತೆಗಿದ್ದ ಸ್ನೇಹಿತರು ಹತ್ತಿರದ ಆನೆಗುಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಮುಂದಾಗಿದ್ದಾರೆ. ದುರಂತ ಎಂದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣಕ್ಕೆ ಅಸ್ವಸ್ಥ ಹಿಮಾನ್ಸು ಅವರನ್ನ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ, ಅಲ್ಲಿ ಕೂಡ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಹಿಮಾನ್ಸು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದುರಂತ ಎಂದರೆ ನಾಳೆ ಮತ್ತು ನಾಡಿದ್ದು ಅಂಜನಾದ್ರಿ ಬೆಟ್ಟಕ್ಕೆ ಲಕ್ಷ ಲಕ್ಷ ಭಕ್ತರು ಬೇಟಿ ನೀಡುವ ಮೂಲಕ ಆಂಜನೇಯ ಸ್ವಾಮಿಯ ಜಾತ್ರೆಯ ಕಾರ್ಯದಲ್ಲಿ ಬಾಗಿಯಾಗಲಿದ್ದಾರೆ. ಆದರೆ ಇಷ್ಟೊಂದು ಭಕ್ತರು ಈ ಸ್ಥಳಕ್ಕೆ ಬೇಟಿ ನೀಡುತಿದ್ದರೂ ತುರ್ತು ಚಿಕಿತ್ಸೆಗೆ ಬೇಕಾದ ಯಾವೊಂದು ಸೌಲಭ್ಯಗಳು ಇಲ್ಲಿ ಇಲ್ಲದಿರುವುದು ಮಾತ್ರ ದುರದೃಷ್ಟಕರ. ದೇಶ ವಿದೇಶದಿಂದ ಲಕ್ಷ ಗಟ್ಟಲೆ ಪ್ರವಾಸಿಗರು, ಭಕ್ತರು ಈ ಸ್ಥಳಕ್ಕೆ ಬೇಟಿ ನೀಡಿದರೂ ಭಕ್ತರ ಆರೋಗ್ಯ ಸುರಕ್ಷತೆಗೆ ಏನೆಲ್ಲ ಸೌಲ್ಯಭ್ಯಗಳನ್ನ ನೀಡಬೇಕು ಅದನ್ನ ನೀಡಿಲ್ಲ ಕೊಪ್ಪಳ ಜಿಲ್ಲಾಡಳಿತ.

ಅದರ ಪರಿಣಾಮ ಮುಂಬೈಯಿಂದ ಪ್ರವಾಸಕ್ಕೆ ಬಂದ ಸಾಪ್ಟವೇರ್ ಹಿಮಾನ್ಸು ಭಾಟಿಯ ಎನ್ನುವ  ಪ್ರವಾಸಿಗ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಘಟನೆಯಿಂದ ಕಂಗಾಲಾಗಿರುವ ಹಿಮಾನ್ಸು ಸ್ನೇಹಿತರು ಇಲ್ಲಿನ ವ್ಯವಸ್ಥೆಯ ವಿರುದ್ದ ಹರಿಹಾಯ್ದು, ಇಂತಾ ಪ್ರಸಿದ್ದ ಯಾತ್ರ ಸ್ಥಳದಲ್ಲಿ ಈರೀತಿಯ ಅವ್ಯವಸ್ಥೆ ಸರಿಯಲ್ಲ ಎಂದು ಸ್ಥಳೀಯ ಆಡಳಿತದ ವಿರುದ್ದ ಹರಿಹಾಯ್ದಿದ್ದಾರೆ. ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳು ಈಗಲಾದ್ರು ಎಚ್ಚೆತ್ತು ಇಲ್ಲಿನ ವ್ಯವಸ್ಥೆಯನ್ನ ಸರಿಪಡಿಸುವ ಮೂಲಕ ಈ ಸ್ಥಳದ ಮಹತ್ವ ಹೆಚ್ಚಿಸಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.