You are currently viewing ವಿದೇಶಿ ಹುಡುಗಿ ಒಲಿಸಿಕೊಂಡ ಹಂಪಿಯ ಆಟೋ ಚಾಲಕ/ಪ್ರವಾಸಿ ಮಾರ್ಗದರ್ಶಿ.

ವಿದೇಶಿ ಹುಡುಗಿ ಒಲಿಸಿಕೊಂಡ ಹಂಪಿಯ ಆಟೋ ಚಾಲಕ/ಪ್ರವಾಸಿ ಮಾರ್ಗದರ್ಶಿ.

ಹೊಸಪೇಟೆ(ವಿಜಯನಗರ) ವಿಶ್ವ ವಿಖ್ಯಾತ ಹಂಪಿಯ ಪ್ರವಾಸಕ್ಕೆ ಬಂದ ಬೆಲ್ಜಿಯಂ ಯುವತಿಯೊಬ್ಬಳು ಹಂಪಿಯ ಆಟೋ ಚಾಲಕನನ್ನ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾಳೆ.

ಹೌದು, ಮೂರು ವರ್ಷದ ಹಿಂದೆಯೇ ವಿಶ್ವ ವಿಖ್ಯಾತ ಹಂಪಿಯ ಪ್ರವಾಸ ಕೈಗೊಂಡಿದ್ದ ಬೆಲ್ಜಿಯಂ ದೇಶದ ಮರಿಯನ್ನೇ ಶ್ರೀ ಜೀಮ್ ಫಿಲಿಪ್ಪೆ ಮತ್ತು ಹಂಪಿಯ ಆಟೋ ಚಾಲಕ ಅನಂತರಾಜು ನಡುವೆ ಪರಿಚಯವಾಗಿದೆ.

ತಂದೆ ಮರಿಯನ್ನೇ ಶ್ರೀ ಜೀಮ್ ಫಿಲಿಪ್ಪೆ ಅವರ ಜೊತೆಗೆ ಪ್ರವಾಸ ಕೈಗೊಂಡಿದ್ದ ಅವರ ತೃತೀಯ ಸುಪುತ್ರಿ ಕೆಮಿಲ್ ಹಾಗೂ ಹಂಪಿಯ ಆಟೋಚಾಲಕ/ ಮಾರ್ಗದರ್ಶಕ ಅನಂತರಾಜುವಿನ ನಡುವೆ ಪ್ರೇಮಾಂಕುರವಾಗಿದೆ, ಈ ಯುವ ಜೋಡಿಗಳ ಪ್ರೇಮವನ್ನ ಯುವಕ ಯುವತಿಯರ ಮನೆಯವರು ಕೂಡ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಹಂಪಿಯ ಶಿವರಾಮ ಅವದೂತರ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ 50ಕ್ಕೂ ಹೆಚ್ಚು ಬೆಲ್ಜಿಯಂ ದೇಶದ ಸಂಭಂದಿಗಳು ಮತ್ತು ಹಂಪಿಯ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಷಿತಾರ್ಥ ನೆರವೇರಿತು.

ಇಂದು ಬೆಳಗ್ಗೆ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಈ ನವ ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಮೂರು ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿದ್ದ ಈ ಜೋಡಿಗಳಿಗೆ ಅಡ್ಡಿಯಾಗಿದ್ದು ಕೊರೊನ ಮಹಾಮಾರಿ. ಕೊರೊನ ಮಹಾಮಾರಿ ಹಟ್ಟಹಾಸದಿಂದ ಒಂದು ದೇಶದ ಪ್ರಜೆ ಮತ್ತೊಂದು ದೇಶಕ್ಕೆ ಹೊಗದಂತ ಪರಿಸ್ಥಿತಿ ನಿರ್ಮಾಣ ಆಗಿತ್ತು, ಈ ಸಂದರ್ಭದಲ್ಲಿ ಪೊನ್ ಸಂಪರ್ಕದಲ್ಲಿದ್ದ ಈ ಯುವ ಜೋಡಿಗಳು ತಮ್ಮ ಪ್ರೇಮವನ್ನ ಜತನಮಾಡಿಕೊಂಡು ಬಂದಿದ್ದರು, ಇತ್ತೀಚೆಗೆ ಕೊರೊನ ನಿಯಂತ್ರಣಕ್ಕೆ ಬಂದ ಮೇಲೆ, ವಿದೇಶಗರಿಗೆ ನಮ್ಮ ದೇಶಕ್ಕೆ ಪ್ರವೇಶ ಸಿಗುತಿದ್ದಂತೆ ಕೆಮಿಲ್ ಕುಟುಂಬ ಮೊದಲಿಗೆ ಮಾಡಿದ್ದೇ ಮಗಳ ಮದುವೆಯ ತಯಾರಿಯನ್ನ.

ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದ ಕೆಮಿಲ್ ಕುಟುಂಬ, ಹಂಪಿಯ ಗತ ವೈಭವದ ಇತಿಹಾಸ ಮತ್ತು ಹಿಂದೂ ಸಂಪ್ರದಾಯಕ್ಕೆ ಮಾರು ಹೋಗಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಡಲು ಮುಂದಾದರು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.