You are currently viewing ಕಾಪರ್ ವೈರ್ ಕಳ್ಳರ ಬಂದನ.

ಕಾಪರ್ ವೈರ್ ಕಳ್ಳರ ಬಂದನ.

ವಿಜಯನಗರ.. ರೈತರ ಜಮೀನಿನಲ್ಲಿ ಅಳವಡಿಸಿದ್ದ ಮೊಟರ್, ಕಾಪರ್ ವೈರ್ ಹಾಗೂ ಸ್ಟಟರ್ ಕಳ್ಳತನಮಾಡಿದ್ದ ನಾಲ್ವರು ಆರೋಪಿಗಳನ್ನ ಬಂದಿಸುವಲ್ಲಿ ಹಗರಿಬೊಮ್ಮನಹಳ್ಳಿ ವೃತ್ತದ ಪೊಲೀಸರು ಯಶಸ್ವಿಯಾಗಿದ್ದಾರೆ.
1)ಹನುಮಂತಪ್ಪ.
2)ಸುರೇಶ ಕೊರವರ.
3)ಭಜಂತ್ರಿ ಜಗದೀಶ.
4)ಮಾರುತಿ.
ಬಂದಿತ ಆರೋಪಿಗಳಾಗಿದ್ದಾರೆ.

ಬಂದಿತರಿಂದ 48ಸಾವಿರ ಮೌಲ್ಯದ 210 ಮೀಟರ್ ಕಾಪರ್ ವೈರ್, ಹಾಗೂ ಬೇರೆ ಬೇರೆ ಕಳ್ಳತನ ಪ್ರಕರಣದಲ್ಲಿ ಕಾಪರ್ ಕಳ್ಳತನಮಾಡಿ  ಮಾರಾಟಮಾಡಿದ್ದ 3ಲಕ್ಷ 50ಸಾವಿರ ಹಣ ಹಾಗೂ ಒಂದು ಬುಲೇರೊ ವಾಹನ ಮತ್ತು ಮೊಟರ್ ವಶಕ್ಕೆ ಪಡೆದಿದ್ದಾರೆ.
ಹಂಪಸಾಗರ-2 ಗ್ರಾಮದ ತಟ್ಟಿ ಶಶಿಧರ ಎಂಬ ರೈತ ತಮ್ಮ ಹೊಲದಲ್ಲಿ ಅಳವಡಿಸಿದ್ದ ಮೊಟರ್ ವೈರ್. ಸ್ಟಾಟರ್ ಕಳ್ಳತನವಾಗಿರುವ ಕುರಿತು ದೂರು ನೀಡಿದ್ದ, ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಹಗರಿಬೊಮ್ಮನಹಳ್ಳಿಯ ಸಿ.ಪಿ.ಐ. ಟಿ.ಮಂಜಣ್ಣ. ಹಾಗೂ ತಂಬ್ರಳ್ಳಿ ಪಿ.ಎಸ್.ಐ.ಮಾರುತಿ. ನೇತೃತ್ವದ ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ವೆಂಕಟೇಶ್.ಕಿರಣ್. ದಶರತ.ಗುರುರಾಜ.ದೊಡ್ಡಬಸವರಾಜ.ವಿರೇಶ.ರೇವಣಸಿದ್ದಪ್ಪ.ಪ್ರಶಾಂತ.ಶಿವಾನಂದ್.ಶಿವರಾಜ ಪ್ರಕರಣವನ್ನ ಭೇದಿಸುವಲ್ಲಿ ಬಾಗಿಯಾಗಿದ್ದರು.


ಹಂಪಸಾಗರ-3ರಲ್ಲಿ ಇದ್ದ ಈ ನಾಲ್ವರು ಆರೋಪಿಗಳನ್ನ ಖಚಿತ ಮಾಹಿತಿ ಮೇರೆಗೆ ಬಂದಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ. ಒಟ್ಟು ಆರು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿರುವ ಮಾಹಿತಿ ಹೊರ ಬಿದ್ದಿದೆ. ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಹಾಗೂ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮತ್ತು ಗುಡೇಕೊಟೆ ಪೊಲೀಸ್ ಠಾಣೆಯಲ್ಲಿ ನಡೆದ ಒಂದು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಆರು ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ.
ಸದ್ಯಕ್ಕೆ ಸತ್ಯ ಬಾಯಿಬಿಡಿಸಿ ನ್ಯಾಯಾಂಗ ಬಂದನಕ್ಕೆ ಆರೋಪಿಗಳನ್ನ ಒಪ್ಪಿಸಲಾಗಿದೆ.

ವರದಿ..ಸುಬಾನಿ ಪಿಂಜಾರ.ವಿಜಯನಗರ.