You are currently viewing ಜಿಎಸ್‌ಟಿ ದಂಡದ ಮನ್ನಾ ಮಾಡಲು 80 ಸಾವಿರ ಬೇಡಿಕೆ ಇಟ್ಟಿದ್ದ ಕೇಂದ್ರ ತೆರಿಗೆ ಕಚೇರಿಯ ಅಧೀಕ್ಷಕ ಮಧುಸೂಧನ್: ರೆಡ್ ಹ್ಯಾಂಡಾಗಿ ಸಿಬಿಐ.(ಎ.ಸಿ.ಬಿ) ಬಲೆಗೆ

ಜಿಎಸ್‌ಟಿ ದಂಡದ ಮನ್ನಾ ಮಾಡಲು 80 ಸಾವಿರ ಬೇಡಿಕೆ ಇಟ್ಟಿದ್ದ ಕೇಂದ್ರ ತೆರಿಗೆ ಕಚೇರಿಯ ಅಧೀಕ್ಷಕ ಮಧುಸೂಧನ್: ರೆಡ್ ಹ್ಯಾಂಡಾಗಿ ಸಿಬಿಐ.(ಎ.ಸಿ.ಬಿ) ಬಲೆಗೆ

ಬಳ್ಳಾರಿ,ಜೂ.06: ಬಳ್ಳಾರಿಯ ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರು ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರ ಈಶ್ವರಯ್ಯ ಅವರ ಜಿಎಸ್‌ಟಿ ದಂಡದ ಹಣ ರದ್ದುಮಾಡಿ ಪ್ರಕರಣ ಮುಕ್ತಾಯ ಮಾಡಲು 80 ಸಾವಿರ ರೂ.ಗಳು ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದಾಗ ಸಿಬಿಐ(ಎಸಿಬಿ)ಬೆಂಗಳೂರು ಮತ್ತು ಬಳ್ಳಾರಿ ಎಸಿಬಿ ತಂಡಗಳು ಕ್ಷೀಪ್ರ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಮಧುಸೂದನ್ ಅವರನ್ನು ಖೆಡ್ಡಾಗೆ ಬಿಳಿಸುವಲ್ಲಿ ಯಶಸ್ವಿಯಾಗಿವೆ.

ಸಿಬಿಐ(ಎಸಿಬಿ) ಬೆಂಗಳೂರಿನ ವಿಶೇಷ ತಂಡವು ಮತ್ತು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳ ತಂಡಗಳು ಸೋಮವಾರ ಯಶಸ್ವಿ ಕಾರ್ಯಾಚರಣೆ ನಡೆಸಿ ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರನ್ನು ಬಲೆಗೆ ಬಿಳಿಸಿವೆ.

ಬಳ್ಳಾರಿ ನಗರದ ನಿವಾಸಿಯಾದ ಈಶ್ವರಯ್ಯ ತಂದೆ ಜಿ.ನರಸಿಂಹಯ್ಯ ಅವರು ವಿವಿಧ ಇಲಾಖೆಗಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರಾಗಿದ್ದರು. ಇವರ ಜಿಎಸ್‌ಟಿ ದಂಡದ ಹಣ ರದ್ದು ಮಾಡಿ ಪ್ರಕರಣ ಮುಕ್ತಾಯ ಮಾಡಲು ಈಶ್ವರಯ್ಯ ಅವರಿಗೆ ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರು 80 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದು,ಈ ಸಂಬAಧ ಸಿಬಿಐ(ಎಸಿಬಿ) ಬೆಂಗಳೂರು ಅವರಲ್ಲಿ ಪ್ರಕರಣ ದಾಖಲಾಗಿತ್ತು.

ಸಿಬಿಐ(ಎಸಿಬಿ) ಬೆಂಗಳೂರು ವಿಶೇಷ ತಂಡವು ಬಳ್ಳಾರಿಗೆ ಆಗಮಿಸಿ ಮಧುಸೂದನ್ ಅವರು ಲಂಚದ ಹಣ 80 ಸಾವಿರ ರೂ.ಗಳು ಸ್ವೀಕರಿಸುತ್ತಿದ್ದಾಗ ಯಶಸ್ವಿ ಟ್ರ್ಯಾಪ್ ಮಾಡಲಾಗಿದೆ.

ಈ ಕಾರ್ಯಾಚರಣೆಯು ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯ ಸಹಯೋಗ ಮತ್ತು ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ಬಳ್ಳಾರಿ ಎಸಿಬಿ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.

==