ವಿಜಯನಗರ….ವಿಶ್ವ ವಿಖ್ಯಾತ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದೀಗ ಪ್ರವಾಸಿಗರಿಲ್ಲದೆ ಹಂಪಿ ಬಣಗುಡುತಿದ್ದು ಪ್ರವಾಸೋಧ್ಯಮದ ಮೇಲೆ ಅವಲಂಭನೆಯಾಗಿರುವ ಮಾರ್ಗದರ್ಶಿಗಳಿಗೆ ಆದಾಯ ಇಲ್ಲದೆ ಕುಟುಂಭ ನಿರ್ವಣೆಗೆ ಕಣ್ಣೀರಿಡುತಿದ್ದಾರೆ, ಕಳೆದ ಒಂದು ವರ್ಷದಿಂದ ಹಂಪಿಯ ಕಡೆ ಪ್ರವಾಸಿಗರು ಸುಳಿಯದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗೈಡ್ ಗಳು ನೆರವಿನ ಸಹಾಯಸ್ತಕ್ಕೆ ಸರ್ಕಾರಕ್ಕೆ ಕೈ ಚಾಚಿದ್ದಾರೆ.
ಕೊರೊನ ಮಹಾಮಾರಿಯ ಹಾವಳಿಯಿಂದ ಕಂಗೆಟ್ಟಿದ್ದ ಜನಸಾಮಾನ್ಯರು ಹಂಪಿಯಿಂದ ದೂರ ಉಳಿದಿದ್ದರು, ಆದರೆ ಇತ್ತೀಚೆಗೆ ಅಂದರೆ ಎರಡರಿಂದ ಮೂರು ತಿಂಗಳಿನಿಂದ ಪ್ರವಾಸೋಧ್ಯಮ ಮತ್ತೆ ಚೇತರಿಕೆಯತ್ತ ಸಾಗಿತ್ತು, ಆದರೆ ಮೂರನೆ ಅಲೆ ಅದಕ್ಕೂ ಕೂಡ ತಣ್ಣೀರು ಎರಚಿದೆ. ವೀಕೆಂಡ್ ಲಾಕ್ಡೌನ್ ನೈಟ್ ಕರ್ಪ್ಯೂ ಎಂಬ ನಿಯಮಗಳು ಜಾರಿಯಾಗುತಿದ್ದಂತೆ ಹಂಪಿ ಮತ್ತೆ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.
ಇದರಿಂದ ಕಂಗಾಲಾಗಿರುವ ಪ್ರವಾಸಿಮಾರ್ಗದರ್ಶಿಗಳು ಇಂದು ಸರ್ಕಾರಕ್ಕೆ ಮನವಿಮಾಡಿಕೊಂಡು ಕೂಡಲೆ ನೆರವು ನೀಡುವಂತೆ ಬೇಡಿಕೊಂಡಿದ್ದಾರೆ.ಇನ್ನು ಹಂಪೆಯ ಕೂಗಳತೆಯಲ್ಲಿರುವ ಸಚಿವ ಆನಂದ್ ಸಿಂಗ್ ಅವರಿಗೂ ವಿನಂತಿಸಿಕೊಂಡಿರುವ ಗೈಡ್ ಗಳು ಆದಷ್ಟು ಬೇಗ ತಮ್ಮ ಈ ಮನವಿಯನ್ನ ಪುರಸ್ಕರಿಸುವಂತೆ ಬೇಡಿಕೊಂಡಿದ್ದಾರೆ, ಇನ್ನು ಈ ಹಿಂದೆ ಇನಪೋಸಿಸ್ ಪೌಂಡೇಷನ್ ಮುಖ್ಯಸ್ಥರಾದ ಸುಧಾ ಮೂರ್ತಿಯವರು ಗೈಡಗಳ ಪರಿಸ್ಥಿತಿ ಕಂಡು ಮರುಗಿ ಕಳೆದ ಲಾಕಡೌನ್ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಪ್ರವಾಸಿ ಮಾರ್ಗದರ್ಶಿಗಳ ಬ್ಯಾಂಕ್ ಖಾತೆಗೆ ತಲಾ ಹತ್ತು ಸಾವಿರ ಹಣವನ್ನ ಜಮಾ ಮಾಡಿದ್ದರು.
ಆದರೆ ಸರ್ಕಾರಕ್ಕೆ ಯಾಕೆ ನಮ್ಮ ಈ ಕಷ್ಟ ಅರ್ಥವಾಗುತ್ತಿಲ್ಲ ಎಂದು ಗೈಡ್ ಗಳು ಗೋಳಾಡುತಿದ್ದಾರೆ. ಈ ಸಂಭಂದ ಇಂದು ಬೆಳಗ್ಗೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಸೇರಿದ ಮಾರ್ಗದರ್ಶಿಗಳು ತಮ್ಮ ಕುಟುಂಭ ನಿರ್ವಹಣೆ, ಮಕ್ಕಳಿಗೆ ಶಿಕ್ಷಣ, ಬಟ್ಟೆ ಊಟ ಕೊಡುವುದು ಕಷ್ಟವಾಗುತ್ತಿದೆ, ಪ್ರತಿ ತಿಂಗಳು ಇಂತಿಷ್ಟು ಎಂದು ನಮಗೆ ಗೌರವ ಧನ ನಿಗದಿಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ಶ್ರೀವಿದ್ಯಾರಣ್ಯ ಪ್ರವಾಸಿ ಮಾರ್ಗದರ್ಶಿ ಸಂಘ ಅಧ್ಯಕ್ಷ ಗೋಪಾಲ .ವಿ ಉಪಾಧ್ಯಕ್ಷ ಜೆ. ನಾಗರಾಜ, ಪ್ರದಾನ ಕಾರ್ಯದರ್ಶಿ ಹೆಚ್ ಬಸವರಾಜ,ಗೋಪಿನಾಥ್,ಮತ್ತು ಕೃಷ್ಣದೇವರಾಯ ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಎ.ಶಿವಕುಮಾರ್, ಉಪಾಧ್ಯಕ್ಷರು ಹೇಮಂತ್ ಪ್ರದಾನ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ ಸೇರಿದಂತೆ ಇನ್ನೂ ಹಲವು ಮಾರ್ಗದರ್ಶಿಗಳು ಸರ್ಕಾರವನ್ನ ವಿನಂತಿಸಿದರು.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ.ವಿಜಯನಗರ.