You are currently viewing ಹಂಪಿ ಕೇವಲ ಪ್ರವಾಸಿ ತಾಣಮಾತ್ರವಲ್ಲ, ಜೀವ ವೈವಿಧ್ಯೆತೆಯನ್ನ ತನ್ನಲ್ಲಿ ಅಡಗಿಸಿಕೊಂಡಿದೆ.

ಹಂಪಿ ಕೇವಲ ಪ್ರವಾಸಿ ತಾಣಮಾತ್ರವಲ್ಲ, ಜೀವ ವೈವಿಧ್ಯೆತೆಯನ್ನ ತನ್ನಲ್ಲಿ ಅಡಗಿಸಿಕೊಂಡಿದೆ.

ವಿಶ್ವ ವಿಖ್ಯಾತ ಹಂಪಿ ಬಳಿಯ ತುಂಗಭದ್ರ ನದಿಯಲ್ಲಿ ಈ ಹಿಂದೆ ಎಲ್ಲೋ ಒಂದು ಕಡೆ ಭಯದಲ್ಲಿ ಅವಿತು ಕುಳಿತು ಕೊಳ್ಳುತ್ತಿದ್ದ ನೀರು ನಾಯಿಗಳು ಹಿಂಡು ಇದೀಗ ಸ್ವಚ್ಚಂದವಾಗಿ ಸಂಚರಿಸುವುದಕ್ಕೆ ಆರಂಬಿಸಿವೆ, ಕಾರಣ ಇತ್ತೀಚೆಗೆ ತುಂಗಭದ್ರ ಜಲಾಶಯ ಬರ್ಥಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ನಿರಂತರವಾಗಿ ಹರಿದು ಬರುತ್ತಿದೆ.ಹಾಗಾಗಿ ಹಂಪಿ ಪಕ್ಕದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿನ ಈ ಜಲಚರಗಳಿಗೆ ಯಾವುದೇ ತೊಂದರೆ ಇಲ್ಲದೆ ಸ್ವಚ್ಚಂದವಾಗಿ ತಮ್ಮಿಚ್ಚೆಯ ಪ್ರಕಾರ ಸಂಚಾರ ನಡೆಸಿವೆ,

ಇನ್ನು ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯ ವರೆಗೆ ಸುಮಾರು ಇಪ್ಪತ್ತು ಕಿಲೋಮಿಟರ್ ಸಂಚಚರಿಸುವ ಈ ನೀರು ನಾಯಿಗಳು, ನೀರಿನಲ್ಲಿ ಮೀನುಗಳನ್ನ ಬೇಟೆ ಆಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ, ಅದಾದ ಬಳಿಕ ಮರಳು ಮತ್ತು ಕಲ್ಲು ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿ ಮತ್ತೆ ಸಂಜೆ ನಾಲ್ಕು ಗಂಟೆಯ ನಂತರ ತಮ್ಮ ಬೇಟೆಯನ್ನ ಪ್ರಾರಂಬಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ, ಹೀಗಿದ್ದರೂ ಮನುಷ್ಯನ ಕಣ್ಣಿಗೆ ಈ ಜಲಚರ ಪ್ರಾಣಿ ಕಾಣಸಿಗುವುದು ತುಂಬಾ ಅಪರೂಪ,

ಇನ್ನು ಹೊಸಪೇಟೆ ಬಳಿಯ ತುಂಗಭದ್ರ ಜಲಾಶಯದಿಂದ ಕಂಪ್ಲಿಯ ವರೆಗೆ ಇರುವ ಸುಮಾರು ಇಪ್ಪತ್ತೈದು ಕಿಲೋಮಿಟರ್ ಪ್ರದೇಶದಲ್ಲಿ ಹರಿಯುವ ಈ ನದಿ ಕೇವಲ ನದಿ ಅಲ್ಲ, ಇದೊಂದು ವಿಶಿಷ್ಟ ಜೀವ ಸಂಕುಲಗಳ ತಾಣವಾಗಿದೆ, ನೀರು ನಾಯಿ ಮತ್ತು ಮೊಸುಳೆಗಳು ಈ ಬಾಗದಲ್ಲಿ ಹೆಚ್ಚಾಗಿ ವಾಸಿಸುತ್ತವೆ, ಅಲ್ಲದೆ ಹಲವು ಜಾತಿಯ ಪಕ್ಷಿ ಪ್ರಬೇದಗಳು ಇಲ್ಲಿಗೆ ಬಂದು ಸಂತಾನ ಅಭಿವ್ರದ್ದಿ ಪಡಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ, ಅದರ ಜೊತೆಗೆ ವಿಶಿಷ್ಟ ಜಾತಿಯ ಆಮೆ, ಮೀನು, ಹಾವು, ಮತ್ತು ಚಿರತೆ, ಕರಡಿಗಳ ಆವಾಸ ತಾಣವಾಗಿರುವ ಈ ಪ್ರದೇಶವನ್ನ ನೀರುನಾಯಿ ಸಂರಕ್ಷಿತ ಪ್ರದೇಶ ಎಂದೇ ಈ ಹಿಂದೆಯೇ ಇಲ್ಲಿನ ಅರಣ್ಯ ಇಲಾಖೆ ಘೋಷಣೆ ಕೂಡ ಮಾಡಿದೆ.

ಅದಕ್ಕೆ ಕಾರಣ ತುಂಗಭದ್ರ ನದಿಯಲ್ಲಿ ಕಾಣಸಿಗುವ ಈ ಪ್ರಾಣಿ ಬೇರೆಡೆ ಕಾಣಸಿಗುವುದು ತುಂಬಾ ಅಪರೂಪ. ಇನ್ನು ಇತ್ತೀಚೆಗೆ ಈ ಪ್ರದೇಶಕ್ಕೆ ಬೇಕಾದ ಒಂದು ವಿಬಾಗವನ್ನ ಸ್ಥಾಪಿಸಿದ್ದು ಆರ್.ಎಫ್.ಓ.ಮತ್ತು ಕಾವಲಿಗೆ ಬೇಕಾದ ಕೆಲವು ಸಿಬ್ಬಂದಿಗಳ್ಳನ್ನ ಕೂಡ ನೇಮಕಮಾಡಿದೆ ಅರಣ್ಯ ಇಲಾಖೆ, ಹಾಗಾಗಿ ಹಂಪಿಗೆ ಬರುವ ಪ್ರವಾಸಿಗರಿಗೆ ಹಂಪಿಯಲ್ಲಿ ಕಾಣಸಿಗುವುದು ಬರೀ ಸ್ಮಾರಕಗಳು ಮಾತ್ರವಲ್ಲ,  ಹಲವು ವಿದದ ಪ್ರಾಣಿ ಪ್ರಬೇಧಗಳು ಇಲ್ಲಿಕಾಣಸಿಗುತ್ತವೆ.ಇಲ್ಲಿಗೆ ಬರುವ ಬಹುತೇಕ ಪ್ರವಾಸಿಗರು ಹಂಪಿಯಲ್ಲಿ ವಾರಗಟ್ಟಲೆ ಉಳಿದು ವನ್ಯಜೀವಿಗಳ ಛಾಯಾಚಿತ್ರ ಸೆರೆ ಹಿಡಿದು ಮರಳುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿರುತ್ತದೆ.

ನೀರು ನಾಯಿಗಳು ಸ್ವಚ್ಚಂದವಾಗಿ ಸಂಚರಿಸುವ ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ.. ಸುಬಾನಿ ಪಿಂಜಾರ ವಿಜಯನಗರ.