You are currently viewing ಕೊವಿಡ್ ಕೇರ್ ಸೆಂಟರ್ ಸುತ್ತ ಮತ್ತವೇ ಕೊರೋನ ಹಾವಳಿ ಹೆಚ್ಚಾಗಿದೆ.

ಕೊವಿಡ್ ಕೇರ್ ಸೆಂಟರ್ ಸುತ್ತ ಮತ್ತವೇ ಕೊರೋನ ಹಾವಳಿ ಹೆಚ್ಚಾಗಿದೆ.

.

ವಿಜಯನಗರ…ಸಂಡೂರು ತಾಲೂಕಿನ ಜಿಂದಾಲ್ ಕಂಪನಿಯ ಸುತ್ತ ಮುತ್ತ ಇರುವ ಎರಡು ಪ್ರದೇಶಗಳನ್ನ ನಿನ್ನೆ ಸೀಲ್ಡೌನ್ ಮಾಡಲಾಗಿದೆ. ನಾಗಾರ್ಜುನ ಲೇಬರ್ ಕಾಲೋನಿ ಹಾಗೂ ಸುನಿತ ಕನಸ್ಟ್ರಕ್ಷನ್ ಅಪಾರ್ಟ್ ಮೆಂಟಗಳಲ್ಲಿ ಕೊರೊನ ಮಹಾಮಾರಿಯ ಹಟ್ಟಹಾಸ ಹೆಚ್ಚಾಗಿದ್ದು ಈ ಎರಡು ಪ್ರದೇಶಗಳಿಗೆ ಬೇಟಿ‌ ನೀಡಿದ ಸಂಡೂರು ತಹಸೀಲ್ದಾರ ವಿಶ್ವಜಿತ್ ಮೆಹತ ಹಾಗೂ ಇಲ್ಲಿನ ಟಿ.ಹೆಚ್.ಒ. ಗೋಪಾಲ್ ರಾವ್ ಮತ್ತು ಕಂದಾಯ ನಿರೀಕ್ಷಕ ಮಂಜುನಾಥ ಹಾಗೂ ಗ್ರಾಮಪಂಚಾಯ್ತಿ ಕಾರ್ಯದರ್ಶಿ ಸಿದ್ರಾಮಪ್ಪ, ಸ್ಥಳಕ್ಕೆ ಬೇಟಿ ನೀಡಿ, ಈ ಪ್ರದೇಶಗಳನ್ನ ಸೀಲ್ಡೌನ್ ಮಾಡಿ ಕೊರೊನ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಸುನಿತಾ ಕನಸ್ಟ್ರಕ್ಷನ್ ಕಂಪನಿಯ ಅಪಾರ್ಟ್ ಮೆಂಟಲ್ಲಿ 14 ಜನ ಸೋಂಕಿತರು ಹಾಗೂ ನಾಗಾರ್ಜುನ ಕಾಲೋನಿಯಲ್ಲಿ 31ಜನರಿಗೆ ಸೋಂಕು ದೃಡಪಟ್ಟಿದೆ. ಇದರ ಜೊತೆಗೆ ಸಂಡೂರು ತಾಲೂಕಿನಾಧ್ಯಂತ ಒಟ್ಟು 101 ಸಕ್ರೀಯ ಪ್ರಕರಣಗಳು ಪತ್ತೆಯಾಗಿವೆ.
ಅದರಲ್ಲೂ ತೋರಣಗಲ್ಲು ಮತ್ತು ಜಿಂದಾಲ್ ಕಂಪನಿಯ ಸುತ್ತ ಮುತ್ತವೇ ಹೆಚ್ವು ಪ್ರಕರಣಗಳು ಪತ್ತೆಯಾಗಿವೆ.

ಕತೋರಣಗಲ್ಲು ಗ್ರಾಮ ಮಂಚಾಯ್ತಿ ವ್ಯಾಪ್ತಿಯಲ್ಲಿ 45 ಪ್ರಕರಣಗಳು. ವಿಧ್ಯಾನಗರ 20, ರೈಲ್ವೇ ನಿಲ್ದಾಣ ಪ್ರದೇಶದಲ್ಲಿ 5 ಕುರೇಕೊಪ್ಪ ಗ್ರಾಮದಲ್ಲಿ 5 ಎಸ್.ಜಿ.ಸಿ.ಯಲ್ಲಿ 7 ಪ್ರಕರಣಗಳು ಸೇರಿದಂತೆ ಒಟ್ಟು 101 ಪ್ರಕರಣಗಳು ಸಂಡೂರು ತಾಲೂಕಿನಲ್ಲಿ ಕಾಣಿಸಿಕೊಂಡಿವೆ. ಇನ್ನು ಕೊರೊನ ನಿಯಂತ್ರಣಕ್ಕೆ ಮುಂದಾಗಿರುವ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾಢಳಿತಕ್ಕೆ ಇಲ್ಲಿನ‌ ಜಿಂದಾಲ್ ಕಂಪನಿ ಬೆನ್ನೆಲುಬಾಗಿ ನಿಂತು ಕೊವಿಡ್ ಕೇರ್ ಸೆಂಟರನ್ನ ತನ್ನ ಕಂಪನಿಯ ಒಳಗಡೆ ಪ್ರಾರಂಬಿಸಿದೆ.

ಆದರೆ ತನ್ನ ಕಂಪನಿಯಲ್ಲಿ ಕೆಲಸಮಾಡಲು ದೇಶದ ಬೇರೆ ಬೇರೆ ರಾಜ್ಯಗಳಿಂದ ಕಂಪನಿಗೆ ವಲಸೆ ಬಂದಿರುವ ಕಾರ್ಮಿಕರ ಮೇಲೆ ನಿಗಾ ಇಡದೆ ಇರುವುದು ಸೋಂಕು ಹೆಚ್ಚಾಗುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅದರಲ್ಲೂ ಕೊರೊನ ಮಹಾಮಾರಿ ವಲಸಿಗರಿಂದ ಹೆಚ್ಚು ಹೆಚ್ಚಾಗಿ ಈ ಬಾಗದಲ್ಲಿ ಹರಡುತಿದ್ದು ಅದರ ನಿಯಂತ್ರಣಕ್ಕೆ ಜಿಂದಾಲ್ ಮತ್ತು ಬಳ್ಳಾರಿ ಜಿಲ್ಲಾಡಳಿತ ಮುಂದಾಗಬೇಕಿದೆ.

ವರದಿ..ಸುಬಾನಿ ಪಿಂಜಾರ ವಿಜಯನಗರ