You are currently viewing ಮೈಲಾರ ಕಾರ್ಣಿಕೋತ್ಸವ, ಕುರುವತ್ತಿ ಜಾತ್ರೆಗೆ, ಈ ಬಾರಿಯೂ ಭಕ್ತರಿಗಿಲ್ಲ ಪ್ರವೇಶ.

ಮೈಲಾರ ಕಾರ್ಣಿಕೋತ್ಸವ, ಕುರುವತ್ತಿ ಜಾತ್ರೆಗೆ, ಈ ಬಾರಿಯೂ ಭಕ್ತರಿಗಿಲ್ಲ ಪ್ರವೇಶ.

ವಿಜಯನಗರ…ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಮೈಲಾರದ ಕಾರ್ಣಿಕೋತ್ಸವಕ್ಕೆ ಮತ್ತು ಕುರುವತ್ತಿಯ ಬಸವೇಶ್ವರ ರಥೋತ್ಸವಕ್ಕೆ ಈ ಬಾರಿ ಕೂಡ ಸಾರ್ವಜನಿಕರ ಪ್ರವೇಶ ನಿಷೇಧಿಸಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಇಂದು ಆದೇಶ ಹೊರಡಿಸಿದ್ದಾರೆ.ಮೈಲಾರ ಕಾರ್ಣಿಕೋತ್ಸವ ಮತ್ತು ಕುರುವತ್ತಿ ಜಾತ್ರೆಗೆ ಬಳ್ಳಾರಿ ವಿಜಯನಗರ ಜಿಲ್ಲೆ ಸೇರಿದಂತೆ ನೆರೆಯ ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ಕೂಡ ಹೆಚ್ಚಿನ ಭಕ್ತರು ಆಗಮಿಸುವುದು ಪ್ರತಿ ವರ್ಷದ ವಾಡಿಕೆ. 

ಫೆಬ್ರವರಿ.8 ರಿಂದ 19ರ ವರೆಗೆ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಫೆಬ್ರವರಿ.25 ರಿಂದ ಮಾರ್ಚ್ 3ರ ವರೆಗೆ ಕುರುವತ್ತಿಯ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯಲು ಸಾರ್ವಜನಿಕರ ಈ ದೇವಸ್ಥಾನಗಳಿಗೆ ದಾವಿಸುವುದು ಪ್ರತಿ ವರ್ಷದ ಪದ್ದತಿ, ಆದರೆ ಕಳೆದ ಎರಡು ವರ್ಷಗಳಿಂದ ಕೊವಿಡ್ ನಿಯಂತ್ರಣದ ಹಿತದೃಷ್ಠಿಯಿಂದ ಪ್ರವೇಶ ನಿಷೇಧಿಸಿ ಆದೇಶಿಸ ಹೊರಡಿಸಲಾಗಿದೆ. ಆದರೆ, ಷರತ್ತಿಗೊಳಪಟ್ಟು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನಗಳಲ್ಲಿ ಕೋವಿಡ್-19 ನಿಯಮ ಪಾಲಿಸಿ ದಿನನಿತ್ಯದ ಪೂಜಾ ಧಾರ್ಮಿಕ ವಿಧಿವಿಧಾನ ನೆರವೇರಿಸಲು ಅನುಮತಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಮೈಲಾರದ ತೆಂಕಣ ಮರಡಿಯಲ್ಲಿ ನಡೆಯುವ ಕಾರ್ಣೊಕೋತ್ಸವ ಕಣ್ತುಂಬಿಕೊಳ್ಳಲು ಪ್ರತಿವರ್ಷ 10 ರಿಂದ 12ಲಕ್ಷದಷ್ಟು ಭಕ್ತರು ಇಲ್ಲಿನ ತೆಂಕಣ ಮರಡಿಯಲ್ಲಿ ಸೇರುವುದು ವಾಡಿಕೆ. ಆದರೆ ಕಳೆದ ವರ್ಷ ಕೂಡ ಕೋವಿಡ್ ನಿರ್ಭಂದ ಇದ್ದ ಕಾರಣ ಕೇವಲ ಒಂದು ಲಕ್ಷದಷ್ಟು ಭಕ್ತರು ನಿಷೇದದ ನಡುವೆಯೂ ಸೇರಿ ಕಾರ್ಣಿಕೋತ್ಸವ ವೀಕ್ಷಣೆಮಾಡಿದ್ದರು. ಈ ವರ್ಷ ಕೂಡ ಹೊರಗಿನ ಭಕ್ತರಿಗೆ ಪ್ರವೇಶ ನೀಡದೆ ಸಂಪ್ರದಾಯ ಮುಂದುವರೆಸಿಕೊಂಡು ಹೋಗಲು ಜಿಲ್ಲಾಡಳಿತ ನಿರ್ಧರಿಸಿ ಆದೇಶ ರವಾನಿಸಿದೆ.ಅಲ್ಲದೇ, ಜಾತ್ರೆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಒಂದುವೇಳೆ ನಡೆಸಿದರೆ ಕೋವಿಡ್ ನಿಯಮದ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದೂ ಆದೇಶದಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ನಮ್ಮ ರಾಜ್ಯ ಮಾತ್ರವಲ್ಲ ನೆರೆಯ ಆಂದ್ರ ಮತ್ತು ಮಹಾರಾಷ್ಟ್ರದಿಂದ ಮೈಲಾರ ಕಾರ್ಣಿಕೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಈ ಬಾರಿ ಕೂಡ ಕೊವಿಡ್ ನಿಯಮ ತಡೆಯೊಡ್ಡಿದೆ.

ವರದಿ. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.