You are currently viewing ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?

ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಸಿಬ್ಬಂದಿ ಸಾವಿಗೆ ಕಾರಣವಾಯ್ತಾ..?

ವಿಜಯನಗರ..(ಹೊಸಪೇಟೆ) ರೈಲ್ವೇ ಗೇಟ್ ತೆಗೆಯುವುದು ತಡವಾಗಿದ್ದೇ ರೈಲ್ವೇ ಇಲಾಖೆಯ ಸಿಬ್ಬಂದಿ ಸಾವಿಗೆ ಕಾರಣವಾದ ಘಟನೆ ಹೊಸಪೇಟೆ ನಗರದ ಹೊರ ವಲಯದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹೊಸಪೇಟೆ ನಗರದ ರೈಲ್ವೇ ನಿಲ್ದಾಣದ ಹಿಂಬದಿಯಲ್ಲಿರುವ 88 ಮುದ್ಲಾಪುರ ಗ್ರಾಮದ ಬಸವರಾಜ್ (45)ಸಾವಿಗೀಡಾದ ರೈಲ್ವೇ ಇಲಾಖೆಯ ಸಿಬ್ಬಂದಿಯಾಗಿದ್ದು, ನಿನ್ನೆ ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಬಸವರಾಜ್ ಅವರಿಗೆ ಹೃದಯಾಘಾತ ಆಗಿದೆ, ಈ ಕೂಡಲೆ 88ಮುದ್ಲಾಪುರ ಗ್ರಾಮಸ್ಥರು ಬಸವರಾಜ್ ಅವರನ್ನ ಹೊಸಪೇಟೆ ನಗರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ, ಆದರೆ ಈ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿರುವ ರೈಲ್ವೇ ಗೇಟ್ ಹಾಕಿದ ಪರಿಣಾಮ ಸರಿ ಸುಮಾರು ಮುಕ್ಕಾಲು ಗಂಟೆ ತಡವಾಗಿದೆ.

ಅದರ ಪರಿಣಾಮ ಬಸವರಾಜ್ ಅವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೈಲ್ವೇ ಗೇಟ್ ಬಳಿಯಲ್ಲೇ ಸಾವನ್ನಪ್ಪಿದ್ದಾರೆ. ಇಂತಾ ಅದೆಷ್ಟೊ ಘಟನೆಗಳು ಈ ರೈಲ್ವೇ ಗೇಟ್ ಬಳಿ ನಡೆದ ಉದಾಹಾರಣೆಗಳು ಇಲ್ಲಿವೆ.

ಇಂತಾ ತುರ್ತು ಪರಿಸ್ಥಿತಿಯಲ್ಲಿ ರೈಲ್ವೇ ಗೇಟ್ ತೆಗೆಯುವ ಅವಕಾಶ ಇದೆ ಆದರು, ಈ ರೈಲ್ವೇ ಗೇಟಲ್ಲಿ ಅದು ಸಾಧ್ಯವಿಲ್ಲ, ಕಾರಣ ಪಕ್ಕದಲ್ಲೇ ರೈಲ್ವೇ ನಿಲ್ದಾಣ ಇರುವ ಹಿನ್ನೆಲೆಯಲ್ಲಿ ಆಟೋಮ್ಯಾಟಿಕ್ ಲಾಕ್ ಸಿಸ್ಟಮ್ ಈ ಗೇಟಿಗೆ ಅಳವಡಿಸಲಾಗಿದೆಯಂತೆ, ಹಾಗಾಗಿ  ರೈಲುಗಾಡಿಗಳು ಇಲ್ಲಿಂದ ತೆರವಾದ ಮೇಲೆಯೇ ಗೇಟ್ ತೆರೆಯುತ್ತೆ, ಹೀಗಿದ್ದರು ರೈಲ್ವೇ ಇಲಾಖೆ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಈ ರೈಲ್ವೇ ಗೇಟ್ ಪಕ್ಕದಲ್ಲೇ ರೈಲ್ವೇ ನಿಲ್ದಾಣ ಇದೆ, ಹಾಗಾಗಿ ದಿನ ಇಪ್ಪತ್ನಾಲ್ಕು ಘಂಟೆಗಳಲ್ಲಿ ಹದಿನೆಂಟು ಗಂಟೆಗಳಿಗೂ ಹೆಚ್ಚು ಕಾಲ ಗೇಟ್ ಹಾಕಲಾಗಿರುತ್ತೆ.

ಕೆಲವೊಂದು ಬಾರಿ ಗೇಟ್ ಹಾಕಿದರೆ ಒಂದೆರಡು ಗಂಟೆಗಳ ಕಾಲ ತೆರೆಯುವುದೇ ಇಲ್ಲ, ಅದರ ಪರಿಣಾಮ 88 ಮುದ್ಲಾಪುರ ಸೇರಿದಂತೆ ಇನ್ನೂ ನಾಲ್ಕಾರು ಹಳ್ಳಿಗಳಿಗೆ ಹೋಗುವ ಜನ ಸಾಮಾನ್ಯರು ಪರದಾಡಬೇಕಾಗುತ್ತದೆ. ಇನ್ನು ಈ ಹಳ್ಳಿಗಳ ಮಕ್ಕಳು ಶಾಲೆಗೆ ಹೋಗುವ ಪರಿಸ್ಥಿತಿ ಅಂತೂ ಎಂತವರ ಎದೆಯಲ್ಲಿ ನಡುಕ ಹುಟ್ಟಿಸುತ್ತೆ, ಮಕ್ಕಳು ಶಾಲೆಗೆ ಹೋಗು ಸಂದರ್ಭದಲ್ಲಿ ರೈಲುಗಾಡಿ ನಿಂತಾಗ ಮಕ್ಕಳು ಆ ಮಾರ್ಗವನ್ನ ದಾಟುವುದನ್ನ ಕಂಡರೆ ನಮ್ಮ ದೇಶದಲ್ಲಿ ಇನ್ನೂ ಕೂಡ ಇಂತಾ ಪರಿಸ್ಥಿತಿ ಇದೆ ಎಲ್ಲಾ ಎನ್ನುವ ನಾಚಿಕೆ ನಮಗಾಗುತ್ತೆ, ಮಕ್ಕಳಿಗೆ ಯಾವತ್ತಿದ್ದರು ಈ ದಾರಿಯಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಹಾಗಾಗಿ ಇದೀಗ 88ಮುದ್ಲಾಪುರ ಸೇರಿದಂತೆ ಇಲ್ಲಿನ ಹಳ್ಳಿಗಳ ಜನ ಸಾಮಾನ್ಯರು ಇಲ್ಲಿನ ರೈಲ್ವೇ ಇಲಾಖೆಯ ವಿರುದ್ದ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಪರ್ಯಾಯ ಮಾರ್ಗ ಕಲ್ಪಿಸುವಂತೆ ಬೇಡಿಕೆ ಇಟ್ಟಿರುವ ಸ್ಥಳೀಯರು ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಸದರ ವಿರುದ್ದ ಕೂಡ ಆಕ್ರೋಶ ವ್ಯಕ್ತಪಡಿಸಲು ಮುಂದಾಗಲಿದ್ದಾರೆ. ಹೊಸಪೇಟೆ ನಗರಸಭೆ ವ್ಯಾಪ್ತಿಯ ಈ 88ಮುದ್ಲಾಪುರ ಗ್ರಾಮ ಎರಡನೇ ವಾರ್ಡಗೆ ಸೇರ್ಪಡೆ ಆಗಿದ್ದು,ಇಲ್ಲಿನ ನಗರಸಭೆ ಸದಸ್ಯ ಜೀವರತ್ನ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.