You are currently viewing ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ. ಅಧಿಕಾರಿಯ ವಿರುದ್ದ ಶ್ರೀ ರಾಮುಲು ಕೆಂಡಾಮಂಡಲ, ಕಾರಣ ಏನುಗೊತ್ತ..?

ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ. ಅಧಿಕಾರಿಯ ವಿರುದ್ದ ಶ್ರೀ ರಾಮುಲು ಕೆಂಡಾಮಂಡಲ, ಕಾರಣ ಏನುಗೊತ್ತ..?

ಬಳ್ಳಾರಿ…ಭಗೀರಥ ಜಯಂತಿ ಆಚರಣೆ ವೇಳೆಯಲ್ಲಿ ಸಚಿವ ಶ್ರೀರಾಮುಲು ಅಧಿಕಾರಿಗಳನ್ನ ಇಂದು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.ಎಡಿಸಿ ಮಂಜುನಾಥ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗಪ್ಪ ರಂಗಣ್ಣನವರ್ ಸಚಿವ ಶ್ರೀರಾಮುಲು ಅವರಿಂದ ಜಾಡಿಸಿಕೊಂಡ ಅಧಿಕಾರಿಗಳಾಗಿದ್ದು, ಭಗೀರಥ ಜಯಂತಿ ಆಚರಣೆ ವೇಳೆಯಲ್ಲಿ ಉಂಟಾದ ಎಡವಟ್ಟಿಗೆ ಸಚಿವ ಶ್ರೀ ರಾಮುಲು ಕೆಂಡ ಮಂಡಲರಾಗಿದ್ದಾರೆ. ಕಳೆಗುಂದಿದ ಭಗೀರಥರ ಪೋಟೋ ಇಟ್ಟು ಕಾರ್ಯಕ್ರಮ ಆಯೋಜನೆಮಾಡಿದ್ದು ಹಾಗೂ ಜಯಂತಿಗೆ ಜನರನ್ನ ಸೇರಿಸಿಲ್ಲ ಎನ್ನುವ ಕಾರಣಕ್ಕೆ ಶ್ರೀರಾಮುಲು ಗರಂ ಆಗಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶ್ರೀ ಭಗೀರಥ ಜಯಂತ್ಯೋತ್ಸವದ ಮೆರವಣಿಗೆಗೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು.

ಭಗೀರಥರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸುವು ಸಂದರ್ಭದಲ್ಲಿ ಕಳೆಗುಂದಿದ ಪೊಟೊ ಮತ್ತು ಸೇರಿದ್ದ ಜನಗಳನ್ನ ಕಂಡ ಶ್ರೀ ರಾಮುಲು. ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ, ಕಾಟಚಾರಕ್ಕೆ ಯಾಕೆ ಕೆಲಸ ಮಾಡ್ತೀರ. ಬೇಕಾಬಿಟ್ಟಿ ಮಾಡುವ ಕಾರ್ಯಕ್ರಮಗಳಿಗೆ ನಾನು ಬರಲ್ಲ, ಇಂತ ವಿಚಾರದಲ್ಲಿ ರಾಜಿಯಾಗೋದೇ ಇಲ್ಲ, ನಿಮ್ಮ ಸಮಜಾಯಿಷಿಗಳನ್ನ ಸಣ್ಣ ಹುಡುಗರಿಗೆ ಹೇಳಿ, ನನಗೆ ಹೇಳಬೇಡಿ ಎಂದು ಹೇಳಿದ ಶ್ರೀ ರಾಮುಲು ಕೊರಳಿಗೆ ಹಾಕಿದ ಹಾರವನ್ನ ಕಿತ್ತೆಸಿದಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.