You are currently viewing ದಿನಕ್ಕೆ ಒಂದು ರೂಪಾಯಿ ಸಂಗ್ರಹಿಸಿ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಮುಂದಾದ ಹಳೆಯ ವಿಧ್ಯಾರ್ಥಿ ವೃಂದ.

ದಿನಕ್ಕೆ ಒಂದು ರೂಪಾಯಿ ಸಂಗ್ರಹಿಸಿ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಮುಂದಾದ ಹಳೆಯ ವಿಧ್ಯಾರ್ಥಿ ವೃಂದ.

ವಿಜಯನಗರ…ಹೌದು ಇಂತದ್ದೊಂದು ವಿಷೇಶ ನಿರ್ಣಯ ಕೈಗೊಂಡಿದ್ದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಸರ್ಕಾರಿ ಪ್ರೌಡ ಶಾಲೆ  ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದಿದ ಹಳೆಯ ವಿಧ್ಯಾರ್ಥಿಗಳು.ಅಂದಹಾಗೆ ಮಾನ್ಯರ ಮಸಲವಾಡ ಗ್ರಾಮದಲ್ಲಿ ಗುರು ವಂದನಾ ಹಾಗೂ ಬೀಳ್ಕೊಡಿಗೆ ಸಮಾರಂಭವೊಂದನ್ನ  ಇಂದು ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಡ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ ಸುಮಾರು 25ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನ ಸನ್ಮಾನಿಸಿ ಗೌರವಿಸುವ ಕಾರ್ಯಕ್ಕೆ ಈ ಶಾಲೆಯ ಹಳೆಯ ವಿಧ್ಯಾರ್ಥಿಗಳು ಮುಂದಾಗಿದ್ದರು.  ಈ ಸಂಭಂದ ಇಂದು ಗ್ರಾಮದ ಈರಣ್ಣ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆ ಮೂಲಕ ಶಾಲೆಗೆ ಶಿಕ್ಷಕರನ್ನ ಕರೆತಂದ ಹಳೆಯ ವಿಧ್ಯಾರ್ಥಿಗಳು, ಪ್ರೌಡ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿ ಸನ್ಮಾನ ಸಮಾರಂಭ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಸಿಪಿಐ. ರಮೇಶ್ ಕುಲಕರ್ಣಿ ಹಾಗೂ ಆರ್.ಟಿ.ಐ.ಕರ್ಯಕರ್ತ ಎಂ.ಪಿ.ಎಂ ವಾಗೀಶ್, ಸೇರಿದಂತೆ ಮಾನ್ಯರ ಮಸಲವಾಡ ಗ್ರಾಮದ ಹಿರಿಯರು ಬಾಗಿಯಾಗಿದ್ದರು. ಮಾನ್ಯರ ಮಸಲವಾಡ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಹಿರೇಹಡಗಲಿ ಹಾಲಪ್ಪ, ಬಾಗಳಿ ಪ್ರಕಾಶ್, ಉತ್ತಂಗಿ ಚಂದ್ರಶೇಖರ, ಜಂಬುನಾಥ ಸೇರಿದಂತೆ ಹಲವು ನಿವೃತ್ತ ಶಿಕ್ಷಕರನ್ನ ಕಾರ್ಯಕ್ರಮಕ್ಕೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಗ್ರಾಮದ ಚನ್ನಯ್ಯ ಮತ್ತು ಅರ್ಜುನ ಶಿಕ್ಷಕರನ್ನ ಸಹ ಸನ್ಮಾನಿಸಿದರು.ಮಾನ್ಯರ ಮಸಲವಾಡ ಗ್ರಾಮದ ಪ್ರಾಥಮಿಕ ಶಾಲೆ ಪ್ರಾರಂಭವಾಗಿ 107ವರ್ಷ  ಮತ್ತು
ಪ್ರೌಡ ಶಾಲೆ ಪ್ರಾರಂಭವಾಗಿ 37ವರ್ಷಗಳು ಪೂರ್ಣಗೊಂಡಿದೆ. ಹೀಗಿದ್ದರು ಇಲ್ಲಿನ ಈ ಎರಡು ಶಾಲೆಗಳು ಮೂಲ ಸೌಕರ್ಯಗಳ ಕೊರತೆಯನ್ನ ಎದುರಿಸುತ್ತಿವೆ, ಖಾಸಗಿ ಶಾಲೆಗಳ ಅಬ್ಬರದ ಇಂದಿನ ದಿನಗಳಲ್ಲಿ ಇಂತಾ ಸರ್ಕಾರಿ ಶಾಲೆಯನ್ನ ಅಭಿವೃದ್ದಿಪಡಿಸಬೇಕಾದದ್ದು ನಮ್ಮ ಹೊಣೆ ಎಂದು ತಿಳಿದ ಇಲ್ಲಿನ ಹಳೆಯ ವಿಧ್ಯಾರ್ಥಿಗಳು ಆ ಕ್ಷಣಕ್ಕೆ ನಿರ್ಣಯವೊಂದನ್ನ ಕೈಗೊಂಡರು.ಹಿನ್ನೆಲೆಯಲ್ಲಿ ಈ ಎರಡು ಶಾಲೆಯಲ್ಲಿ ಕಲಿತು ಹಳೆಯ ವಿಧ್ಯಾರ್ಥಿಗಳು ದಿನಕ್ಕೆ ಒಂದು ರೂಪಾಯಿಯಂತೆ  ಸಂಗ್ರಹಿಸಿ ಶಾಲೆ ಅಭಿವೃದ್ದಿಗೆ ಚಿಂತನೆಮಾಡಿದ್ದು ಕಾರ್ಯಕ್ರಮದ ಮತ್ತೊಂದು ವಿಷೇಶವಗಿತ್ತು. ಇನ್ನು ಇಲ್ಲಿನ ಪ್ರೌಡ ಶಾಲೆ ಪ್ರಾರಂಭವಾಗಿ ಸುಮಾರು 37ವರ್ಷಗಳು ಪೂರ್ಣಗೊಂಡಿದ್ದು  ಪ್ರೌಡ ಶಾಲೆಯ ಪೌಂಡೇಷನ್ ಅಂದರೆ ಮೊದಲನೆ ವರ್ಷದ ವಿಧ್ಯಾರ್ಥಿಗಳ ತಂಡದ ಎಲ್ಲಾ ಸದಸ್ಯರು ಈ ಗುರುವಂದನಾ ಸಮಾರಂಭದಲ್ಲಿ ಬಾಗಿಯಾಗಿದ್ದು ಮತ್ತೊಂದು ವಿಷೇಶವಾಗಿತ್ತು.

ಇನ್ನು ಶಾಲೆಯ ಗುರುವಂದನಾ ಕಾರ್ಯಕ್ರಮಕ್ಕೆ ಗುರುಗಳನ್ನ ಮಂಗಳ ವಾಧ್ಯಗಳ ಮೂಲಕ ಕರೆತರುವ ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿದ್ದ ನವಿಲೊಂದು ತನ್ನ ಗರಿಯನ್ನ ಬಿಚ್ಚಿ ಒಂದು ಗಂಟೆಗಳ ಕಾಲ ಹೆಜ್ಜೆ ಹಾಕಿದ್ದು ಕಾರ್ಯಕ್ರಮಕ್ಕೆ ಸೇರಿದ್ದ ಎಲ್ಲರ ಚಿತ್ತ ಸೆಳೆದಿತ್ತು.  ಒಟ್ಟಿನಲ್ಲಿ ಸರ್ಕಾರಿ ಶಾಲೆ ಎಂದು ಮೂಗು ಮುರಿಯುವ ಜನರಿಗೆ ಇದು ಪಾಠದಂತೆ ಕಂಡಿದ್ದು ಮಾತ್ರ ಸತ್ಯ, ಲಕ್ಷ ಲಕ್ಷ ಡೊನೇಷನ್ ಕೊಟ್ಟು ಖಾಸಗಿ ಶಾಲೆಯಲ್ಲಿ ಕಲಿಯುವ ಕಲಿಯುವ ಇಂದಿನ ಮಕ್ಕಳಿಗೆ ಇದೊಂದು ಹಬ್ಬದ ವಾತಾವರಣವಾಗಿ ಕಂಡಿದ್ದು ಮಾತ್ರ ಸತ್ಯ.

ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.