You are currently viewing ಕಳೆದ ವರ್ಷ ನೀರಿಗೆ ಕೊಚ್ಚಿ ಹೋಯಿತು, ಈ ವರ್ಷ ಮಳೆಗಾಳಿಗೆ ನೆಲಕ್ಕೆ ಕಳಚಿ ಬಿತ್ತು  ಬೆಳೆ. ನಮ್ಮ ಬದುಕು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಕಳೆದ ವರ್ಷ ನೀರಿಗೆ ಕೊಚ್ಚಿ ಹೋಯಿತು, ಈ ವರ್ಷ ಮಳೆಗಾಳಿಗೆ ನೆಲಕ್ಕೆ ಕಳಚಿ ಬಿತ್ತು ಬೆಳೆ. ನಮ್ಮ ಬದುಕು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ವಿಜಯನಗರ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ತಾವರೆಗುಂದಿ ಗ್ರಾಮದ ರೈತರು ಕಳೆದ ಎರಡು ವರ್ಷಗಳಿಂದ ಕಣ್ಣೀರಲ್ಲಿ ಕೈತೊಳೆಯುತಿದ್ದಾರೆ. ಹೌದು ಕಳೆದ ಒಂದುವಾರದಿಂದ ಈ ಬಾಗದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ, ಕಟಾವಿಗೆ ಬಂದಿದ್ದ ಬತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ‌. ತಾವರೆಗುಂದಿ ಗ್ರಾಮವೊಂದರಲ್ಲೇ ಸರಿ ಸುಮಾರು ಒಂದು ಸಾವಿರ ಎಕ್ಕರೆಯಷ್ಟು ಬತ್ತದ ಬೆಳೆ ನೆಲಕಚ್ಚಿರುವ ಪರಿಣಾಮ ಈ ಗ್ರಾಮದ ರೈತರು ದಿಕ್ಕು ಕಾಣದಂತಾಗಿ ಕಂಗಾಲಾಗಿದ್ದಾರೆ. ತುಂಗಭದ್ರ ನದಿ ನೀರಿನಿಂದ ಕೃಷಿಮಾಡುವ ಈ ರೈತರು ನದಿಯಲ್ಲಿ ಸಿಕ್ಕ ಅಲ್ಪ ಸ್ವಲ್ಪ ನೀರಿನಲ್ಲೇ ಕೃಷಿಮಾಡಿ ಬತ್ತವನ್ನ ಎಳೆ ಮಕ್ಕಳಂತೆ ಸಾಕಿದ್ದರು, ಇಷ್ಟೊಂದು ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕೈಸೇರಬೇಕೆನ್ನುವಷ್ಟರಲ್ಲಿ ಭಾರಿ ಬಿರುಗಾಳಿ ಮಳೆ ಬೆಳೆದ ಬೆಳೆಯನ್ನ ಬಲಿ ಪಡೆದಿದೆ. ಪ್ರತಿವರ್ಷ ಇದೇ ರೀತಿ ತೊಂದರೆ ಆದರೆ ನಾವು ಹೇಗೆ ಬದುಕು ಕಟ್ಟಿಕೊಳ್ಳಬೇಕು ನಮ್ಮ ಮಕ್ಕಳ ಮದುವೆ, ಶಿಕ್ಷಣ, ಆರೋಗ್ಯವನ್ನ ನಾವು ಹೇಗೆ ನೋಡಿ ಕೊಳ್ಳಬೇಕು ಎಂದು ತಾವರೆಗುಂದಿ ಗ್ರಾಮದ ರೈತ ವಿ.ಮಲಕಪ್ಪ ತನ್ನ ಅಳಲು ತೋಡಿಕೊಂಡಿದ್ದಾರೆ.

ಗಾಯದ ಮೇಲೆ ಬರೆ.

ಅದಲ್ಲದೆ ಕಳೆದ ವರ್ಷ ಬತ್ತ ಕಟಾವುಮಾಡಿ ವಕ್ಕಲುತನ ಮುಗಿಸಿ ಬತ್ತವನ್ನ ಒಂದು ಕಡೆ ರಾಶಿ ಸುರಿದ ಸಂದರ್ಭದಲ್ಲಿ ಏಕಾ ಏಕಿ ತುಂಗಭದ್ರ ನದಿ ನೀರು ನುಗ್ಗಿ ಬತ್ತದ ರಾಶಿಗಳು ಸಂಪೂರ್ಷ ನದಿ ಪಾಲಾಗಿದ್ದವು, ಸುಮಾರು ಎರಡು ಸಾವಿರ ಚೀಲದಷ್ಟು ಬತ್ತು ನೀರಿನಲ್ಲಿ ಕೊಚ್ಚಿಹೋಗಿ ನಷ್ಟ ಅನುಭವಿಸಿದೆವು, ಕಳೆದ ವರ್ಷ ಮಾಡಿದ ಸಾಲ ತೀರಿಸಲಾಗದೆ, ಎಷ್ಟೊ ಜನ ರೈತರು ಹುಟ್ಟಿದ ಊರನ್ನ ಬಿಟ್ಟುಹೋಗಿ ದುಡಿದು ತಂದು ಸಾಲ ತೀರಿಸುವ ಪ್ರಯತ್ನಮಾಡಿದರು. ಅದರ ಬೆನ್ನಲ್ಲೇ ಮತ್ತೆ ಈ ವರ್ಷ ಮಳೆಗಾಳಿ ರೈತರ ಬೆಳೆಯನ್ನ ನಾಶಮಾಡಿದೆ. ಪ್ರತಿ ವರ್ಷ ಇದೇ ರೀತಿ ತೊಂದರೆ ಎದುರಾದರೆ ರೈತ ಹೇಗೆ ಬದುಕಬೇಕು ನೀವೆ ಹೇಳಿ. ಒಂದು ವರ್ಷ ಎದುರಾದ ಕಷ್ಟಗಳನ್ನ ಎದುರಿಸುವುದೇ ಅಸಾಧ್ಯವಾದ ಇಂದಿನ ದಿನಗಳಲ್ಲಿ ಪ್ರತಿ ವರ್ಷ ಇದೇ ರೀತಿ ಕಷ್ಟ ಎದುರಾದರೆ ಹೇಗೆ ಸಹಿಸಿಕೊಳ್ಳಬೇಕು ಎಂದು ತಾವರೆಗುಂದಿ ಗ್ರಾಮದ ರೈತ ಸಣ್ಣಪ್ಪ ತನ್ನ ಅಳಲು ತೋಡಿಕೊಂಡಿದ್ದಾನೆ.

ಕಳೆದ ವರ್ಷದ ಬೆಳೆಹಾನಿ ಪರಿಹಾರ ಇನ್ನೂ ಸಿಕ್ಕಿಲ್ಲ

ಕಳೆದ ವರ್ಷ ನದಿ ನೀರಿಗೆ ಬತ್ತದ ರಾಶಿ ಕೊಚ್ಚಿಕೊಂಡು ಹೋದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರಕೊಡುವುದಾಗಿ ಭರವಸೆ ನೀಡಿದರು, ಆದರೆ ಇದುವರೆಗೆ ಒಂದು ನಯಾಪೈಸೆ ಪರಿಹಾರ ಕೊಟ್ಟಿಲ್ಲ ಸರ್ಕಾರ.ನಮ್ಮ ಬದುಕು ಒಂದು ರೀತಿಯಲ್ಲಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ, ನಾವು ರೈತರ ಪರ ಎನ್ನುವ ಸರ್ಕಾರ ಇಂತಾ ಸಂದರ್ಭದಲ್ಲಿ ಕಣ್ಣಿದ್ದು ಕುರುಡರಂತೆ ನಡೆದುಕೊಳ್ಳುತಿದೆ. ಈ ವರ್ಷವಾದರು ಆಗಿರುವ ನಷ್ಟವನ್ನ ಸರ್ಕಾರ ಭರಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.