You are currently viewing ವಿಚಿತ್ರ ಆಕಾರದ ಮೆರಿಗೆ ಜನ್ಮ ನೀಡಿದ ಕುರಿ.

ವಿಚಿತ್ರ ಆಕಾರದ ಮೆರಿಗೆ ಜನ್ಮ ನೀಡಿದ ಕುರಿ.

ವಿಜಯನಗರ..ನಾಲ್ಕು ಕಾಲು, ಎರಡು ಕಿವಿ, ಎರಡು ಕಣ್ಣು, ತಲೆ ಒಂದೇ, ಮೂತಿ ಮಾತ್ರ ಎರಡು, ಉಸಿರಾಡು ಮೂಗು ಎರಡು, ಆಹಾರ ಸೇವನೆಮಾಡುವ ಬಾಯಿ ಎರಡು, ದೇಹ ಮಾತ್ರ ಒಂದೇ, ಹೌದು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲೊಂದು ವಿಚಿತ್ರ ಆಕಾರದಲ್ಲಿ
ಕುರಿಮರಿ ಜನ್ಮ ತಾಳಿದಿದೆ.

ಗ್ರಾಮದ ಮಣ್ಣಪ್ಪನವರ ಬಸವರಾಜಪ್ಪ ಎನ್ನುವವರು ಸಾಕಿರುವ ಐವತ್ತು ಕುರಿಗಳಲ್ಲಿ ಒಂದು ಕುರಿ ಈ ರೀತಿಯ ಮರಿಗೆ ಇಂದು ಜನ್ಮ ನೀಡಿ ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಮರಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಹುಟ್ಟಿದ ಮರಿ ತಾಯಿಯ ಹಾಲು ಕುಡಿಯುತ್ತೆ ಚನ್ನಾಗಿ ಆಟವಾಡಿ ಈ ಗ್ರಾಮದ ಜನಸಾಮಾನ್ಯರಲ್ಲಿ ಆಶ್ಚರ್ಯ ಮೂಡಿಸಿದೆ.

ಹಣೆ ಚಿಕ್ಕಿಯ ಈ ಕುರಿಮರಿ ಇಂದು ಬೆಳಗ್ಗೆ ಜನ್ಮ ಪಡೆಯುತಿದ್ದಂತೆ ಮಾನ್ಯರ ಮಸಲವಾಡ ಗ್ರಾಮದ ಜನಸಾಮಾನ್ಯರು ಕುರಿ ಮಂದೆಯ ಕಡೆಗೆ ದಾವಿಸಿಬರುತಿದ್ದಾರೆ. ಬಂದವರೆಲ್ಲ ಭಗವಂತ  ಏನಪ್ಪ ನಿನ್ನ ಲೀಲೆ ಎಂದು ಆಶ್ಚರ್ಯ ವ್ಯಕ್ತಪಡಿಸಿ ಮರಳುತಿದ್ದಾರೆ. ಕುರಿ ಮಂದೆಯಲ್ಲಿ ಅಸಹಜವಾಗಿ ಹುಟ್ಟುವ ಇಂತಾ ಮರಿಗಳು ಹುಟ್ಟಿದ ಕೂಡಲೆ ಸಾವನ್ನಪ್ಪುವುದು ಸರ್ವೇ ಸಾಮಾನ್ಯವಾಗಿರುತ್ತದೆ.

ಆದರೆ ಈ ಮರಿ ಎಲ್ಲಾ ಮರಿಗಳ ರೀತಿಯಲ್ಲಿ ತಾಯಿಯ ಹಾಲು ಕುಡಿಯುತ್ತ ಆಟವಾಡುತ್ತಿದೆ. ಸದ್ಯಕ್ಕೆ ಮಾನ್ಯರ ಮಸಲವಾಡ ಗ್ರಾಮದಲ್ಲಿ ಜನಿಸಿರುವ ಈ ಮರಿ ಎಲ್ಲರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ವೀಡಿಯೊ ನೋಡಲು ಇಷ್ಟವಿದ್ದಲ್ಲಿ ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ.. ಸುಬಾನಿ ಪಿಂಜಾರ ವಿಜಯನಗರ.