You are currently viewing ಹಂಪಿಯ ಐತಿಹಾಸಿಕ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ತಡೆಗೋಡೆ ಕುಸಿತ.

ಹಂಪಿಯ ಐತಿಹಾಸಿಕ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ತಡೆಗೋಡೆ ಕುಸಿತ.

ವಿಜಯನಗರ (ಹೊಸಪೇಟೆ) ನಿರಂತರ ಮಳೆಯ ಪರಿಣಾಮ ಐತಿಹಾಸಿಕ ಹಂಪಿಯ ಶ್ರೀಕೋದಂಡ ರಾಮಸ್ವಾಮಿ ದೇವಸ್ಥಾನ ಮುಂಬಾಗದ ತಡಗೋಡೆ ಇಂದು ಸಂಜೆ ಕುಸಿದಿದೆ. ಅದೃಷ್ಟವಶಾತ್ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಿಲ್ಲ, ಸ್ಥಳೀಯರ ಮಾಹಿತಿ ಪ್ರಕಾರ ಗೋಡೆ ಕುಸಿಯುವ ಕೆಲವೇ ಘಳಿಗೆ ಮುನ್ನ ಪ್ರವಾಸಿಗರು ಈ ಸ್ಥಳದಲ್ಲಿ ನಿಂತು ಮೊಬೈಲ್ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತಿದ್ದರು ಎನ್ನಲಾಗಿದೆ.

ಅದಾದ ಕೆಲವು ನಿಮಿಷಗಳ ನಂತರ ಗೋಡೆ ಕುಸಿದಿದೆ ಎನ್ನಲಾಗಿದೆ. ಅದಲ್ದೆ ಗೋಡೆ ಕುಸಿದುಬಿದ್ದ ಶಬ್ದಕ್ಕೆ ಬೆಚ್ಚಿದ ಇನ್ನೂ ಇಬ್ಬರು ಪ್ರವಾಸಿಗರು ಭಯದಿಂದ ಅಲ್ಲಿಂದ ಓಡಿ ಹೋಗಲು ಎತ್ನಿಸಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಗಾಯಗೊಂಡ ಪ್ರವಾಸಿಗರು ಯಾರೆಂಬುದು ಮಾಹಿತಿ ಇಲ್ಲ. 

ಇತ್ತೀಚೆಗೆ ಸಚಿವ ಶ್ರೀರಾಮುಲು ಕೋದಂಡರಾಮಸ್ವಾಮಿ ದೇವಸ್ಥಾನ ಸೇರಿದಂತೆ ಅಲ್ಲಿರುವ ಇನ್ನಿತರ ದೇವಸ್ಥಾನಗಳನ್ನ ಜೀರ್ಣೋದ್ದಾರಮಾಡಿದ್ದರು, ಆದರೆ ಈ ದೇವಸ್ಥನಕ್ಕೆ ರಕ್ಷಣಗೋಡೆಯಂತಿದ್ದ ಈ ತಡೆಗೋಡೆಯ ಬಗ್ಗೆ ಗಮನ ಹರಿಸಿರಲಿಲ್ಲ.

ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಯ ಅಬ್ಬರ ಹೆಚ್ಚಾದ ಪರಿಣಾಮ, ತುಂಗಭದ್ರ ಜಲಾಶಯ ಸಂಪೂರ್ಣ ಭರ್ಥಿಯಾಗಿ ಜಲಾಶಯದಿಂದ ಬಾರಿ ಪ್ರಮಾಣದ ನೀರನ್ನ ಕಳೆದ ನಾಲ್ಕೈದು ತಿಂಗಳಿನಿಂದ ತುಂಗಭದ್ರ ನದಿಗೆ ಹರಿಬಿಡಲಾಗಿದೆ.

ಪ್ರತಿಬಾರಿ ನೀರನ್ನ ನದಿಗೆ ಹರಿಬಿಟ್ಟಾಗಲು ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ಈ ಗೋಡೆ ಮುಳುಗಡೆ ಆಗುತಿತ್ತು.

ಕೆಲವು ಬಾರಿ ಕೋದಂಡ ರಾಮಸ್ವಾಮಿ ಮೂರ್ತಿಯ ನಡುಮಟ್ಟದ ವರೆಗೆ ನೀರು ಜಮಾಯಿಸಿ ಹರಿದ ಉದಾಹರಣೆಗಳು ಇಲ್ಲಿವೆ. ಜಲಾಶಯದಿಂದ ಬಾರಿ ಪ್ರಮಾಣದ ನೀರು ಹರಿದಾಗಲೆಲ್ಲ ಈ ತಡೆಗೋಡೆಗೆ ನೀರಿನ ಒತ್ತಡ ಹೆಚ್ಚಾಗುತ್ತಲೇ ಇದೆ. ಕಾರಣ ಈ ಸ್ಥಳದಲ್ಲಿ ನೇರವಾಗಿ ಹರಿದುಬರುವ ನದಿ ನೀರಿ ದಿಕ್ಕು ಬದಲಿಸಿ ಮುಂದೆ ಹಾದುಗೋಗುತ್ತೆ, ಹೀಗಿರುವಾಗ ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಇದು ರಕ್ಷಾ ಕವಚ ಇದ್ದಂತೆ ಇತ್ತು.ಇದೇರೀತಿಯ ಕುಸಿತ ಮಂದುವರೆದರೆ ನಾಳೊಂದುದಿನ ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಅಪಾಯ ತಪ್ಪಿದ್ದಲ್ಲ

ಅದಲ್ಲದೆ ಈ ಹಿಂದೆ, ಅಂದರೆ ಒಂದೆರಡು ವರ್ಷಗಳ ಮುಂಚೆ ಕೂಡ ಈ ತಡೆಗೋಡೆ ಕುಸಿದಿತ್ತು, ಆಗಲೆ ಇಲ್ಲಿನ ಪುರಾತತ್ವ ಇಲಾಖೆ ಎಚ್ಚೆತ್ತು ಈ ತಡೆಗೋಡೆ ದುರಸ್ಥಿಮಾಡಬೇಕಿತ್ತು. ಆದರೆ ಇಲ್ಲಿನ ಸಂಭಂದಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ನಡೆದುಕೊಂಡಿದ್ದಾರೆ, ಅದರ ಪರಿಣಾಮ ಮತ್ತೆ ಗೋಡೆ ಕುಸಿತ ಉಂಟಾಗಿ ಅಪಾಯದ ಗಂಟೆ ಬಾರಿಸುತ್ತಿದೆ. 

ಸಂಭಂದಪಟ್ಟ ಇಲ್ಲಿನ ಅಧಿಕಾರಿಗಳು ಈಗಲಾದ್ರು ಎಚ್ಚೆತ್ತು ಈ ತಡೆಗೋಡೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ. ಇಲ್ಲದೆ ಇದ್ರೆ ಧಾರ್ಮಿಕ ಮತ್ತು ಐತಿಹಾಸಿಕವಾಗಿ ಪ್ರಸಿದ್ದಿಯಾಗಿರುವ ಈ ದೇವಸ್ಥಾನಕ್ಕೆ ಅಪಾಯ ತಪ್ಪಿದ್ದಲ್ಲ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.