You are currently viewing ನದಾಪ್/ಪಿಂಜಾರ್ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ವಿಜಯನಗರ ಜಿಲ್ಲೆಯಿಂದ ಕೂಗು.

ನದಾಪ್/ಪಿಂಜಾರ್ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ವಿಜಯನಗರ ಜಿಲ್ಲೆಯಿಂದ ಕೂಗು.

ಹೊಸಪೇಟೆ( ವಿಜಯನಗರ ):ಕರ್ನಾಟಕ ರಾಜ್ಯದ ನಧಾಫ್/ಪಿಂಜಾರ್ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ  ಅದಲ್ಲದೆ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು  ಕರ್ನಾಟಕ ರಾಜ್ಯ ನದಾಫ್ / ಪಿಂಜಾರ್  ಸಂಘಟನೆ ಜಿಲ್ಲಾಧ್ಯಕ್ಷರಾದ ಹೊನ್ನೂರು ಸಾಬ್ ತಿಳಿಸಿದ್ದಾರೆ.

ಅಕ್ಟೋಬರ್ ತಿಂಗಳ  29 ರಂದು  ಹೊಸಪೇಟೆ ನಗರದ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ರಾಜ್ಯ ನಧಾಫ್/ಪಿಂಜಾರ್ ಸಂಘಟನೆಯ ರಾಜ್ಯ ಮಟ್ಟದ 30ನೇ ವಾರ್ಷಿಕೋತ್ಸವ ನಡೆಯಲಿದ್ದು, ರಾಜ್ಯದ ಪ್ರತಿ ಜಿಲ್ಲೆಗಳಿಂದ ನಧಾಫ್/ಪಿಂಜಾರ್ ಜನಾಂಗದ ಬಾಂದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ . ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ , ನಧಾಫ್/ಪಿಂಜಾರ್ ಸಮುದಾಯದ ಮುಖಂಡರು ಹಾಗೂ ಉದ್ಯಮಿ, ಅಟ್ಟಿಕಾ ಗೋಲ್ಡ್ ಮಾಲೀಕರು ಆದ ಬೊಮ್ಮನಹಳ್ಳಿ ಬಾಬು ಅವರನ್ನು ಆಗಮಿಸುವಂತೆ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ ಕಟ್ಟಡದಲ್ಲಿರುವ ಅಟ್ಟಿಕಾ ಗೋಲ್ಡ್ ಕಛೇರಿಗೆ ವಿಜಯನಗರ ಜಿಲ್ಲೆಯ ಪಿಂಜಾರ್ ನಧಾಪ್ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರ್ ಸಾಬು  ಆಮಂತ್ರಣ ಪತ್ರಿಕೆ ನೀಡಿ ಸಮಾರಂಭಕ್ಕೆ ಆಹ್ವಾನಿಸಿದರು.

ಅಕ್ಟೋಬರ್ 29 ರಂದು ನಡೆಯುವ ರಾಜ್ಯಮಟ್ಟದ ನದಾಫ್/ಪಿಂಜಾರ್ ಸಮು ದಾಯದ 30ನೇ ವಾರ್ಷಿಕೋತ್ಸವದಲ್ಲಿ  ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ವಿವಿಧ ಪಕ್ಷಗಳ ರಾಜಕೀಯ ನಾಯಕರು ಹಾಗೂ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ,  ಅಂದು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ನಧಾಫ್ /ಪಿಂಜಾರ್ ಸಮುದಾಯ ತನ್ನ ಶಕ್ತಿಪ್ರದರ್ಶನ  ನಡೆಯಲಿ ದೆ ಎಂದು ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ನದಾಫ್  ಸಮುದಾಯದ ವಿಭಾಗಿಯ ಉಪಾಧ್ಯಕ್ಷ ಎಂ.ಇಬ್ರಾಹೀಮ್  ಮತ್ತು ರಾಜ್ಯ ಕಾರ್ಯಕಾರಣಿ ಮಂಡಳಿಯ ಸದಸ್ಯ  ಕಾರಿಗನೂರು ಬಾಲೇಸಾಬು, ಸಮುದಾಯ ಜಿಲ್ಲಾ ಪ್ರತಿನಿಧಿ ಸುಬಾನಿ ಪಿಂಜಾರ,  ಮುಖಂಡ ರಾದ ಮಹಮ್ಮದ್ ಮುನಾಪ್, ಮತ್ತು ಕಾರಿಗನೂರು ಗೋವಿಂದಪ್ಪ, ಹೊನ್ನೂರ್ ಸಾಬು ಅವರಿಗೆ ಸಾತ್ ನೀಡಿದರು.

ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.