You are currently viewing ಮೊಸಳೆ ಪ್ರತ್ತ್ಯಕ್ಷ ಜನರಲ್ಲಿ ಹೆಚ್ಚಿದ ಆತಂಕ.

ಮೊಸಳೆ ಪ್ರತ್ತ್ಯಕ್ಷ ಜನರಲ್ಲಿ ಹೆಚ್ಚಿದ ಆತಂಕ.

ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಬಳಿಯಲ್ಲಿ ಕಳೆದ ಹಲವು ದಿನಗಳಿಂದ ಮೊಸಳೆಯೊಂದು ಪ್ರತ್ತ್ಯಕ್ಷವಾಗಿತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪಟ್ಟಣದ ಜೋಗಿ ಕಾಲುವೆ ದಡದಲ್ಲಿ ಪ್ರತಿದಿನ ಮದ್ಯಾಹ್ನದ ಸುಮಾರಿಗೆ ಕಾಣಿಸಿಕೊಳ್ಳುವ ಈ ಮೊಸಳೆ ಬಿಸಿಲಿಗೆ ಮೈಯೊಡ್ಡಿ ಮಲಗುತ್ತದೆ. ಜನರ ಸುಳಿವು ಕಾಣಿಸಿಕೊಳ್ಳುತಿದ್ದಂತೆ ನೀರಿಗೆ ಇಳಿಯುವ ಮೊಸಳೆ ಮತ್ತೆ ಮಾರನೆ ದಿನ ಮದ್ಯಾಹ್ನವೇ ದಡಕ್ಕೆ ಬಂದು ಮೈಯೊಡ್ಡುತ್ತದೆ.

ಕಳೆದ ಐದಾರು ದಿನಗಳಿಂದ ದಿನ ನಿತ್ತ್ಯದ ಕಾಯದಂತೆ ಕಾಣಿಸಿಕೊಳ್ಳುವ ಮೊಸಳೆ, ಈ ಬಾಗದ ಜನ ಸಾಮಾನ್ಯರ ಆತಂಕ ಹೆಚ್ಚುಮಾಡಿದೆ. ಇನ್ನು ಈ ಕಾಲುವೆ ಇರುವ ಪ್ರದೇಶದ ಕೂಗಳೆತೆಯ ದೂರದಲ್ಲೇ ಕಲ್ಮಠ ಶಾಲೆ ಕೂಡ ಇದ್ದು  ಶಾಲಾ ಮಕ್ಕಳಿಗೆ ಏನಾದರು ತೊಂದರೆ ಎದುರಾಗಬಹುದು ಎಂದು ಸ್ಥಳೀಯರು ವೀಡಿಯೊ ಚಿತ್ರೀಕರಣಮಾಡಿ ಜನ ಸಾಮಾನ್ಯರಲ್ಲಿ ಜಾಗೃತಿ ಕೂಡ ಮೂಡಿಸಿದ್ದಾರೆ.

ಇನ್ನು ಅದರಲ್ಲೂ ಬತ್ತದ ಗದ್ದೆಗಳು ಹೆಚ್ಚಿರುವ ಈ ಸ್ಥಳದಲ್ಲಿ ರೈತರ ದನ ಕರುಗಳು ಮೇಯುವುದಕ್ಕೆ ಬರುವುದು ಕೂಡ ಸರ್ವೇ ಸಾಮಾನ್ಯವಾಗಿದ್ದು, ಯಾವುದಕ್ಕೂ ಈ ಬಾಗದ ಜನ ಸಾಮಾನ್ಯರು ಕೊಂಚ ಎಚ್ಚರಿಕೆ ವಹಿಸುವುದು ಸೂಕ್ತ. ಇ‌ನ್ನು ಕಂಪ್ಲಿ ಪಟ್ಟಣದ ಪಕ್ಕದಲ್ಲಿ ಹರಿದಿರುವ ತುಂಗಭದ್ರ ನದಿಯ ವಡಲಲ್ಲಿ ಅಪಾರ ಜಲಚರಗಳು ಅಡಕವಾಗಿವೆ. ಅದರಲ್ಲಿ ನೀರುನಾಯಿ ಮತ್ತು ಮೊಸಳೆಗಳು ಪ್ರಮುಖವಾಗಿವೆ. ಆದರೆ ಪಟ್ಟಣದ ಇನ್ನೊಂದು ಬಾಗದಲ್ಲಿ ಕಾಣಿಸಿಕೊಂಡಿರುವ ಈ ಒಂಟಿ ಮೊಸಳೆಯಿಂದ ಅಪಾಯ ಎದುರಾಗಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೂಡಲೆ ಸಂಭಂದ ಪಟ್ಟ ಇಲಾಖೆಗಳು ಇದರ ಬಗ್ಗೆ ಗಮನ ಹರಿಸಿ ಮುಂಜಾಗೃತೆ ಕ್ರಮ ಕೈಗೊಳ್ಳಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.