You are currently viewing ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಸಾಮಾನ್ಯ ಪ್ರಯಾಣಿಕರ ಗೋಳು ಕೇಳುವವರು ಯಾರು..?

ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಸಾಮಾನ್ಯ ಪ್ರಯಾಣಿಕರ ಗೋಳು ಕೇಳುವವರು ಯಾರು..?

ವಿಜಯನಗರ..ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಸಾಮಾನ್ಯ ಪ್ರಯಾಣಿಕರಿಗೂ ಆಸನಗಳ ಮೀಸಲು ಕಾನೂನು ಜಾರಿಯಾಗಬೇಕ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ಇಂತದ್ದೊಂದು ಪ್ರಶ್ನೆ ಎದುರಾಗುವುದಕ್ಕೆ ಕಾರಣ ಇತ್ತೀಚೆಗೆ ಸರ್ಕಾರಿ ಸಾರಿಗೆ ಬಸ್ಸಲ್ಲಿ ಕಂಡ ವಾಸ್ತವ ಪರಿಸ್ಥಿತಿ,  ಹೌದು ಸರ್ಕಾರಿ ಸಾರಿಗೆ ಬಸ್ಸಲ್ಲಿ ಒಬ್ಬ ಸಾಮಾನ್ಯ ಪ್ರಯಾಣಿಕ ಪ್ರಯಾಣಿಸಬೇಕಾದರೆ ಕುಳಿತುಕೊಳ್ಳಲು ಆಸನಗಳೇ ಸಿಗುವುದಿಲ್ಲ. ಕಾರಣ ಬಸ್ಸಿನ ಪ್ರತಿಯೊಂದು ಆಸನಗಳನ್ನ ಶಾಲಾ, ಕಾಲೇಜು ವಿಧ್ಯಾರ್ಥಿಗಳೇ ಆಕ್ರಮಿಸಿಕೊಂಡಿರುತ್ತಾರೆ. ಒಂದು ವೇಳೆ ವಿಧ್ಯಾರ್ಥಿ ಕುಳಿತ ಪಕ್ಕದ ಒಂದೆರಡು ಸೀಟ್ ಕಾಲಿ ಇದ್ದರೂ ಅವರ ಸ್ನೇಹಿತರಿಗಾಗಿ ಸೀಟ್ ಗಳನ್ನ ಮೀಸಲುಮಾಡಿ ಹಿಡಿದಿಟ್ಟುಕೊಂಡಿರುತ್ತಾರೆ.

ಆ ಸಂದರ್ಭದಲ್ಲಿ ಯಾರೇ ಬಂದರೂ ಸೀಟ್ ಗಳನ್ನ ಬೇರೆಯವರಿಗೆ ಬಿಟ್ಟುಕೊಡದೆ ಸಾಮಾನ್ಯ ಪ್ರಯಾಣಿಕರನ್ನ ನಿಲ್ಲಿಸಿ ವಿಧ್ಯಾರ್ಥಿಗಳು ಕುಳಿತಿರುತ್ತಾರೆ,ಇಂತದ್ದೊಂದು ಪರಿಸ್ಥಿತಿ ಕಂಡು ಬಂದಿದ್ದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಿಂದ ಕಂಪ್ಲಿ ಪಟ್ಟಣಕ್ಕೆ ಹೋಗುವ ಸಾರಿಗೆ ಬಸ್ಸಿನಲ್ಲಿ,ಇಂತದ್ದೊಂದು ಪರಿಸ್ಥಿತಿ ಇಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಇರುವುದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಪ್ರಯಾಣಿಕರು ಮಹಿಳೆಯರಾಗಿಲಿ, ಅಥವಾ ಹಿರಿಯ ನಾಗರೀಕರಾಗಿರಲಿ, ಯಾರೇ ಇದ್ದರು ಬಸ್ಸಲ್ಲಿ ನಿಂತೇ ಪ್ರಯಾಣಿಸಬೇಕಾಗಿರುವ ಪರಿಸ್ಥಿತಿ ಇದೀಗ ಎಲ್ಲಾ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ಹಿಂದಿನಿಂದಲೂ ಅಂಗವಿಕಲಿರಿಗೆ, ಹಿರಿಯ ನಾಗರೀಕರಿಗೆ,ಮಹಿಳೆಯರಿಗೆ, ಆಸನಗಳನ್ನ ಮೀಸಲಾಗಿಸಿದೆ  ಸಾರಿಗೆ ಬಸ್ ಗಳಲ್ಲಿ, ಆದರೆ ಇದೀಗ ಸರ್ಕಾರಿ ಸಾರಿಗೆ ಬಸ್ಸಲ್ಲಿ ಸಾಮಾನ್ಯ ಪ್ರಯಾಣಿಕರಿಗೂ ಆಸನಗಳನ್ನ ಕಾಯ್ದಿರಿಸಬೇಕಾದ ಪರಿಸ್ಥಿತಿ ಎದುರಾಗಿದೆ.  ವಿಧ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತವಾಗಿ ಸರ್ಕಾರ ಬಸ್ ಪಾಸ್ ನೀಡುತ್ತಿದೆ ನಿಜ, ಹಾಗೆಂದ ಕೂಡಲೆ ಸಾಮಾನ್ಯ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶ ನೀಡದೆ ಎಲ್ಲಾ ಸೀಟ್ ಗಳಲ್ಲಿ ವಿಧ್ಯಾರ್ಥಿಗಳೇ ಕುಳಿತು ಪ್ರಯಾಣಿಸಿದರೆ ಹಣ ಪಾವತಿಸಿ ಪ್ರಯಾಣಿಸುವ ಪ್ರಯಾಣಿಕರ ಪಾಡೇನು.

ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚುವುದಾದರು ಹೇಗೆ, ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಇಂತಾ ಪರಿಸ್ಥಿತಿ ಇರುವ ಕಾರಣಕ್ಕೆ ಬಹುತೇಕ ಪ್ರಯಾಣಿಕರು ಖಾಸಗಿ ಸಾರಿಗೆಯ ಕಡೆ ಮುಖಮಾಡುವುದು ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ಕೂಡಲೆ ಈ ಪರಿಸ್ಥಿತಿಯತ್ತ ಗಮನ ಹರಿಸಬೇಕಾಗಿದೆ. ಮಹಿಳೆಯರಿಗೆ, ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ , ಆಸನಗಳನ್ನ ಮೀಸಲಿರಿಸಿದ ರೀತಿಯಲ್ಲೇ ಸಾಮಾನ್ಯ ಹಣ ಪಾವತಿಸಿ ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕರಿಗೂ ಆಸನಗಳನ್ನ ಮೀಸಲಿರಿಸಬೇಕಾಗಿದೆ. ಅದರಲ್ಲೂ ಇಂತದ್ದೊಂದು ಪರಿಸ್ಥಿತಿ ಹೆಚ್ಚಾಗಿ ಕಂಡುಬರುವುದು ಗ್ರಾಮೀಣ ಸಾರಿಗೆ ಬಸ್ ಗಳಲ್ಲಿ, ನಗರ ಪಟ್ಟಣ ಪ್ರದೇಶಗಳಿಗೆ ಶಾಲೆ ಕಾಲೇಜು ಓದಲು ಬರುವ ವಿಧ್ಯಾರ್ಥಿಗಳು, ತಮ್ಮೂರಿನ ಸಾಮಾನ್ಯ ಪ್ರಯಾಣಿಕರಿಗೆ ಬಸ್ಸಲ್ಲಿ ಸೀಟು ಬಿಡದೆ ಕುಳಿತುಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತೆ. ಈ ಕಾರಣಕ್ಕೆ ಗ್ರಾಮೀಣ ಬಾಗದ ಸಾಮಾನ್ಯ ಪ್ರಯಾಣಿಕ ಖಾಸಗಿ ಸಾರಿಗೆಯತ್ತ ಮುಖಮಾಡುವುದು ಕಂಡುಬರುತ್ತಿದೆ. ಇದರಿಂದ ಸಾರಿಗೆ ಸಂಸ್ಥೆಯ ಆದಾಯಕ್ಕೂ ಹೊಡೆತ, ಕ್ರಮೇಣ ವಿಧ್ಯಾರ್ಥಿಗಳಿಗೂ ತೊಂದರೆ ಎದುರಾಗುತ್ತೆ. ಹಾಗಾಗಿ ಸರ್ಕಾರ ಈ ವಿಚಾರವಾಗಿ ಆಲೋಚನೆಮಾಡಿ ತೀರ್ಮಾನ ಕೈಗೊಳ್ಳಬೇಕಿದೆ. ಇದು ನೋಡೊದಕ್ಕೆ ಕೇಳೊದಕ್ಕೆ ಸಣ್ಣ ಸಮಸ್ಯೆ ಆದರು ಇದರ ಪರಿಣಾಮ ಮಾತ್ರ ದೊಡ್ಡದಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.