You are currently viewing ವಿಧಾನಸೌದಕ್ಕೆ ಬರುವುದು ಕಷ್ಟವಾದೀತು ಎಚ್ಚರ ಎಂದು ಭಾಸ್ಕರ್ ಪ್ರಸಾದ್.

ವಿಧಾನಸೌದಕ್ಕೆ ಬರುವುದು ಕಷ್ಟವಾದೀತು ಎಚ್ಚರ ಎಂದು ಭಾಸ್ಕರ್ ಪ್ರಸಾದ್.

ವಿಜಯನಗರ(ಹೊಸಪೇಟೆ)….ಹೋರಾಟಗಾರರ ಮೇಲೆ ದೌರ್ಜನ್ಯ ಮಾಡಿದ್ರೆ ವಿಧಾನ ಸೌಧಕ್ಕೆ ಬರೋದು ಕೂಡ ಕಷ್ಟವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ SDPI ರಾಜ್ಯ ಪ್ರಧಾನ  ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಎಚ್ಚರಿಸಿದ್ದಾರೆ. 

ಹೊಸಪೇಟೆಯ ಡಿ.ಪೊಲಪ್ಪ ಕುಟುಂಬಕ್ಕೆ ಜೀವ ಬೆದರಿಕೆ, ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಆನಂದ್ ಸಿಂಗ್ ವಿರುದ್ದ ಮಾತನಾಡಲು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಾಸ್ಕರ್ ಪ್ರಸಾದ್,  ಈಗಾಗಲೇ ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ಕು ಜನರ ವಿರುದ್ಧ ಕೇಸ್ ದಾಖಲಾಗಿದೆ, ಆ ಕೇಸ್ ಅನ್ವಯ ಆನಂದ್ ಸಿಂಗ್ ರನ್ನು ಬಂಧಿಸಬೇಕು, ರಾಜ್ಯ ಬಿಜೆಪಿ ಸರ್ಕಾರದ ಸಚಿವರಾಗಿ ತಾವು ಈ ರೀತಿಯ ದೌರ್ಜನ್ಯ ಎಸಗೋದು ಸರಿಯಲ್ಲಾ 

ನಿಮ್ಮ ಅಧಿಕಾರ, ಹಣಬಲ, ತೋಳ್ಬಲ ಇಲ್ಲಿ ಚಲಾವಣೆ ಮಾಡಬೇಡಿ, ಒಂದು ವೇಳೆ ಹೋರಾಟಗಾರರ ಧ್ವನಿ ಹತ್ತಿಕ್ಕೋ ಕೆಲಸ ಮಾಡಿದ್ರೆ, ಅಥವಾ ಅವರ ಮೇಲೆ ಕೈ ಮಾಡೋ ಕೆಲಸ ಸರಿಯಲ್ಲಾ, ನೀವು ವಿಧಾನ ಸೌಧಕ್ಕೆ ಬರೋದು ಕಷ್ಟ ಆಗುತ್ತದೆ ಎಂದು ಆನಂದ್ ಸಿಂಗ್ ಅವರಿಗೆ  ಎಚ್ಚರಿಕೆ ನೀಡಿದ ಭಾಸ್ಕರ ಪ್ರಸಾದ್.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ತೆರೆಯಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.