ಕುರಿ ಕದಿಯಲು ಕಾರು ಬಳಸಿದರು ಖದೀಮರು. ಕೊನೆಗೆ ಕಲ್ಲು ಇಲ್ಲ ಕಲ್ಲಿಗೆ ಹತ್ತಿದ ಬೆಲ್ಲನೂ ಇಲ್ಲದಂಗಾಯಿತು ಇವರ ಪರಿಸ್ಥಿತಿ.


ವಿಜಯನಗರ.. ಕುರಿ ಮಂದೆಯಿಂದ ಮೂರು ಕುರಿ ಮತ್ತು ಒಂದು ಮೇಕೆಯನ್ನ ಕದ್ದಿದ್ದ ಐವರು ಕಳ್ಳರನ್ನ ಕದ್ದ ಮೂರೇ ದಿನದಲ್ಲಿ ಬಂದಿಸುವಲ್ಲಿ ಅರೆಸಿಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂದಿತರಿಂದ ಮೂರು ಕುರಿ ಹಾಗೂ ಒಂದು ಮೇಕೆ ಮತ್ತು 14500 ನಗದು ಹಾಗೂ ಕಳ್ಳತನಕ್ಕೆ ಬಳಕೆಮಾಡಿದ ಟಾಟಾ ಜಸ್ಟ್ ಕಾರನ್ನ ಸಹ ವಶಕ್ಕೆ ಪಡೆದಿದ್ದಾರೆ.


1)ದೊಡ್ಡೇಶಿ ಗಿರಿಯಾಪುರ2)ಪ್ರಭುದೇವ3)ಮಹೇಶ್ ಹೆಚ್.4)ತಳವಾರ ಸಂತೋಷ್.5)ಪೊತಲಕಟ್ಟೆ ನಟರಾಜ. 


ಬಂದಿತ ಆರೋಪಿಗಳಾಗಿದ್ದಾರೆ. ಬಂದಿತ ಆರೋಪಿಗಳೆಲ್ಲ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚನ್ನಾಪುರ ಗ್ರಾಮದವರಾಗಿದ್ದು, ಇದೇ ತಿಂಗಳು 22ನೇ ತಾರೀಕಿನಂದು ಹರಪನಹಳ್ಳಿ ತಾಲೂಕಿನ ಅರಸಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಯರಬಳ್ಳಿ ಮತ್ತು ಕ್ಯಾರಕಟ್ಟಿ ಗ್ರಾಮಗಳ ಮದ್ಯದಲ್ಲಿದ್ದ ಕುರಿ ಹಟ್ಟಿಯಿಂದ ಈ ಐವರು ಮೂರು ಕುರಿ ಮತ್ತು ಒಂದು ಮೇಕೆ ಮರಿಯನ್ನ ಟಾಟ ಜಸ್ಟ್ ಕಾರಲ್ಲಿ ಕದ್ದು ಪರಾರಿಯಾಗಿದ್ದರು.
ಈ ಸಂಭಂದ ಕುರಿ ಮಾಲೀಕ ಯರಬಳ್ಳಿ ಗ್ರಾಮದ ಶಶಿಕುಮಾರ್ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಮಾಡಿ ಕುರಿಗಳ ಹುಡುಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣವನ್ನ ಕೈಗೆತ್ತಿಕೊಂಡ ಅರಸಿಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರಶಾಂತ್ ಕುಮಾರ್ ಹಾಗೂ ನಾಗರತ್ನ ಆರೋಪಿಗಳನ್ನ ಕದ್ದ ಮಾಲು ಸಮೇತ ಆರೋಪಿಗಳನ್ನ ಬಂದಿಸಿದ್ದಾರೆ. ಹರಪನಹಳ್ಳಿ ಡಿ.ವೈ.ಎಸ್ಪಿ. ಮತ್ತು ಸಿ.ಪಿ.ಐ ನೇತೃತ್ವದಲ್ಲಿ ನಡೆದ ಈ ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ಎಂ.ವೀರೇಶ್, ವಿಜಯ್ ಗುತ್ತಲದ, ಮಹಂತೇಶ, ಬಾಗಿಯಾಗಿದ್ದರು. ತಮ್ಮ ಸಿಬ್ಬಂದಿಗಳ ಕಾರ್ಯವೈಖರಿಯನ್ನ ವಿಜಯನಗರದ ಎಸ್ಪಿ.ಡಾಕ್ಟರ್ ಅರುಣ್ .ಕೆ ಶ್ಲಾಗಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.