You are currently viewing ಖಾಕಿಗೆ ಟಾಂಗ್ ಕೊಡಲು ಹೋಗಿ ಶಾಕ್ ಹೊಡೆಸಿಕೊಂಡ ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿಗಳು.

ಖಾಕಿಗೆ ಟಾಂಗ್ ಕೊಡಲು ಹೋಗಿ ಶಾಕ್ ಹೊಡೆಸಿಕೊಂಡ ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿಗಳು.

ವಿಜಯನಗರ (ಹೊಸಪೇಟೆ) ಐದನೇ ದಿನದ ಗಣೇಶ ವಿಸರ್ಜನೆಯ ಕಾರ್ಯಕ್ರಮಕ್ಕೆ ಹೊಸಪೇಟೆ ನಗರದಲ್ಲಿ ಭರ್ಜರಿ ತಯಾರಿ ನಡೆದಿದೆ. ಈ ಸಂಭಂದ ಬೇರೆ ಬೇರೆ ಕಡೆಗಳಿಂದ ಡಿಜೆ ಸೆಟ್ ಗಳು ಹೊಸಪೇಟೆ ನಗರಕ್ಕೆ ಪ್ರವೇಶ ನೀಡಿದ್ದು, ಇದನ್ನ ಗಮನಿಸಿದ ವಿಜಯನಗರ ಪೊಲೀಸ್ ಇಲಾಖೆ ಡಿಜೆ ಸೆಟ್ ಗಳು ನಗರ ಪ್ರವೇಶಕ್ಕೆ ಮುನ್ನವೇ, ಆರು ಡಿಜೆ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. 

ಡಿಜೆ ವಾಹನಗಳನ್ನ ವಶಕ್ಕೆ ಪಡೆದ ವಿಷಯ ನಗರದೆಲ್ಲೆಡೆ ತಿಳಿಯುತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ವಶಕ್ಕೆ ಪಡೆದ ಡಿಜೆ ವಾಹನಗಳನ್ನ ಬಿಡುವಂತೆ ಒತ್ತಾಯಿಸಿದರು. ಅದಲ್ಲದೆ ಐದನೇ ದಿನದ ಗಣೇಶ ವಿಸರ್ಜನೆಯ ಕಾರ್ಯಕ್ರಮಕ್ಕೆ ಡಿಜೆ ಬಳಕೆಮಾಡಲು ಅನುಮತಿಯನ್ನ ಸಹ ಕೇಳಿದರು.

ಇದಾದ ಬಳಿಕ ಸಚಿವ ಆನಂದ್ ಸಿಂಗ್ ಕೂಡ ಪಟ್ಟಣ ಪೊಲೀಸ್ ಠಾಣೆಗೆ ಬಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಆಹವಾಲು ಕೇಳಿ, ವಶಕ್ಕೆ ಪಡೆದಿರುವ ಡಿಜೆ ವಾಹನಗಳನ್ನ ಬಿಡುವಂತೆ ಎಸ್ಪಿಯವರಿಗೆ ಸೂಚನೆ ನೀಡಿದರು. ಆದರೆ ಎಸ್ಪಿಯವರು ನಿಯಮದಂತೆ ಗಣೇಶ ವಿಸರ್ಜನೆ ಕಾರ್ಯಕ್ಕೆ ಅನುಮತಿ ನೀಡಲಾಗುವುದು ಎಂದು ಸಾದಾ ಸೀದ ಉತ್ತರ ನೀಡಿದ್ದಾರೆ.

ನಂತ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್ಪಿ ಅರುಣ್ ಕುಮಾರ್ ಕೆ. ಡಿಜೆ ಪರವಾನಿಗೆ ಕುರಿತು ಸಚಿವ ಆನಂದ್ ಸಿಂಗ್ ಅವರು ಬಂದಿದ್ರು, ಕಾನೂನು ಪ್ರಕಾರ ಯಾವೇಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕೋ ಅವುಗಳನ್ನ ಮಾಡಿದ್ದೇವೆ, ನಾಳೆ 5 ನೇ ದಿನದ ಗಣಪತಿಗಳ ವಿಸರ್ಜನೆಗೆ ಅವಕಾಶ ಇದೆ, ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡಬೇಕಾಗುತ್ತದೆ, ನಿನ್ನೆ ನಿಯಮ ಮೀರಿ ಸೌಂಡ್ ಬಳಸಿರೋ ಡಿಜೆಗಳನ್ನು ಸೀಜ್ ಮಾಡಲಾಗಿದೆ, ತಂಬ್ರಳ್ಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಯಾಗಿದೆ, ಈ ಸಂಬಂಧಿಸಿದಂತೆ 9 ಜನರನ್ನ ವಶಕ್ಕೆ ಪಡೆಯಲಾಗಿದೆ. ಹೀಗೆ ನಡೆದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ರಜೆಗೆ ಬಂದಿದ್ದ ಇಬ್ಬರು ಪೊಲೀಸ್ ಪೇದೆಗಳು ಇರುವುದು ತಿಳಿದು ಬಂದಿದೆ, ಅವರು ಯಾವ ಪೊಲೀಸ್ ಇಲಾಖೆಗೆ ಸಂಭಂದಿಸಿದವರು ಎಂದು ತನಿಖೆ ನಡೆಸಿ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇನ್ನು ಡಿ.ಸಿ.ಅನಿರುದ್ ಶ್ರವಣ್ ಅವರು ಕೂಡ ಸ್ಥಳದಲ್ಲಿದ್ದು ಕಾನೂನು ಸುವೆವಸ್ಥೆಗೆ ಯಾವೆಲ್ಲ ಸಹಕಾರವನ್ನ ನೀಡಬೇಕಿತ್ತೊ ಆ ಕೆಲಸವನ್ನ ಡಿ.ಸಿಯವರು ಕೂಡ ಮಾಡಿದಂತಿತ್ತು.

ಕೇಸ್ ದಾಖಲಿಸಿದ್ದಕ್ಕೆ  ಪೊಲೀಸ್ ಠಾಣೆಯ ವಿದ್ಯೂತ್ ಸಂಪರ್ಕವನ್ನೇ ಕಡಿತಗೊಳಿಸಿದರು..

ಹೌದು ಹೊಸಪೇಟೆ ನಗರದ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕೆ.ಪಿ.ಟಿ.ಸಿ.ಎಲ್. ಕಛೇರಿಯ ಬಳಿಯಲ್ಲಿ ಮೂರನೆ ದಿನದ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನಿಯಮ ಮೀರಿದಕ್ಕೆ ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ. ಇಲ್ಲಿನ ಕೆ.ಪಿ.ಟಿ.ಸಿ.ಎಲ್ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಿಸಿದ್ದರು, ಇದರಿಂದ ಸಿಟ್ಟಿಗೆದ್ದ ಕೆ.ಪಿ.ಟಿ.ಸಿ.ಎಲ್ ಸಿಬ್ಬಂದಿಗಳು ಬಡಾವಣೆ ಪೊಲೀಸ್ ಠಾಣೆಯ ವಿದ್ಯೂತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ,  ಈ ವಿಷಯ ಎಸ್ಪಿಯವರ ಗಮನಕ್ಕೆ ಬರುತಿದ್ದಂತೆ ಕಡಕ್ ಎಚ್ಚರಿಕೆ ಕೊಟ್ಟು ಕಡಿತಗೊಳಿಸಿರುವ ವಿದ್ಯೂತ್ ಸಂಪರ್ಕವನ್ನ ಮರಳಿ ಕೊಡುವಂತೆ ಸೂಚಿಸಿದ್ದಾರೆ, ಅದಾದ ಬಳಿಕ ರಾತ್ರಿ ಒಂದು ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಮತ್ತೆ ವಿದ್ಯೂತ್ ಸಂಪರ್ಕ ಕೊಟ್ಟಿದ್ದಾರೆ. ಸದ್ಯಕ್ಕೆ ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ,ಈ ಪ್ರಕರಣದಲ್ಲಿ ಯಾರ ಮೇಲೆ ಏನು ಕ್ರಮ ಆಗುತ್ತೊ ಕಾದು ನೋಡಬೇಕಿದೆ. ಇನ್ನು ಅದೇ ರೀತಿಯಾಗಿ ಜಿಲ್ಲೆಯ ತಂಬ್ರಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೂಡ ಗುಂಪು ಗಲಭೆ ನಡೆದು ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿ ಒಂಬತ್ತು ಮಂದಿಯನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಇನ್ನೂ ದುರಂತ ಎಂದರೆ  ರಜೆ ಮೇಲೆ ಗಣೇಶ ಹಬ್ಬ ಆಚರಣೆಗೆ ಬಂದಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕೂಡ ಈ ಗಲಭೆಯಲ್ಲಿ ಬಾಗಿಯಾಗಿರುವುದು ಬೆಳಕಿಗೆ ಬಂದಿದೆ, ಆದರೆ ಹೀಗೆ ರಜೆಯ ಮೇಲೆ ಬಂದಿದ್ದ ಇಬ್ಬರು ಯಾವ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಒಳಪಟ್ಟವರು ಎಂಬುದು ಮಾತ್ರ ಬೆಳಕಿಗೆ ಬಂದಿಲ್ಲ.ಈ ಸಂಭಂದ ತನಿಖೆ ನಡೆಸಿ ಅವರ ವಿರುದ್ದ ಕೂಡ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಸ್ಪಷ್ಟನೆ ಕೊಟ್ಟಿದ್ದಾರೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ತೆರೆಯಿರಿ.

ವರದ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.