You are currently viewing ವಿಶ್ವ ವಿಖ್ಯಾತ ಹಂಪಿಯ ಬಳಿ ಇದೆ. ಮಿನಿ ತಾಜ್ ಮೆಹಲ್.

ವಿಶ್ವ ವಿಖ್ಯಾತ ಹಂಪಿಯ ಬಳಿ ಇದೆ. ಮಿನಿ ತಾಜ್ ಮೆಹಲ್.

ವಿಜಯನಗರ..ತನ್ನ ಪ್ರೇಯಸಿಯ ನೆನಪಿಗಾಗಿ ಸ್ಮಾರಕ ನಿರ್ಮಿಸಿದವರು ಯಾರು ಎಂದು ಕೇಳಿದ್ರೆ ಸಹಜವಾಗಿ ಎಲ್ಲರು ಹೇಳೊದು ಷಹಜಾನ್ ಹೆಸರನ್ನ, ಆದ್ರೆ ಇಂತಾ ಯಾವೊಂದು ಇತಿಹಾಸ ಮತ್ತು ಹಿನ್ನೆಲೆಯನ್ನ ತಿಳಿಯದ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ನೆನಪಿಗಾಗಿ ಸ್ಮಾರಕ ನಿರ್ಮಿಸಿ ತಾನೂ ಕೂಡ ಪ್ರೇಯಸಿಯ ಜೊತೆಗೆ ಸಮಾದಿಯಾದ ಪ್ರೇಮ್ ಕಹಾನಿಯೊಂದು ವಿಶ್ವ ವಿಖ್ಯಾತ ಹಂಪಿಯಲ್ಲಿ ನಡೆದಿದೆ.

ಹೌದು ಹೀಗೆ ಈ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರ ಚಿತ್ತವನ್ನ ಸೆಳೆಯುವ ಈ ಸ್ಮಾರಕವೇ ಈ ಪ್ರೇಮ್ ಕಹಾನಿಯ ಮಿನಿ ತಾಜ್ ಮೆಹಲ್, ಇನ್ನು ಈ ಸ್ಮಾರಕ ನಿರ್ಮಿಸುವುದರ ಹಿಂದೆ ಒಂದು ಅಪರೂಪದ ಪ್ರೇಮ್ ಕಹಾನಿಯೊಂದಿದೆ, ಅಂದಹಾಗೆ ಈ ಪೊಟೊದಲ್ಲಿರುವ ಈ ಇಬ್ಬರು ಜೋಡಿಗಳೇ ಕಥಾನಾಯಕ ನಾಯಕಿಯರು, ಹೌದು ಪಳಿನಿಯಪ್ಪ ಮತ್ತು ಹೊಳ್ಳಿಯಮ್ಮ ಎಂಭ ಈ ಇಬ್ಬರು ಪ್ರೇಮ ವಿವಾಹವಾಗಿ ಜೀವನ ಪೂರ್ತಿ ಜೊತೆಯಾಗಿ ಬದುಕಬೇಕೆಂದು ಕನಸು ಕಟ್ಟಿದವರು, ತಮ್ಮ ಕನಸಿನಂತೇ ಜೀವನದ ಇಳಿ ವಯಸ್ಸಿನ ವರೆಗೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕಿ ಪ್ರೇಮಿಗಳಿಗೆ ಮಾದರಿಯಾದವರು,

1986ರಲ್ಲಿ ವಿಧಿ ಈ ಪ್ರೇಮಿಗಳ ಬದುಕಿನಲ್ಲಿ ಕಾಯಿಲೆಯೊಂದನ್ನ ತಂದು ಹೊಳ್ಳಿಯಮ್ಮ ನನ್ನ  ಕಸಿದಿಕೊಂಡು ಪಳಿನಿಯಪ್ಪ ನನ್ನ ಒಬ್ಬಂಟಿಯಾಗಿ ಮಾಡಿಬಿಡುತ್ತೆ, ತನ್ನ ಪ್ರೇಯಸಿಯನ್ನ ಬೆಟ್ಟದಷ್ಟು ಪ್ರೀತಿಸುತಿದ್ದ ಪಳಿನಿಯಪ್ಪ ತನ್ನ ಹೆಂಡತಿಯ ನೆನಪು ಶಾಸ್ವತವಾಗಿ ಉಳಿಯಬೇಕೆನ್ನುವ ಉದ್ದೇಶಕ್ಕೆ ಹೊಳ್ಳಿಯಮ್ಮ ಸಮಾದಿಯ ಮೇಲೆಯೇ ಈ ಸ್ಮಾರಕ ನಿರ್ಮಿಸಿ ನೆನಪು ಉಳಿಯುವಂತೆ ಮಾಡುತ್ತಾನೆ.

ಇನ್ನು ದಿನ ಕಳೆದಂತೆ ಹೊಳ್ಳಿಯಮ್ಮ ನೆನಪಿನಲ್ಲೇ ಜೀವನ ಸಾಗಿಸುತಿದ್ದ ಪಳಿನಿಯಪ್ಪ ಕೂಡ 2006ರಲ್ಲಿ ವಿದಿವಶರಾಗುತ್ತಾರೆ, ನಂತ್ರ ಇವರ ಏಳು ಜನ ಮಕ್ಕಳು ಸೇರಿ ತಾಯಿ ಹೊಳ್ಳಿಯಮ್ಮ ಸಮಾದಿಯ ಪಕ್ಕದಲ್ಲೇ ತಂದೆಯ ಸಮಾದಿಯನ್ನ ಕೂಡ ನಿರ್ಮಿಸಿ, ಬದುಕಿನದಲ್ಲೂ  ಬದುಕಿನ ನಂತರವೂ ಈ ಜೋಡಿ ಜೊತೆಗಿರುವಂತೆ ಮಾಡುತ್ತಾರೆ ಇವರ ಮಕ್ಕಳು, ಇನ್ನು ಸದ್ಯೆಕ್ಕೆ ಈ ಸ್ಮಾರಕ ವಿಶ್ವ ವಿಖ್ಯಾತ ಹಂಪಿಗೆ ಬರುವ ಪ್ರವಾಶಿಗರ ಆಕರ್ಷಣೀಯ ಕೇಂದ್ರ ಕೂಡ ಹೌದು, ಹೊಸಪೇಟೆಯಿಂದ ಕಡ್ಡಿ ರಾಂಪುರ ಮಾರ್ಗವಾಗಿ ಹಂಪಿಗೆ ಹೋಗುವ ಪ್ರವಾಸಿಗರಿಗೆ ಕಡ್ಡಿರಾಂಪುರದ ನಂತ್ರ ಎಡ ಬಾಗದಲ್ಲಿ ಕಾಣಸಿಗುವ ಈ ಸ್ಮಾರಕ ಅಂದಾಜು ಎರಡು ಎಕ್ಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ,

ಸುತ್ತಲೂ ಕಾಂಪೌಂಡ್ ನಿರ್ಮಿಸಿ ಸ್ಮಾರಕದ ಮುಂಬಾಗದ ಕಲ್ಲು ಗುಡ್ಡದ ಮೇಲೆ ನಾಲ್ಕಾರು ನವಿಲು ಹಿಂಡುಗಳನ್ನ ಸ್ರಷ್ಠಿಸಿ ದಾರಿಯಲ್ಲಿ ಹಾದು ಹೋಗುವವರು ಒಂದು ಕ್ಷಣ ಈ ಸ್ಮಾರಕದ ಹಿನ್ನೆಲೆಯೇನು ಎಂದು ತಿಳಿಯುವಂತೆ ಮಾಡಿದ್ದಾರೆ ಪಳಿನಿಯಪ್ಪ, ಅಷ್ಟೆ ಅಲ್ಲದೆ ಈ ಸ್ಮಾರಕದ ಮೇಲೆ ಎಲ್ಲಿ ನೋಡಿದ್ರು ಮನ ಸೆಳೆಯುವಂತೆ ಕಲಾಕ್ರತಿಗಳು ಸಂಗೀತ ವಾದ್ಯೆಗಳನ್ನ ನುಡಿಸುವ ಕಲಾವಿದರ ದಂಡು ಈ ಸ್ಮಾರಕದ ಮೇಲ್ಬಾಗದಲ್ಲಿ ನಿರ್ಮಿಸಿರುವುದನ್ನ ನೋಡಿದ್ರೆ ಪಳಿನಿಯಪ್ಪ್ಪ ಮತ್ತು ಹೊಳ್ಳಿಯಮ್ಮರ ಪ್ರೀತಿ ಎಂತಾದ್ದು ಎಂದು ಅರ್ಥವಾಗುತ್ತೆ,

ಇನ್ನು ಹೀಗೆ ಪ್ರೀತಿಯ ಮಂದಿರ ನಿರ್ಮಿಸಿದ ಈ ಪಳಿನಿಯಪ್ಪ ಯಾವುದೇ ಸರ್ಕಾರಿ ಉದ್ಯೂಗಿಯಾಗಲಿ ಅಥವಾ ಉದ್ಯೆಮಿಯಾಗಲಿ ಅಲ್ಲ, ಬದಲಾಗಿ ರೈತ, ತಾನು ಉಳಿಮೆ ಮಾಡುವ ಜಮೀನಿನಲ್ಲೇ ಒಂದಿಷ್ಟು ಜಮೀನು ಮೀಸಲಿಟ್ಟು ತಮ್ಮ ಪ್ರೀತಿಯನ್ನ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟಿರುವ ಈ ಪಳಿನಿಯಪ್ಪ ಅಮರ ಪ್ರೇಮಿಯೇ ಸರಿ, ಇನ್ನು ಪ್ರೀತಿ, ಪ್ರೇಮದ ಮೇಲೆ ನಂಬಿಕೆ ಆಸಕ್ತಿ ಕಳೆದು ಕೊಂಡಿರುವವರು ಇಲ್ಲಿಗೆ ಒಂದು ಸಾರಿ ಬಂದು ಹೋದ್ರೆ ನಿಮ್ಮಲ್ಲಿನ ಪ್ರೀತಿ ಮತ್ತಷ್ಟು ಚಿಗುರೊಡೆಯದೆ ಇರದು.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ

ವರದಿ.ಸುಬಾನಿ ಪಿಂಜಾರ್ ವಿಜಯನಗರ.