You are currently viewing ಅತ್ಯಾಧುನಿಕ ಕೋವಿಡ್ ಆರೈಕೆ ಕೇಂದ್ರ ಪ್ರಾರಂಬಿಸಿದೆ ಜಿಂದಾಲ್.

ಅತ್ಯಾಧುನಿಕ ಕೋವಿಡ್ ಆರೈಕೆ ಕೇಂದ್ರ ಪ್ರಾರಂಬಿಸಿದೆ ಜಿಂದಾಲ್.

ವಿಜಯನಗರ..ಕೊರೊನ ಮೂರನೆ ಅಲೆಯ ಸಾಂಕ್ರಮಿಕ ರೋಗ ತಡೆಗಟ್ಟಲು ಜೆ.ಎಸ್.ಡಬ್ಲ್ಯೂ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಹೆಗಲು ಕೊಟ್ಟಿದೆ.ಕಳೆದ ನೂರು ವರ್ಷಗಳ ಅವದಿಯಲ್ಲಿ ಎಂದೂ ಕಂಡರಿಯದ ಕಠಿಣ ಪರಿಸ್ಥಿತಿಯನ್ನ ಕೊರೊನ ಮಹಾಮಾರಿ ಇಂದು ದೇಶಕ್ಕೆ ತಂದೊಡ್ಡಿದ್ದು, ಕಳೆದ ಎರೆಡು ಅಲೆಗಳಲ್ಲಿ ಎದುರಿಸಿದ ರೀತಿಯಲ್ಲೇ,  ಮೂರನೇ ಅಲೆಯ ಸಂದರ್ಭದಲ್ಲಿ ಕೂಡ ಜೆ.ಎಸ್.ಡಬ್ಲ್ಯೂ ಸಂಸ್ಥೆ ಸರ್ಕಾರಕ್ಕೆ ಕೈ ಜೋಡಿಸಿದೆ.

ಈಗಾಗಲೆ ತೋರಣಗಲ್ಲು ಬಳಿಯ ಜಿಂದಾಲ್ ಸಂಸ್ಥೆಯಲ್ಲಿ 300 ಹಾಸಿಗೆಯ ಕೊವಿಡ್ ಕೇರ್ ಸೆಂಟರ್ ಪ್ರಾರಂಬಿಸಲಾಗಿದ್ದು ಈ ಸಂಭಂದ ಇಂದು ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷರು ಆದ ಪಿ.ಕೆ.ಮುರುಗನ್ ಅವರು ಕೊವಿಡ್ ಕೇರ್ ಸೆಂಟರಗೆ ಬೇಟಿ ನೀಡಿ ವೀಕ್ಷಣೆಮಾಡಿದರು.  ನಂತರ ಮಾತನಾಡಿದ ಅವರು ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ ಎಂಬುದು ನಮ್ಮ ಸಂಸ್ಥೆಗೆ ಕೇವಲ ಕಾನೂನಾತ್ಮಕವಾಗಿ ಪಾಲಿಸಬೇಕಾಗಿರುವ ನಿಯಮವಾಗಿರದೇ, ಅತ್ಯಂತ ಶ್ರದ್ಧಾ ಪೂರ್ವಕ ಪವಿತ್ರ ಕಾರ್ಯವಾಗಿದೆ ಮತ್ತು ಮುಖ್ಯ ಗುರಿಯೂ ಆಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿ.ವಿಜಯನಗರ ಕಾರ್ಯಾಗಾರ. ಹಾಗೂ ಬಳ್ಳಾರಿ ಜಿಲ್ಲಾಡಳಿತ ಮತ್ತು ಜೆ.ಎಸ್.ಡಬ್ಲ್ಯೂ ಫೌಂಡೇಶನ್ ಸಹಯೋಗದೊಂದಿಗೆ ನಿರ್ಮಾಣಗೊಳ್ಳುವ ಈ ಆರೈಕೆ ಕೇಂದ್ರವು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಎಲ್ಲಾ ಬಗೆಯ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿದ್ದು,ಸಂಪೂರ್ಣ ಉಚಿತವಾದ ಚಿಕಿತ್ಸೆಯನ್ನು ನೀಡಲು ಜಿಂದಾಲ್  ಮುಂದಾಗಿದೆ.

ಸಿದ್ದಗೊಂಡಿರುವ ಕೊವಿಡ್ ಕೇರ್ ಸೆಂಟರ್ ಸಂಪೂರ್ಣ ವಿಡಿಯೊ ವೀಕ್ಷಣೆಮಾಡಲು ಈ ಕೆಳಗಿನ ಲಿಂಕ್ ಒತ್ತಿರಿ.


ವರದಿ..ಸುಬಾನಿ ಪಿಂಜಾರ.ವಿಜಯನಗರ.