You are currently viewing ಶ್ರೀಶೈಲ ಇದೀಗ ಉದ್ವಿಗ್ನ, ಕರ್ನಾಟಕ ಮೂಲದ ಓರ್ವ ಯಾತ್ರಾರ್ಥಿ ಬಲಿ.

ಶ್ರೀಶೈಲ ಇದೀಗ ಉದ್ವಿಗ್ನ, ಕರ್ನಾಟಕ ಮೂಲದ ಓರ್ವ ಯಾತ್ರಾರ್ಥಿ ಬಲಿ.

ಕರ್ನೂಲು: ನೆರೆಯ ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಶ್ರೀಶೈಲದಲ್ಲಿ ನಿನ್ನೆ  ತಡರಾತ್ರಿ ಗುಂಪು ಗಲಭೆ  ಹಿಂಸಾಚಾರ ನಡೆದಿದೆ. ಘಟನೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಯಾತ್ರಾರ್ಥಿ ಸಾವಿಗೀಡಾಗಿದ್ದು
ಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಸಾವಿಗೀಡಾಗಿದ್ದಾರೆ ಎಂದು ಗುರುತಿಸಲಾಗಿದೆ.

ಕರ್ನಾಟಕದಿಂದ ಪಾದಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳ ಮದ್ಯೆ  ಹಾಗೂ ಸ್ಥಳೀಯ ವ್ಯಾಪಾರಸ್ಥರ ನಡುವೆ ಕ್ಷುಲ್ಲಕ ಕಾರಣಕ್ಕೆ  ಘರ್ಷಣೆ ಪ್ರಾರಂಭವಾಗಿದ್ದು, ಘರ್ಷಣೆಯಲ್ಲಿ ಕರ್ನಾಟಕದಿಂದ ಪಾದಯಾತ್ರೆಗೆ ತೆರಳಿದ್ದ 200ಕ್ಕೂ ಹೆಚ್ಚು ವಾಹನಗಳನ್ನ ಜಕಂಗೊಳಿಸಲಾಗಿದ್ದು ಕರ್ನಾಟಕದ ಧ್ವಜವನ್ನು ಸಹ ಸುಟ್ಟು ಹಾಕಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಮೂಲ ಧರಕ್ಕಿಂತ ಹೆಚ್ಚಿನ ಧರಕ್ಕೆ ನೀರಿನ ಬಾಟಲಿ ಮಾರಾಟ ಮಾಡುತ್ತಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳೀಯ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ನೀರಿನ ಬಾಟಲಿ‌ಮಾರಾಟಮಾಡಿದ್ದ ಕರ್ನಾಟಕದ ಪಾದಯಾತ್ರಿಗಳು ಪ್ರಶ್ನಿಸಿದ್ದಕ್ಕೆ ಪ್ರಾರಂಭವಾದ ಜಗಳ ಓರ್ವನ ಜೀವ ಪಡೆಯಲು ಕಾರಣವಾಗಿದೆ.

ಸ್ಥಳೀಯ ವ್ಯಾಪಾರಿ ಎಳನೀರು ಕೊಚ್ಚುವ ಮಚ್ಚಿನಿಂದ ಬಾಗಲಕೋಟೆ ಜಿಲ್ಲೆಯ ಯುವಕನ ಮೇಲೆ ಹಲ್ಲೆ ಮಾಡಿದ್ದು ತೀರ್ವವಾಗಿ ರಕ್ತಸ್ರಾವವಾಗುತಿದ್ದ ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಆದ್ರು ಬದುಕುಳಿಯಲಿಲ್ಲ. ಇನ್ನು ಹಿಂಸಾಚಾರ ಹೆಚ್ಚಾಗುತಿದ್ದಂತೆ ಕರ್ನಾಟಕದ ಯಾತ್ರಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ, ನಂತರ ವಿಷಯ ತಿಳಿಯುತಿದ್ದಂತೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಗಲಭೆಗೆ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ನಡೆದ ಗುಂಪು ಗಲಭೆಯಲ್ಲಿ ಸ್ಥಳೀಯ ಅಂಗಡಿಗಳ ಮೇಲೂ ದಾಳಿ ನಡೆಸಲಾಗಿದ್ದು ಒಂದೆರಡು ಅಂಗಡಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯಕ್ಕೆ ಕರ್ನೂಲ್ ಎಸ್‌ಪಿ ಸುಧೀರ್ ಕುಮಾರ ರೆಡ್ಡಿ ಶ್ರೀಶೈಲದಲ್ಲಿ 144 ಸೆಕ್ಷನ್ ಜಾರಿಮಾಡಿ ಸಂಪೂರ್ಣ ಶ್ರೀಶೈಲದಲ್ಲಿ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಇನ್ನು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗೆ ಕರ್ನಾಟಕ ಮೂಲದ ಭಕ್ತಾದಿಗಳ ಸಂಖೆ ಹೆಚ್ಚು ಬಿಜಾಪುರ ಬಾಗಲಕೋಟೆ ರಾಯಚೂರು ಬಳ್ಳಾರಿ ಯಾದಗಿರಿ ಗುಲ್ಬರ್ಗ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಹಸ್ರಾರು ಭಕ್ತರನ್ನ ಹೊಂದಿರುವ ಮಲ್ಲಿಕಾರ್ಜುನ ಸ್ವಾಮಿಗೆ ಪ್ರತಿ ವರ್ಷ ಪಾದಯಾತ್ರೆ ಮಾಡುವ ಭಕ್ತರ ಸಂಖ್ಯೆ ಹೆಚ್ಚು, ಬಳ್ಳಾರಿ ರಾಯಚೂರು ಮೂಲದಿಂದ ಪಾದಯಾತ್ರೆ ಕೈಗೊಳ್ಳುವ ಭಕ್ತರ ಸಂಖ್ಯೆ ಎಷ್ಟಿರುತ್ತೆ ಎಂದರೆ, ಆಂದ್ರಪ್ರದೇಶದ ಕರ್ನೂಲು ನಗರ ದಾಟುತಿದ್ದಂತೆ ಶ್ರೀಶೈಲದ ವರೆಗೆ ರಸ್ತೆಯ ಒಂದು ಬದಿ ಪಾದಯಾತ್ರಿಗಳೇ ತುಂಬಿರುತ್ತಾರೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ವೇಗವಾಗಿ ಸಂಚರಿಸುವುದಕ್ಕೂ ಸಾಧ್ಯವಾಗದಷ್ಟು ಭಕ್ತರ ದಟ್ಟಣಿ ಈ ರಸ್ತೆಯಲ್ಲಿ ತುಂಬಿರುತ್ತೆ, ಇನ್ನು ಅದೇ ರೀತಿಯಾಗಿ ವಾಹನಗಳಲ್ಲಿ ಈ ಕ್ಷೇತ್ರಕ್ಕೆ ಬೇಟಿಕೊಡುವ ಭಕ್ತರ ಸಂಖ್ಯೆ ಕೂಡ ಅಷ್ಟೇ ಇರುವುದು ಕಂಡು ಬರುತ್ತೆ.

ಇನ್ನು ಪ್ರತಿ ವರ್ಷದ ಶಿವರಾತ್ರಿಯ ಸಂದರ್ಭದಲ್ಲಿ ಆಂದ್ರಪ್ರದೇಶದ ಭಕ್ತರು ಶ್ರೀಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ನೆರವೇರಿಸಿದರೆ, ಕರ್ನಾಟಕ ಮೂಲದ ಭಕ್ತರು ಯುಗಾದಿಯ ಸಂದರ್ಭದಲ್ಲಿ ಜಾತ್ರೆ ನೆರವೇರಿಸುವುದು ಪ್ರತಿವರ್ಷದ ಪದ್ದತಿ.ಕರ್ನಾಟಕದಿಂದಲೇ ರಥವನ್ನ ಕೊಂಡೊಯ್ಯುವ ಭಕ್ತರು ರಥೋತ್ಸವಮಾಡಿ ಮರಳುವುದು ಪ್ರತಿವರ್ಷದ ಪದ್ದತಿಯಾಗಿದೆ ಇಲ್ಲ. ಅದರಲ್ಲೂ ಕಳೆದ ಎರಡು ವರ್ಷಗಳ ಕಾಲ ಕೊರೊನ ಮಹಾಮಾರಿಯ ಹಟ್ಟಹಾಸಕ್ಕೆ ಈ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು, ಆದರೆ ಈ ವರ್ಷ ನಿಷೇಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖೆಯಲ್ಲಿ ಭಕ್ತರು ಸೇರಿದ್ದು ಕಂಡುಬಂತು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.