You are currently viewing ನ್ಯಾಯ ಬೇಡಿ ಠಾಣೆಗೆ ಬಂದ ಮಹಿಳೆಯನ್ನ ಮಂಚಕ್ಕೆ ಕರೆದ ಹೆಡ್ ಕಾನ್ಸಟೇಬಲ್ ತಲೆದಂಡ.

ನ್ಯಾಯ ಬೇಡಿ ಠಾಣೆಗೆ ಬಂದ ಮಹಿಳೆಯನ್ನ ಮಂಚಕ್ಕೆ ಕರೆದ ಹೆಡ್ ಕಾನ್ಸಟೇಬಲ್ ತಲೆದಂಡ.

ವಿಜಯನಗರ (ಹೊಸಪೇಟೆ). ಹೌದು ಇದು ಬೇಲೆಯೆ ಎದ್ದು ಹೊಲ ಮೇಯಲು ಹೋದ ಕಥೆ. ಮಹಿಳೆಯೊಬ್ಬರು ಸಂಭಂದಿಗಳ ಜೊತೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದರೆ, ಆ ಮಹಿಳೆಯನ್ನೇ ಮಂಚಕ್ಕೆ ಕರೆದು ತನ್ನ ಚಪಲ ತೀರಿಸಿಕೊಳ್ಳಲು ಹೆಡ್ ಕಾನ್ಸಟೇಬಲ್ ಒಬ್ಬ ಮುಂದಾಗಿರುವ ಘಟನೆ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಈ ನೀಚ ಕೃತ್ಯಕ್ಕೆ ಕೈ ಹಾಕಿದ ಹೆಡ್ ಕಾನ್ಸಟೇಬಲ್ ಮಾರಪ್ಪ ಇದೀಗ ಅದೇ ಠಾಣೆಯಲ್ಲಿ ಅಪರಾಧಿಯಾಗಿದ್ದಾನೆ. ದಿನಾಂಕ 19/09/2022 ರಂದು, ಸಂಭಂದಿಗಳ ಜೊತೆ ಜಗಳಮಾಡಿಕೊಂಡ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಹೋಗಿ ತಮ್ಮ ಸಂಭಂದಿಗಳ ವಿರುದ್ದ ದೂರು ನೀಡಿದ್ದಾರೆ.

ಇದಾದ ಬಳಿಕ ದಿನಾಂಕ 21/09/2022 ರಂದು ಮತ್ತೆ ಪೊಲೀಸ್ ಠಾಣೆಗೆ ಹೋಗಿ ಕೊಟ್ಟ ದೂರನ್ನ ಮರಳಿ ಪಡೆದು ಪಡೆದು, ತಮ್ಮಿಬ್ಬರ ಜಗಳವನ್ನ ರಾಜಿ ಸಂದಾನ ಮಾಡಿಕೊಂಡಿರುವುದಾಗಿ ಹೇಳಿಕೆ ಕೊಟ್ಟು ಮನೆಗೆ ಮರಳಿದ್ದಾರೆ. ಆದರೆ ದೂರಿನಲ್ಲಿ ಬರೆದುಕೊಟ್ಟಿದ್ದ ಮಹಿಳೆಯ ಪೊನ್ ನಂಬರ್ ಗೆ ಪೊನ್ ಕಾಲ್ ಮಾಡಿದ ಹೆಡ್ ಕಾನ್ಸಟೇಬಲ್ ಮಾರಪ್ಪ ಮಹಿಳೆಯನ್ನ ಹಾಸಿಗೆಗೆ ಕರೆದಿದ್ದಾನೆ. 

ಈ ವಿಷಯವನ್ನ ಮಹಿಳೆ ತನ್ನ ಮನೆಯ ಸಂಭಂದಿಗಳಿಗೆ ತಿಳಿಸಿ, ಇಂದು ದಿನಾಂಕ 22/09/2022 ರಂದು ಕೊಟ್ಟೂರು ಪೊಲೀಸ್ ಠಾಣೆಗೆ ಹೋಗಿ ಹೆಡ್ ಕಾನ್ಸಟೇಬಲ್ ಮಾರಪ್ಪನ ವಿರುದ್ದ ದೂರು ನೀಡಿದ್ದಾರೆ, ದೂರು ಪಡೆದಿರುವ ಕೊಟ್ಟೂರು ಪಿ.ಎಸ್.ಐ.ವಿಜಯ್ ಕೃಷ್ಣ ಮಾರಪ್ಪನ ವಿರುದ್ದ (ಕ್ರೈಂ. ನಂಬರ್ 183/22) ಐ.ಪಿ.ಸಿ.ಸೆಕ್ಷನ್ 354.354(A)(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿಸಿದ್ದಾರೆ.

ಪ್ರಕರಣವನ್ನ ಗಂಬೀರವಾಗಿ ಪರಿಗಣಿಸಿದ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಕೆ. ಮಾರಪ್ಪನನ್ನ ತಕ್ಷಣ ಅಮಾನತ್ತುಗೊಳಿಸಿ ತಪ್ಪು ಯಾರು ಮಾಡಿದರೂ ತಪ್ಪೇ ಅವರ ವಿರುದ್ದ ಕ್ರಮ ಜರುಗಿಸಲು ಮುಲಾಜು ಯಾಕೆ ಎಂಬ ಸಂದೇಶವನ್ನ ಜಿಲ್ಲೆಯ ಜನತೆಗೆ ಕೊಟ್ಟಿದ್ದಾರೆ. ಇತ್ತೀಚೆಗೆ ಅರುಣ್ ಕುಮಾರ್ ವಿಜಯನಗರ ಜಿಲ್ಲೆಯ ಎಸ್ಪಿ ಆಗಿ ಅಧಿಕಾರ ಸ್ವೀಕಾರಮಾಡಿಕೊಂಡ ಮೇಲೆ, ಇಂತಾ ಹಲವು ನೀಚ ಸಿಬ್ಬಂದಿಗಳ ಕೈಗೆ ಕೈಕೊಳ ಬಿದ್ದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಒಟ್ಟಿನಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಜನ ಸಾಮಾನ್ಯರಿಗೆ ಇನ್ನೂ ನಂಬಿಕೆ ಉಳಿದಿದೆ ಎಂದರೆ ಇಂತಾ ನಿಷ್ಟಾವಂತ ಅಧಿಕಾರಿಯಿಂದಲೇ ಎಂದರೆ ತಪ್ಪಾಗಲಾರದು.

ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.