You are currently viewing 1565ರಲ್ಲಿ ನಡೆದ ರಕ್ಕಸಗಿ ತಂಗಡಗಿ ಯುದ್ದದ ನಂತರ ಹಂಪಿ ಹೇಗೆ ಕಂಡಿತ್ತು ಎಂಬಂತಿದೆ ಇಂದಿನ ದೃಷ್ಯ.

1565ರಲ್ಲಿ ನಡೆದ ರಕ್ಕಸಗಿ ತಂಗಡಗಿ ಯುದ್ದದ ನಂತರ ಹಂಪಿ ಹೇಗೆ ಕಂಡಿತ್ತು ಎಂಬಂತಿದೆ ಇಂದಿನ ದೃಷ್ಯ.

ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ವಿಶ್ವ ವಿಖ್ಯಾತ ಹಂಪಿಯಲ್ಲಿ ದೇಶ ಶೇರಿದಂತೆ ಹೊರದೇಶದಿಂದ ಬರುವ ಭಕ್ತಸಮೂಹ ಇಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ತಮ್ಮ ಪಾಪ ಕರ್ಮಗಳನ್ನ ಕಳೆದುಕೊಂಡು ಹೋಗುತಿದ್ರು.

ಆದರೆ ಈ ಬಾರಿ ಈ ಕ್ಷೇತ್ರದಲ್ಲಿ ಒಂದು ರೀತಿಯ ಸ್ಮಶಾನ ಮೌನ ಆವರಿಸಿದೆ,ಕಾರಣ ಕೊವಿಡ್ ಕಂಟಕ. ಹೌದು ಇತ್ತೀಚೆಗೆ ಒಮೈಕ್ರಾನ್ ಕ್ರಿಮಿಯ ಹಟ್ಟಹಾಸಕ್ಕೆ ಬೆಚ್ಚಿ ಬಿದ್ದಿರುವ ವಿಜಯನಗರ ಜಿಲ್ಲಾಡಳಿತ ವಿಶ್ವ ವಿಖ್ಯಾತ ಹಂಪಿಯಲ್ಲಿ ಇಂದಿನಿಂದ ಒಂದು ವಾರಗಳ ಕಾಲ ನಿಷೇದಾಜ್ಞೆಯನ್ನ ಜಾರಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಸಂಪೂರ್ಣ ಹಂಪಿ ಜನಗಳಿಲ್ಲದೆ ಬಣಗುಡುತ್ತಿದೆ. ಇನ್ನು ನಾಳೆ ನಡೆಯುವ ಸಂಕ್ರಾಂತಿ ಹಬ್ಬಕ್ಕೆ ಈ ಸ್ಥಳದಲ್ಲಿ ಲಕ್ಷ ಲಕ್ಷ ಭಕ್ತ ಸಮೂಹ ಸೇರುವುದು ವಾಡಿಕೆಯಾಗಿತ್ತು.
ಅದರಲ್ಲೂ ಸ್ಥಳೀಯರಿಗಂತೂ ಸಂಕ್ರಾಂತಿ ಹಬ್ಬ ಬಂದರೆ ಎಲ್ಲಿಲ್ಲದ ಸಂಭ್ರವಾಗುತಿತ್ತು, ಆದರೆ ಕಳೆದ ಎರಡು ವರ್ಷಗಳಿಂದ ಕೊರೊನ ಮಹಾಮಾರಿ ಈ ಸಂಭ್ರಮ ಅಡ್ಡಿಯಾಗಿದೆ.
ಅದರಲ್ಲೂ ಕಳೆದ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬೆರಳೆಣಿಕೆಯಷ್ಟು ಜನಗಳಾದ್ರು ಹಂಪಿಯಲ್ಲಿ ಸುಳಿದಾಡುವುದನ್ನ ಕಂಡಿದ್ದೆವು, ಆದರೆ ಈ ಬಾರಿ ಒಬ್ಬ ಪ್ರವಾಸಿಗರೂ ಇತ್ತ ಸುಳಿಯದಂತೆ ನಿಷೇಧ ಆಜ್ಞೆಯನ್ನ ಹೊರಡಿಸಿರುವ ವಿಜಯನಗರ ಜಿಲ್ಲಾಡಳಿತ ಕೊರೊನ ನಿಯಂತ್ರಣಕ್ಕೆ ಮುಂದಾಗಿದೆ.
ನಿನ್ನೆ ಸಂಜೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಆದೇಶ ಹೊರಡಿಸುತಿದ್ದಂತೆ ಸಂಪೂರ್ಣ ಹಂಪಿಯಲ್ಲಿ ಒಬ್ಬರೇ ಒಬ್ಬರು ಹೊರಗಿನ ಭಕ್ತರು, ಪ್ರವಾಸಿಗರು ಕಾಣ ಸಿಗುತ್ತಿಲ್ಲ,
ಹಂಪಿಗೆ ಸಂಪರ್ಕ ಕಲ್ಪಿಸುವ ಕಮಲಾಪುರ ರಸ್ತೆ ಮತ್ತು ಕಡ್ಡಿರಾಂಪುರ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸ್ ಇಲಾಖೆ, ಸ್ಥಳೀಯರನ್ನ ಹೊರತುಪಡಿಸಿ ಬೇರೆ ಒಂದು ನರಪಿಳ್ಳೆಗೂ ಪ್ರವೇಶ ನೀಡುತ್ತಿಲ್ಲ, ಅದರ ಪರಿಣಾಮ ಹಂಪಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರ ರಣಬಿಸಿಲಿನ ಕುದುರೆಗಳೇ ಕಣ್ಣಿಗೆ ಕಾಣುತ್ತವೆ.

ಇನ್ನು ಈ ಹಿಂದೆ 1565ರಲ್ಲಿ ನಡೆದ ರಕ್ಕಸಗಿ ತಂಗಡಗಿ ಯುದ್ದದ ನಂತರ ಹಂಪಿ ಹೇಗಿತ್ತು ಎಂದು ಇತಿಹಾಸದ ಪುಸ್ತಕದಲ್ಲಿ ಓದಿದ್ದೆವು, ಆದರೆ ಈಗ ಆ ದೃಷ್ಯ ಹೀಗಿತ್ತು ಎಂದು ತೋರಿಸಿಕೊಟ್ಟಿದೆ_ ಕೊರೊನ ಮಹಾಮಾರಿ.

ವರದಿ..
ಸುಬಾನಿ ಪಿಂಜಾರ ವಿಜಯನಗರ.