You are currently viewing ಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿಗೆ” ಸಹಾಯ ಧನ ಯೋಜನೆ ಸೌಲಭ್ಯ ಪಡೆಯಿರಿ.

ಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿಗೆ” ಸಹಾಯ ಧನ ಯೋಜನೆ ಸೌಲಭ್ಯ ಪಡೆಯಿರಿ.

ವಿಜಯನಗರ.… ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2021-22ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿ” ಸಹಾಯಧನ ಯೋಜನೆಗೆ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಭೌದ್ದರು, ಸಿಖ್ಖರು, ಪಾರ್ಸಿಗಳು ಜನಾಂಗದ ವಿಜಯನಗರ ಜಿಲ್ಲೆಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿ” ಸಹಾಯಧನ ಯೋಜನೆ. ( ಮಹಿಳೆಯರಿಗೆ ಮಾತ್ರ ). ಈ ಯೋಜನೆಯು ಕೇವಲ 2021-22ನೇ ಸಾಲಿನ ವಿಜಯನಗರ ಜಿಲ್ಲೆಯ ಟ್ಯಾಕ್ಸಿ/ಗೂಡ್ಸ್/ಆಟೋರಿಕ್ಷಾ ಯೋಜನೆಯಲ್ಲಿ ಬಾಕಿ ಉಳಿದ 03 ಗುರಿ ಮಹಿಳೆಯರಿಗೆ ಮಾತ್ರ ಮೀಸಲಿರಿಸಲಾಗಿರುತ್ತದೆ.


ಅರ್ಜಿಗಳನ್ನು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಪಡೆದುಕೊಂಡು ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮಾ.24ರೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.


ಸಾಲಸೌಲಭ್ಯ ಪಡೆಯಲು ಈ ಅರ್ಹತೆಗಳು ಅಗತ್ಯ: ಅರ್ಜಿದಾರರು ವಿಜಯನಗರ ಜಿಲ್ಲೆಯ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದ ವರಿಗೆ ರೂ.81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ.1.03 ಲಕ್ಷ ಮೀರಿರಬಾರದು. ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45 ವರ್ಷಗಳು. ಚಾಲನಾ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಪುಸ್ತಕ ಪ್ರತಿ, ಚಾಲನಾ ಪ್ರಮಾಣ ಪತ್ರ, ವಾಹನದ ಕೋಟೇಷನ್ ಹಾಗೂ ಅರ್ಜಿದಾರರ 2 ಭಾವಚಿತ್ರಗಳು ಲಗತ್ತಿಸಬೇಕು.
ಈ ಹಿಂದೆ ನಿಗಮದ ಸೌಲಭ್ಯ ಪಡೆದವರು ಮತ್ತೇ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತ ಅಭಿವರದ್ಧಿ ನಿಗಮ ನಿಯಮಿತ ಮ.ನಂ.47/25,ನಳಂದ ಕಾಲೇಜು ಪಕ್ಕದಲ್ಲಿ ಹಳೇ ಮಾರುಕಟ್ಟೆ ರಸ್ತೆ, ವಿಜಯನಗರ ಕಾಲೋನಿ, ಕಂಟೋನ್ಮೆಂಟ್ ಬಳ್ಳಾರಿ-583104 ಅಥವಾ ದೂ:08392-294370 ಸಂಪರ್ಕಿಸಬಹುದಾಗಿದೆ.