You are currently viewing ಹಂಪಿಯಲ್ಲಿ ಜೇಮ್ಸ್ ಟೀಸರ್ ನೋಡಿದ  ವಿದೇಶಿಗರು ಆದರು ಫಿದಾ.

ಹಂಪಿಯಲ್ಲಿ ಜೇಮ್ಸ್ ಟೀಸರ್ ನೋಡಿದ  ವಿದೇಶಿಗರು ಆದರು ಫಿದಾ.

ವಿಜಯನಗರ…ಜೇಮ್ಸ್  ಚಿತ್ರ ತಂಡಕ್ಕೆ ವಿದೇಶಿಗರು ಕೂಡ ಶುಭ ಹಾರೈಕೆ ಮಾಡಿದ್ದಾರೆ.
ವಿಶ್ವ ವಿಖ್ಯಾತ ಹಂಪಿಯಲ್ಲಿ ಜೇಮ್ಸ್ ಟೀಸರ್ ನೋಡಿದ ವಿದೇಶಿಗರು ವಾವ್ಹ್ ಅಪ್ಪು ಸೂಪರ್ ಎಂದು ಕೊಂಡಾಡಿದ್ದಾರೆ. ಹಂಪಿಯ ಒಂದು ಖಾಸಗಿ ಹೊಟೆಲ್ ನಲ್ಲಿ ಕುಳಿತು ಕಿರುತೆರೆಯಲ್ಲಿ ಜೇಮ್ಸ್ ಟೀಸರ್ ವೀಕ್ಷಿಸಿದ ಇಸ್ರೇಲ್ ಪ್ರವಾಸಿಗರು ಚಿತ್ರ ತಂಡಕ್ಕೆ ಶುಭ ಹಾರೈಸಿ ತಮ್ಮದೇ ಭಾಷೆಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ನಾವು ಇಸ್ರೇಲ್ ದೇಶದ ಪ್ರವಾಸಿಗರು, ಅಪ್ಪು ತುಂಬಾ ಒಳ್ಳೆಯ ವ್ಯಕ್ತಿತ್ವ ಇರುವ ನಟ ಎಂದು ಅವರ ಬಗ್ಗೆ ಕೇಳಿದ್ದೇವು, ಆದರೆ ಅವರು ಅಭಿನಯದ ಸಿನಿಮಾ‌ ನೋಡಿರಲಿಲ್ಲ, ಇಂದು ಜೇಮ್ಸ್ ಚಿತ್ರದ ಟೇಲರ್ ನೋಡಿದ ಮೇಲೆ ಗೊತ್ತಾಯಿತು ಅವರೊಬ್ಬ ಕನ್ನಡದ ಶ್ರೇಷ್ಟ ನಟ ಎಂದು, ಇಷ್ಟು ಬೇಗ ಅವರು ಸಾವನ್ನಪ್ಪ ಬಾರದಿತ್ತು, ವಿ ಮಿಸ್ ಯು ಅಪ್ಪು, ಆಲ್ ದಿ ಬೆಸ್ಟ್ ಜೇಮ್ಸ್ ಚಿತ್ರ ತಂಡ ಎಂದು ಶುಭಹಾರೈಕೆ ಮಾಡಿದ್ದಾರೆ.

ಹೊಸಪೇಟೆಯ ಅಪ್ಪು ಅಭಿಮಾನಿ ಕಿಚಡಿ ವಿಶ್ವನಾಥ ಮತ್ತು ಅವರ ಸ್ನೇಹ ಬಳಗ ಹಂಪಿಯಲ್ಲಿ ಟೀಸರ್ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು, ಈ ಸಂದರ್ಭದಲ್ಲಿ ಟೀಸರ್ ನೋಡಿದ ವಿದೇಶಿಗರು ಟೀಸರ್ ವೀಕ್ಷಣೆಮಾಡಿ ತಮ್ಮದೇ ಭಾಷೆಯಲ್ಲಿ ಶುಭಾಷಯ ಕೋರಿ ಹಾರೈಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.