ಇಂದು ಬೆಳಗಿನಿಂದ ಪೊಲೀಸ್ ಬುಟಿನದ್ದೇ ಸದ್ದು, ವಿಜಯನಗರ ಜಿಲ್ಲೆಯಾಧ್ಯಂತ.ಈ ಮೂಲಕ ಕಿಡಿಗೇಡಿಗಳಿಗೆ  ಸೌಮ್ಯವಾಗಿ ಖಡಕ್ ಸೂಚನೆ ನೀಡಿದ ವಿಜಯನಗರ ಖಾಕಿ.

ವಿಜಯನಗರ..ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ವಿಜಯನಗರ ಜಿಲ್ಲಾ ಪೊಲೀಸರು  ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಇಂದು ಪೊಲೀಸ್ ಪಥ  ಸಂಚಲನೆ ನಡೆಸಲಾಯಿತು.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಏಕಕಾಲದಲ್ಲಿ ಪಥ ಸಂಚಲನ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,  ಹಿಜಾಬ್ V/S ಕೇಸರಿ ಶಾಲಿನ ಗಲಾಟೆಯಲ್ಲಿ ಪಾಲ್ಗೂಳ್ಳದೆ, ಕೋಮು ಸಾವರಸ್ಯ ಕಾಪಾಡುವಂತ ಸಂದೇಶವನ್ನ ಸಾರಿದರು.


ಜಿಲ್ಲೆಯ ಹೊಸಪೇಟೆ, ಹಾಗೂ ಹಗರಿಬೊಮ್ಮನ ಹಳ್ಳಿ ಮತ್ತು ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು ತಾಲೂಕು ಕೇಂದ್ರಗಳಲ್ಲಿ ಪಥ ಸಂಚಲನ ನಡೆಸಲಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ನಡೆದ ಪಥ ಸಂಕಲನದಲ್ಲಿ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಇನ್ಸ್ ಪೆಕ್ಟರ್ ಗಳಾದ ಶ್ರೀನಿವಾಸ ಎಂ, ಜಯಪ್ರಕಾಶ್, ಶ್ರೀ ನಿವಾಸ ಮೇಟಿ  ಮತ್ತು ಸಿಬ್ಬಂದಿಗಳು ನಗರದ ಸ್ಟೇಷನ್ ರಸ್ತೆ, ಮೇನ್ ಮಾಸ್ಕ್,  ರಾಮಾ ಟಾಕೀಸ್ ಮಾರ್ಗವಾಗಿ ಜಬ್ಬಲ್ ವೃತಗಳಲ್ಲಿ


ಬಸ್ ನಿಲ್ದಾಣ, ಗಾಂಧಿಚೌಕ್, ಮೇನ್ ಬಜಾರ್,  ಹಾಗೂ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಯಿತು. ಒಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಠಿಯಿಂದ ನಡೆಸಿದ ಈ ಪಥ ಸಂಚಲನ, ಕಾನೂನನ್ನ ಕೈಗೆ ತೆಗೆದುಕೊಳ್ಳುವ ಸಮಾಜ ಘಾತುಕ ಶಕ್ತಿಗಳ ಹೆಡೆಮುರಿ ಕಟ್ಟುವ ಮುನ್ಸೂಚನೆಯೂ ಇದಾಗಿತ್ತು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.