ವಿಜಯನಗರ..20/09/2021ಸರ್ಕಾರ ಬಡವರಿಗೆ ಮತ್ತು ದೀನದಲಿತರಿಗೆ ಅನುಕೂಲವಾಗಲಿ ಎಂದು ಹೊಸ ಹೊಸ ಯೋಜನೆಗಳನ್ನ ಘೋಷಣೆಮಾಡಿ ಜಾರಿಗೆ ತರಯವ ಮೂಲಕ ಬೀಗುತ್ತದೆ, ಆದರೆ ಆ ಯೋಜನೆಗಳು ಬಡವರ ಮನೆ ಬಾಗಿಲಿಗೆ ತಲುಪುತ್ತಿವೆಯೋ ಅಥವಾ ಇಲ್ಲವೊ ಎಂದು ನೋಡದೆ ಕಣ್ಣು ಮುಚ್ಚಿ ಕುಳಿತುಕೊಂಡು ಬಿಡುತ್ತದೆ, ಅದರ ಪರಿಣಾಮ ಬಡವರು ಆ ಯೋಜನೆಯನ್ನ ಪಡೆಯೊಕೆ ಪಡಬಾರದ ಕಷ್ಟ ಪಡಬೇಕಾಗಿದೆ.
ಅದರಲ್ಲೂ ಮುಪ್ಪಿನ ವಯಸ್ಸಿನಲ್ಲಿ ಮಕ್ಕಳಿಂದ ತಿರಸ್ಕೃತಗೊಂಡ ವೃದ್ದ ತಂದೆ ತಾಯಿಗಳು ಬೀದಿಯಲ್ಲಿ ಬಿಕ್ಷೆಬೇಡುವ ಪರಿಸ್ಥಿತಿಗೆ ಬಂದು ಬಿಡುತ್ತಾರೆ. ಆ ದುಸ್ಥಿತಿಯನ್ನ ತಪ್ಪಿಸುವ ಸಂಭಂದ ಸರ್ಕಾರ ವೃದ್ದಾಪ್ಯ ವೇತನವನ್ನ ಜಾರಿಗೆ ತಂದಿದೆ, ಆದರೆ ಸರ್ಕಾರ ಈ ಯೋಜನೆ ಜಾರಿಗೆ ತಂದ ಮೇಲೆ ವೃದ್ದರಿಗೆ ಬಿಕ್ಷೆಬೇಡುವ ಪರಿಸ್ಥಿತಿ ತಪ್ಪಿದೆಯಾ, ಇಲ್ಲ, ಈ ಹಿಂದೆ ಬೀದಿಯಲ್ಲಿ ಬಿಕ್ಷೆಬೇಡುತಿದ್ರು, ಆದರೆ ಈಗ ಪೋಸ್ಟ್ ಆಫೀಸ್ ಮತ್ತು ಅಲ್ಲಿನ ಅಧಿಕಾರಿಗಳನ್ನ ಬಿಕ್ಷೆಬೇಡಬೇಕಾಗಿದ ಪರಿಸ್ಥಿತಿ ಬಂದಿದೆ ಈ ವೃದ್ದರಿಗೆ, ಅರೆ ಏನಿದು ಮನಕಲಕುವ ವರದಿ ಅಂತೀರ ಇಲ್ಲಿದೆ ಸ್ಟೋರಿ.
ಹೌದು ಮುಪ್ಪಾನು ಮುಪ್ಪಾಗಿರುವ ಈ ವೃದ್ದ ಜೀವಿಗಳಿಗೆ ಕುಳಿತರೆ ಏಳುವುದಕ್ಕಾಗಲ್ಲ, ಎದ್ದರೆ ಕುಳಿತುಕೊಳ್ಳುವುದಕ್ಕಾಗಲ್ಲ, ಇಂತಾ ಪರಿಸ್ಥಿತಿಯಲ್ಲಿ ಕಳೆದ ಐದು ತಾಸಿನಿಂದ ಹೀಗೆ ಹೊಸಪೇಟೆ ಹೆಡ್ ಪೊಸ್ಟ್ ಆಫೀಸಿನ ಹಿಂಬಾಗದಲ್ಲಿ ಒಂಟೆಗಾಲಿನಲ್ಲಿ ನಿಲ್ಲಬೇಕಾಗಿದೆ ಈ ವೃದ್ದರು. ಕಾರಣ ಸರ್ಕಾರ ಕೊಡುವ ಆರು ನೂರು ರೂಪಾಯಿ ವೃದ್ಧಾಪ್ಯದ ವೇತನ ಪಡೆಯುವುದಕ್ಕೆ.
ಇವರ ಈ ಸದ್ಯದ ಪರಿಸ್ಥಿತಿಯನ್ನ ನೋಡಿದ್ರೆ ಇವರು ಪಡೆಯುವುದು ವೃದ್ಧಾಪ್ಯ ವೇತನವೋ ಅಥವಾ ವೃದ್ಧಾಪ್ಯದ ಬಿಕ್ಷೆಯೊ ಎನ್ನುವ ಅನುಮಾನ ಮೂಡುತ್ತಿದೆ.ಯಾಕೆಂದ್ರೆ ರಸ್ತೆಯಲ್ಲಿ ಇವರು ಅಯ್ಯಾ ಅಪ್ಪಾ ಎಂದು ಗೋಗರೆದರೆ ಯಾರಾದ್ರು ಕನಿಕರ ಪಟ್ಟು ಒಂದು ರೂಪಾಯಿಯೊ ಅಥವಾ ಎರಡು ರೂಪಾಯಿಯೊ ಬಿಕ್ಷೆ ಹಾಕಿ ಕಳಿಸುತ್ತಾರೆ, ಆದರೆ ಈ ಪೊಸ್ಟ್ ಆಫೀಸ್ ಅಧಿಕಾರಿಗಳು ಮಾತ್ರ ಇವರಿಗೆ ಕಿಂಚಿತ್ತು ಕನಿರ ತೋರಿ ಇವರಿಗಾಗಿ ಒಂದು ಗಂಟೆ ಕೆಲಸ ಹೆಚ್ಚುಮಾಡುವ ಮನಸ್ಸಿಲ್ಲ. ಅದರ ಪರಿಣಾಮ ಪ್ರತಿ ತಿಂಗಳು ನಾಲ್ಕೈದು ಗಂಟೆಗಳ ಕಾಲ ಹೀಗೆ ಅಂಚೆ ಕಛೇರಿಯ ಹಿಂಬಾಗದಲ್ಲಿ ನೆಲಕ್ಕೆ ಹೊರಗಿ ಕಾದು ಕುಳಿತುಕೊಳ್ಳಬೇಕಿದೆ..
ಇನ್ನು ಸರ್ಕಾರ ಕೊಡುವ ವೃದ್ಧಾಪ್ಯದ ವೇತನ ಹಾಗೂ ಅಂಗವಿಕಲರ ವೇತನ ಸೇರಿದಂತೆ ಇನ್ನಿತರ ಯೋಜನೆಗಳು ನೇರವಾಗಿ ಪಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನ ಮಾಡಿತ್ತು. ಅಂಚೆ ಕಛೇರಿಯ ಪೋಸ್ಟ್ ಮನ್ ಮನೆ ಬಾಗಿಲಿಗೆ ಹೋಗಿ ವೃದ್ದರಿಂದ ಹತ್ತೊ ಇಪ್ಪತ್ತೊ ಬಿಕ್ಷೆ ಪಡೆದು ಅವರ ವೃದ್ದಾಪ್ಯವೇತನ ಕೈಗೆ ಕೊಟ್ಟು ಬರುತಿದ್ದ. ಆದರೆ ಇತ್ತೀಚೆಗೆ ಆ ಪೊಸ್ಟ್ ಮನ್ ಈ ವೃದ್ದರ ಮನೆ ಬಾಗಿಲಿಗೆ ಹೋಗುತ್ತಿಲ್ಲ, ಬದಲಾಗಿ ಈ ವೃದ್ದರೇ ಪೋಸ್ ಆಫೀಸ್ ಬಾಗಿಲಿಗೆ ಬರುವಂತಾಗಿದೆ. ಅದು ಕೂಡ ಈ ವೃದ್ದರು ಬಂದು ನಾಲ್ಕೈದು ಗಂಟೆ ಕಾದು ಕುಳಿತರು ಅವರ ವೃದ್ಧಾಪ್ಯದ ಹಣ ಕೈ ಸೇರುವುದು ಕಷ್ಟ, ಅಂದಹಾಗೆ ನೀವೀಗ ನೋಡುತ್ತಿರುವ ಈ ದೃಷ್ಯ ಹೊಸಪೇಟೆ ನಗರದ ಗಾಂದಿ ಚೌಕ್ ಬಳಿಯ ಹೆಡ್ ಪೊಸ್ಟ್ ಆಫೀಸಿನಲ್ಲಿ ಕಂಡಿದ್ದು.
ಇಲ್ಲಿರುವ ಈ ವೃದ್ದರು, ತಮ್ಮ ವೃದ್ದಾಪ್ಯ ವೇತನ ಪಡೆಯುವ ಸಂಭಂದ ಇಂದು ಬೆಳಗ್ಗೆ ಐದು ಗಂಟೆಯಿಂದಲೇ ಕಾದು ಕುಳಿತುಕೊಂಡಿದ್ದಾರೆ, ಆದರೆ ಸಮಯಕ್ಕೆ ಸರಿಯಾಗಿ ಬಂದು ಇವರ ಕೆಲಸ ಮಾಡಬೇಕಾಗಿದ್ದ ಇಲ್ಲಿನ ಸಿಬ್ಬಂದಿಗಳು ಮಾತ್ರ ಕಣ್ಣಿಗೆ ಕಾಣಲಿಲ್ಲ. ಎಂತಾ ದುರಂತರೀ ಇದು, ಯೋಜನೆಗಳನ್ನು ಜಾರಿಗೆ ತರುವ ಸರ್ಕಾರ ತಮ್ಮ ಇಲಾಖೆಯ ಸಿಬ್ಬಂದಿಗಳ ಮೇಲೆ ಹಿಡಿತ ಸಾಧಿಸಿ, ವೃದ್ದರ ಮನೆ ಬಾಗಿಲಿಗೆ ಅವರ ವೇತನ ತಲುಪುವಂತೆ ಮಾಡಿದ್ರೆ ಯೋಜನೆ ಜಾರಿಗೆ ತಂದಿದ್ದೂ ಸಾರ್ಥಕವಾದೀತು.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ಸುಬಾನಿ ಪಿಂಜಾರ ವಿಜಯನಗರ.